ಒಂದೇ ವರ್ಷದಲ್ಲೇ ಬುಡಾಗೆ ಹೈಟೆಕ್ ಸ್ಪರ್ಷ ನೀಡಿದ ಅಧ್ಯಕ್ಷ ಘೂಳಪ್ಪ

0
59

 

ಬೆಳಗಾವಿ
ಘೂಳಪ್ಪ ಹೊಸಮನಿ ಅವರು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ) ಅಧ್ಯಕ್ಷರಾಗಿ ಜ.೧೦ ಕ್ಕೆ ಭರ್ತಿ ಒಂದು ವರ್ಷ. ಈ ಅಲ್ಪಾವಧಿಯಲ್ಲಿ ಅವರು ಬುಡಾ ಮೂಲಕ ಬೆಳಗಾವಿಯ ಚಹರೆಯನ್ನೇ ಬದಲಿಸಿದ್ದಾರೆ.

ಬೆಳಗಾವಿ ಕರ್ನಾಟಕದ ದ್ವಿತೀಯ ಸ್ತರದ ದೊಡ್ಡ ನಗರ. ಎರಡನೇ ರಾಜಧಾನಿಯೂ ಹೌದು. ವಿಪುಲ ಸಂಪನ್ಮೂಲಗಳನ್ನು ಈ ನಗರ ಹೊಂದಿದ್ದರೂ ಸದ್ಭಳಕೆಯಾಗಿರಲಿಲ್ಲ.

ಅದರಲ್ಲೂ ಬೆಳಗಾವಿ ಬುಡಾ ಅಭಿವೃದ್ಧಿ ನಿಂತ ನೀರಾಗಿತ್ತು. ಅಭಿವೃದ್ಧಿ ಎನ್ನುವುದು ಕುಂಠಿತವಾಗಿತ್ತು. ಇದನ್ನು ಮನಗಂಡ ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಅಭಿವೃದ್ಧಿ ಚಿತ್ರಣಕ್ಕೆ ಹೊಸಸ್ಪರ್ಶ ನೀಡಲು ಮುಂದಾದರು. ಇದರಿಂದಾಗಿ ಇಂದು ಬೆಳಗಾವಿ ಬುಡಾದಿಂದ ಅಭಿವೃದ್ಧಿ ಕಾರ್ಯಗಳಿಗೆ ವೇಗೋತ್ಕರ್ಷ ಸಿಕ್ಕಿದೆ.

ಮನೆ, ರಸ್ತೆ, ಉದ್ಯಾನ, ಚರಂಡಿ ಸೇರಿದಂತೆ ಸಮಗ್ರ ಮೂಲಭೂತ ಅವಶ್ಯಕತೆಗಳಿಗಿಂದು ಬುಡಾ ತಕ್ಷಣ ಸ್ಪಂದಿಸುತ್ತಿದೆ. ಇದಕ್ಕೆ ಕಾರಣ ಘೂಳಪ್ಪ ಹೊಸಮನಿಯವರ ಸಮರ್ಥ ನಾಯಕತ್ವ. ಒಟ್ಟಾರೆ, ಇಡೀ ಬುಡಾ ಇಂದು ಮೈ ಕೊಡವಿಕೊಂಡು ಮೇಲೇಳಲು ಘೂಳಪ್ಪ ಹೊಸಮನಿಯವರ ಚಲನಶೀಲ ಹಾಗೂ ಉತ್ಸಾಹಿ ನಾಯಕತ್ವ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

*ಅಂದಾಜು 1234 ಎಕರೆ ಜಮೀನಿನಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ದಿಂದ ಘೂಳಪ್ಪ ಹೊಸಮನಿ ಅವರ ಅಧ್ಯಕ್ಷರಾದ ನಂತರ ಕೈಗೆತ್ತಿಕೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ವಿವರಗಳು*
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಮಾರು ರೂ .165.00 ಕೋಟಿ ವೆಚ್ಚದಲ್ಲಿ ಕಣಬರ್ಗಿ ಗ್ರಾಮದ 160 ಎಕರೆ -10 ಗುಂಟೆ -14 ಅಣೆ ಕ್ಷೇತ್ರದ ವಿಸ್ತೀರ್ಣದಲ್ಲಿ ಹೊಸ ಬಡಾವಣೆ ನಿರ್ಮಿಸಲು ಉದ್ದೇಶಿಸಿಲಾಗಿರುತ್ತದೆ.
ಯೋಜನೆ ಸಂಖ್ಯೆ -61 ಹೊಸ ಬಡಾವಣೆಗೆ ಈಗಾಗಲೇ ಸರಕಾರದಿಂದ ಅನುಮೋದನೆ ನೀಡಲಾಗುತ್ತಿದೆ.
ಈ ಯೋಜನೆಯಲ್ಲಿ ವಿವಿಧ ಅಳತೆಯ ಜಿ-3 ಮಾದರಿಯ ನಿವೇಶನಗಳನ್ನು ರೂಪಿಸಲು ಉದ್ದೇಶಿಸಿಲಾಗಿದೆ ಹಾಗೂ ಒಟ್ಟು 24 ಎಕರೆ -20 ಗುಂಟೆ ವಿಸ್ತೀರ್ಣದ 2760 ವಿವಿಧ ಅಳತೆಯ ಮನೆಗಳ ಒಟ್ಟು ಸಂಕೀರ್ಣಗಳ ಸಮುಚ್ಚಯ ನಿರ್ಮಿಸಲು ಉದ್ದೇಶಿಸಲಾಗಿದೆ.
ಯೋಜನೆಗೆ ಪ್ರತಿ ಮನೆಗೆ ಒಂದರಂತೆ ರೂ . 9,65,000 / – ಗಳಂತೆ ಒಟ್ಟು ರೂ. 350 ಕೋಟಿ ವೆಚ್ಚದ ಮೊತ್ತವನ್ನು ಅಂದಾಜಿಸಲಾಗಿದೆ.
ಹಾಕಿ ಇಂಡಿಯಾ ಬೆಳಗಾವಿ ಇವರಿಗೆ ಇಂಟರನ್ಯಾಷನಲ್ ಎಸ್ಪಟರ್ಫ ಹಾಕಿ ಮೈದಾನವನ್ನು ಅಂದಾಜು ರೂ. 300.00 ಕೋಟಿ ವೆಚ್ಚದಲ್ಲಿ ಅಭಿವೃಪಡಿಸಲು ಪ್ರಾಧಿಕಾರದಿಂದ ಯೋಜನೆ ಸಂಖ್ಯೆ 35 + 43 + 43 ಎ ರಾಮತೀರ್ಥ ನಗರದಲ್ಲಿಯ ಕಣಬರ್ಗಿ ಗ್ರಾಮದ ರಿ.ಸ.ನಂ. 623 ಮತ್ತು 624 ರಲ್ಲಿಯ ಸುಮಾರು 40000 ಚ.ಮೀ ಖುಲ್ಲಾ ಜಾಗೆಯಲ್ಲಿ ನೀಡಲಾಗಿದೆ .
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ರೂ. 2863.50 ಅಂದಾಜು ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರಕಾರದಿಂದ ಅನುಮೋದನೆ ನೀಡಲಾಗಿದ್ದು, ಕಾಮಗಾರಿಗಳ ಅನುಷ್ಠಾನಕ್ಕಾಗಿ ಟೆಂಡರ್ ಕರೆಯಲಾಗಿದೆ.
ಬೆಳಗಾವಿ ನಗರದ ಶಿವಾಜಿ ಉದ್ಯಾನವನದಲ್ಲಿ ಸುಮಾರು ರೂ . 5.00 ಕೋಟಿ ಅಂದಾಜು ವೆಚ್ಚದಲ್ಲಿ ಶಿವ ಚರಿತ್ರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ .

ಬೆಳಗಾವಿ ನಗರದಲ್ಲಿ ಸುಮಾರು ರೂ. 5.00 ಕೋಟಿ ಅಂದಾಜು ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿಗೊಳಿಸಲಾಗುತ್ತಿದೆ.ಪ್ರಾಧಿಕಾರದಿಂದ ನಿರ್ಮಿಸಲಾದ ಯೋಜನ ಸಂಖ್ಯೆ 5 ಜಿ ಶ್ರೀ ಎಚ್ ಕುಮಾರಸ್ವಾಮಿ ಬಡಾವಣೆಯಲ್ಲಿ ರೂ.500 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ. ಶೀಘ್ರದಲ್ಲಿ ಬಡಾವಣೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಲಾಗುವುದು. ಪ್ರಾಧಿಕಾರದ ಯೋಜನೆ ಸಂಖ್ಯೆ 35 + 43 ++ 43 ಎ ರಾಮತೀರ್ಥ ನಗರ ಬಡಾವಣೆಯಲ್ಲಿ ರೂ.2950.50 ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಕರೆದಿದ್ದು ಹಾಗೂ ಆದಷ್ಟು ಬೇಗನೆ ಪೂರ್ತಿಗೊಳಿಸಲಾಗುವುದು. ಬಡಾವಣೆಯಲ್ಲಿ ರೂ.550.00 ಲಕ್ಷದ ಅಂದಾಜು ವೆಚ್ಚದ ಸುಸಜ್ಜಿತ ಸಮುದಾಯ ಭವನ ಮತ್ತು ರೂ. 300.00 ಲಕ್ಷದ ಅಂದಾಜು ವೆಚ್ಚದ ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
———
ಕೋಟ್:

ಬೆಳಗಾವಿ ಬುಡಾ ಅಧ್ಯಕ್ಷನಾಗಿ ಒಂದು ವರ್ಷ ಕಳೆದಿದ್ದು, ಈ ಅವಧಿಯಲ್ಲಿ ಬುಡಾದಿಂದ ಅಭಿವೃದ್ಧಿ ಕೆಲಸಗಳು ನಾಗಾಲೋಟದಿಂದ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕನಸಿನಂತೆ ೨೦೨೨ ಕ್ಕೆ ಎಲ್ಲರಿಗೂ ಸೂರು ಒದಗಿಸಲಾಗುತ್ತದೆ. ಬರುವ ದಿನಗಳಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವ ಉದ್ದೇಶ ಇದೆ. ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ಬುಡಾ ಅನುಪಮ ಕಾಣಿಕೆ ನೀಡಲಿದ್ದು, ಒಟ್ಟಾರೆ, ಬೆಳಗಾವಿಗೆ ಹೊಸ ರೂಪ ನೀಡಲಾಗುವುದು.
*ಘೂಳಪ್ಪ ಹೊಸಮನಿ, ಅಧ್ಯಕ್ಷ, ಬುಡಾ ಬೆಳಗಾವಿ*

loading...