ಒತ್ತುವರಿ ನಾಲಾ ತೆರವಿಗೆ ಅಗತ್ಯ ಕ್ರಮ : ಶಾಸಕ ಅನಿಲ ಬೆನಕೆ

0
71

ಒತ್ತುವರಿ ನಾಲಾ ತೆರವಿಗೆ ಅಗತ್ಯ ಕ್ರಮ : ಶಾಸಕ ಅನಿಲ ಬೆನಕೆ

ಬೆಳಗಾವಿ : ಒತ್ತುವರಿಯಾಗಿರುವ ನಾಲಾ ತೆರವುಗೊಳಿಸುವುದರ ಬಗ್ಗೆ ಶಾಸಕ ಅಭಯ ಪಾಟೀಲ ಜತೆ ಮಾತನಾಡಿದ್ದು, ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಅನಿಲ‌ ಬೆನಕೆ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾಲಾ ಒತ್ತುವರಿ ವಿಚಾರವಾಗಿ ದಕ್ಷಿಣ ಶಾಸಕ ಅಭಯ ಪಾಟೀಲರೊಂದಿಗೆ ಮಾತನಾಡಿದ್ದೆನೆ. ಆದಷ್ಟು ಬೇಗ ಒತ್ತುವರಿಯಾಗಿರುವ ಲಾನಾ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಅದೇ ರೀತಿ ಪ್ರವಾಹದಿಂದ ಜನರು ನೆಲೆಯನ್ನೇ ಕಳೆದುಕೊಂಡಿದ್ದಾರೆ. ಅಂತಹ ನೆರೆ ಸಂತ್ರಸ್ತರಿಗೆ ಸಹಾಯ ಆಗಲಿ ಎಂಬ ಉದ್ದೇಶದಿಂದ ನನ್ನ 2 ತಿಂಗಳ ವೇತನವಾದ 74 ಸಾವಿರ ರೂ. ಡಿಡಿ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಾಕಲಾಗುತ್ತಿದೆ ಎಂದರು.

ಉತ್ತರ ಕ್ಷೇತ್ರದಲ್ಲಿ ಮಳೆಯಿಂದ ದಾಖಲೆ ಪ್ರಕಾರ 150 ಮನೆಗಳಯ ನೆಲಕಚ್ಚಿವೆ ಎಂದು ಹೇಳಲಾಗುತ್ತಿದೆ. ಆದರೆ ನಮ್ಮ ಮಾಹಿತಿ ಪ್ರಕಾರವಾಗಿ 300 ಮನೆಗಳು ಉರಳಿವೆ.ಇನ್ನು ಎರಡು ದಿನಗಳ ಬಳಿಕ ಮತ್ತೆ ಸರ್ವೆ ಮಾಡಲಾಗುತ್ತದೆ ಎಂದು ಹೇಳಿದರು. ಅಲ್ಲದೆ ಮಳೆ ಹಾನಿಯಿಂದ ಉತ್ತರ ಕ್ಷೇತ್ರದಲ್ಲಿ ವ್ಯವಸ್ಥೆಗಳ ಸುಧಾರಣೆಗೆ 100 ಕೋಟಿ ರೂ. ಅನುದಾನ ನೀಡುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದೇನೆ ಎಂದರು.

loading...