ಒಂದೇ ತೆಕ್ಕೆಗೆ ಮೂರು ಹುದ್ದೆ : ನಗರದ ಅಭಿವೃದ್ಧಿಯಲ್ಲಿ ಕುಂಟಿತ ! ?

0
45

ಒಂದೇ ತೆಕ್ಕೆಗೆ ಮೂರು ಹುದ್ದೆ !

ನಗರದ ಅಭಿವೃದ್ಧಿಯಲ್ಲಿ ಕುಂಟಿತ  ?

ಮಾಲತೇಶ ಮಟಿಗೇರ

ಬೆಳಗಾವಿ: ರಾಜ್ಯದಲ್ಲಿಯೇ ಕುಂದಾನಗರಿ ಅತೀ ದೊಡ್ಡ ಜಿಲ್ಲೆಯಾಗಿದ್ದು, ಅಭಿವೃದ್ಧಿ ಕೆಲಸಗಳಲ್ಲಿ ನಿಗಾ ವಹಿಸುವುದು ಕಷ್ಟಸಾಧ್ಯ. ಇದರ ಮಧ್ಯೆ ಪಾಲಿಕೆ ಆಯಕ್ತ, ಸ್ಮಾರ್ಟ್ ಸಿಟಿ ಎಂಡಿ ಹಾಗೂ ಅಪರ ಜಿಲ್ಲಾಧಿಕಾರಿ, ಈ ಮೂರು ಅತೀ ದೊಡ್ಡ ಹುದ್ದೆಗಳನ್ನು ರಾಜ್ಯ ಸರ್ಕಾರ ಒಂದೇ ಅಧಿಕಾರಿಗೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿಯಾಗಿದೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಕಾಡುತ್ತಿದೆ.

ಬೆಳಗಾವಿ ಜಿಲ್ಲೆಯ ಮಹಾನಗರ ಪಾಲಿಕೆಯು ಪೌರಕಾರ್ಮಿಕರ ವೇತನ , ಕಸದ ನಿರ್ವಹಣೆ , ಭ್ರಷ್ಟಾಚಾರ ದ ಆರೋಪಗಳ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ. ಈ ಎಲ್ಲ ಸಮಸ್ಯೆ ಗಳನ್ನು ಎದುರಿಸಬೇಕಾದ ಪಾಲಿಕೆ ಆಯಕ್ತ ಶಶಿಧರ ಕುರೇರ ಅವರಿಗೆ ಸ್ಮಾರ್ಟ್ ಸಿಟಿ ಎಂಡಿ ಹಾಗೂ ಅಪರ ಜಿಲ್ಲಾಧಿಕಾರಿ ಹುದ್ದೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿಯಾಗಿದೆ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಇನ್ನೊಂದಡೇ ನಾಲ್ಕು ವರ್ಷಗಳ ಹಿಂದೆ ಬೆಳಗಾವಿ ಸ್ಮಾರ್ಟ್ ಸಿಟಿ ಗೆ ಆಯ್ಕೆ ಯಾಗಿದ್ದರು ಸಹ, ಒಂದು ಕಾರ್ಯವೂ ಸಹ ಪೂರ್ಣಗೊಳ್ಳದೆ ಹಲವಾರು ಅಡೆತಡೆಗಳು ಎದುರಾಗಿವೆ. ಅಲ್ಲದೆ ಆರೋಪಗಳನ್ನು ಸಹ ಎದುರಿಸುತ್ತಿದೆ. ಇವೇಲ್ಲವನ್ನು ಒಬ್ಬ ಅಧಿಕಾರಿಯೇ ನಿರ್ವಹಣೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಕಾಡುತ್ತಿವೆ.

ಅಭಿವೃದ್ಧಿ ಕುಂಟಿತ: ಮಹಾನಗರ ಪಾಲಿಕೆಯ ಆಯುಕ್ತ ಶಶಿಧರ ಕುರೇರಗೆ ಮೂರು ಉನ್ನತ ಹುದ್ದೆಗೆ ಕೆಲ ದಿನಗಳ ಮಟ್ಟಿಗೆ ರಾಜ್ಯ ಸರ್ಕಾರ ನಿರ್ವಹಣೆ ಮಾಡಲು ನೇಮಕ ಮಾಡಿರುವುದು ಜಿಲ್ಲೆಯ ಅಭಿವೃದ್ಧಿ ಕುಂಟಿತಕ್ಕೆ ಕಾರಣವಾಗಿದೆ. ಸ್ಮಾರ್ಟ್ ಸಿಟಿ ಎಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜಿಯಾವುಲ್ಲಾ ಕಾರಣಾಂತರದಿಂದ ಒಂದು ತಿಂಗಳು ರಜೆ ಹಿನ್ನೆಲೆ ಹಾಗೂ ಅಪರ ಜಿಲ್ಲಾಧಿಕಾರಿ ಬೂದೆಪ್ಪ ಹತ್ತು ದಿನಗಳ ರಜೆ ಇರುವ ಕಾರಣ ರಾಜ್ಯ ಸರ್ಕಾರ ಕುರೇರ ಹೆಗಲಿಗೆ ಅಧಿಕಾರ ನೀಡಿದೆ. ಆದರೆ ಒಂದೇ ಅಧಿಕಾರಿಗೆ ಮೂರು ಹುದ್ದೆಯ ಮೇಲೆ ನಿಗಾ ಇಡಲು ಸಾಧ್ಯವಾಗದೆ ಅಭಿವೃದ್ಧಿ ಕುಂಟಿತ ಎಂಬ ಪ್ರಶ್ನೆÃ ಮೂಡುತ್ತಿದೆ.

ಸಾರ್ವನಿಕ, ಅಧಿಕಾರಿಗಳ ಅಲೆದಾಟ: ಪಾಲಿಕೆ ಆಯುಕ್ತ ಕುರೇರ ಮಹಾನಗರ ಪಾಲಿಕೆಯಲ್ಲಿ ಇರುವ ಕಾರಣದಿಂದ ಜಿಲ್ಲಾಧಿಕಾರಿಯಲ್ಲಿನ ಅಪರ ಜಿಲ್ಲಾಧಿಕಾರಿ ಕರ್ಚಿ ಹಾಗೂ ಸ್ಮಾರ್ಟ್ ಸಿಟಿ ಎಂಡಿ ಕುರ್ಚಿ ಕಾಲಿ ಇರುವುದರಿಂದ ಸಾರ್ವಜನಿಕ ರು ಹಾಗೂ ಅಧಿಕಾರಿಗಳ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಪ್ರತಿಯೊಂದು ಸಹಿಗೊಸ್ಕರ ಪಾಲಿಕೆತ್ತ ದೌಡಾಯಿಸಬೇಕಾಗಿದೆ.

ಒಟ್ಟಿನಲ್ಲಿ ಮೂರು ಜಿಲ್ಲೆ ಉನ್ನತ ಹುದ್ದೆ ಗಳನ್ನು ಪಾಲಿಕೆಯ ಆಯಕ್ತರ ತೆಕ್ಕೆಗೆ ರಾಜ್ಯ ಸರ್ಕಾರ ನೀಡಿರುವುದು ಜಿಲ್ಲೆಯ ಅಭಿವೃದ್ಧಿ ಹಿನ್ನಡೆಗೆ ಕಾರಣವಾಗಿದೆ. ಇನ್ನಾದರು ರಾಜ್ಯ ಸರ್ಕಾರ ನಗರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಹುದ್ದೆಯನ್ನು ನೀಡುವ ಅನಿವಾರ್ಯತೆ ಇದೆ.

=====ಬಾಕ್ಸ್======

ಪೋನ್ ಕರೆಗೂ ಸಿಗದ ಕುರೇರ

ಮಹಾನಗರ ಪಾಲಿಕೆ ಆಯುಕ್ತ, ಸ್ಮಾರ್ಟ್ಸಿಟಿ ಎಂಡಿ ಹಾಗೂ ಅಪರ ಜಿಲ್ಲಾಧಿಕಾರಿ ಮೂರು ಹುದ್ದೆಗಳನ್ನು ಹೆಗಲಿಗೆ ತೆಗೆದುಕೊಂಡಿರುವ ಶಶಿಧರ ಕುರೇರ ತಮ್ಮ ಕೆಲಸದ ಮಧ್ಯೆ ಪೋನ್ ಕರೆ ಸ್ವಿÃಕರಿಸುತ್ತಿಲ್ಲ. ಇನ್ನೂ ಕಚೇರಿಗೆ ತೆರಳಿದರೆ ಪೌರಕಾರ್ಮಿಕರ ಸಮಸ್ಯೆ, ಸಭೆಯಲ್ಲಿ, ಪಾಲಿಕೆ ಕಾಮಗಾರಿ ಚಾಲನೆ ಸೇರಿದಂತೆ ಪುಲ್ ಬ್ಯೂಜಿಯಾಗಿದ್ದಾರೆ.

loading...