ಒತ್ತಡದಲ್ಲಿ ಸ್ಪೀಕರ್ ರಮೇಶ ಕುಮಾರ : ರೈಲ್ವೆ ಸಚಿವ ಅಂಗಡಿ

0
36

ಬೆಳಗಾವಿ : ಸ್ಪೀಕರ ರಮೇಶಕುಮಾರ ಯಾರದ್ದೋ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು.ಅವರಿಗೆ ನಿಷ್ಪಕ್ಷಪಾತ ವಾಗಿ ಕೆಲಸ ಮಾಡಲು ಭಗವಂತ ಶಕ್ತಿ ಕೊಡಲಿ ಎಂದು ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ  ಮಾತಿನಿಂದಲೇ ತಿವಿದಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿ, ದೋಸ್ತಿ ಸರಕಾರದ 14ತಿಂಗಳ ಆಡಳಿತದಿಂದ ಬೇಸತ್ತಿದ್ದಾರೆ.ಅದಕ್ಕೆ ಮೈತ್ರಿಯನ್ನು ಜನರು ತಿರಸ್ಕಾರ ಮಾಡಿದ್ದಾರೆ. ದೇವರ ಕೃಪೆಯಿಂದ ಬಿಎಸ್ ವೈ ನೇತೃತ್ವದ ಸರಕಾರ ರಚನೆಯಾಗಿದೆ. ಒಳ್ಳೆಯ ಆಡಳಿತ ನೀಡಲು ಹೈ ಕಮಾಂಡ್ ಆದೇಶ ನೀಡಿದೆ. ಬಡವರ, ಸಾಮಾನ್ಯರ ಜನರಿಗೆ ಅನೂಕುಲಕರ ಆಡಳಿತ ನೀಡಲಿದ್ದಾರೆ.
ಸೋಮವಾರ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ ಎಂದರು.

ಇನ್ನು ಕೇಸರಿ ಪಡೆಯಲ್ಲಿ ಸಚಿವ ಸಂಪುಟದಲ್ಲಿ 18ಶಾಸಕರನ್ನು ಹೊಂದಿರುವ ಜಿಲ್ಲೆಯಾಗಿರುವ ಬೆಳಗಾವಿಗೆ ನಾಲ್ಕು ಸಚಿವ ಸ್ಥಾನ ನೀಡಬೇಕು. ನಾನು ಸಹ ಸಿಗಲಿ ಎಂದು ಭಯಸುತ್ತಿದ್ದೆನೆ ಎಂದು ಹೇಳಿದ್ದಾರೆ‌.

loading...