ಒಮಾನ್ ಹಡಗಿನ ಮೇಲೆ ದಾಳಿ; ಅಮೆರಿಕದ ಹೇಳಿಕೆಗೆ ಸೌದಿ ಸಹಮತ

0
11

ರಿಯಾದ್, = ಒಮಾನ್ ಕೊಲ್ಲಿಯಲ್ಲಿ ತೈಲ ತುಂಬಿದ ಹಡಗಿನ ಮೇಲೆ ನಡೆದ ದಾಳಿಗೆ ಇರಾನ್ ಕಾರಣ ಎಂಬ ಅಮೆರಿಕದ ಹೇಳಿಕೆಯನ್ನು ಸೌದಿ ಅರೇಬಿಯಾ ಕೂಡ ಒಪ್ಪಲಿದೆ ಎಂದು ಸೌದಿ ವಿದೇಶಾಂಗ ಸಚಿವ ಆದಿಲ್ ಅಲ್ ಜುಬೈರ್ ಹೇಳಿದ್ದಾರೆ
ಗುರುವಾರ ಗಲ್ಫ್ ಕೊಲ್ಲಿಯಲ್ಲಿ ಎರಡು ತೈಲ ಟ್ಯಾಂಕರ್ ಗಳು ಸ್ಫೋಟಗೊಂಡಿದ್ದವು. ಆದರೆ ಸ್ಫೋಟಕ್ಕೆ ಕಾರಣ ಇದುವರೆಗೆ ತಿಳಿದುಬಂದಿಲ್ಲ. ಆದರೆ ಗುಪ್ತಚರ ಮಾಹಿತಿ ಪ್ರಕಾರ ಈ ದಾಳಿಯ ಹಿಂದೆ ಇರಾನ್‍ ಇದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಆರೋಪಿಸಿದ್ದಾರೆ.
“ಒಮಾನ್ ಕೊಲ್ಲಿಯಲ್ಲಿ ಸಂಭವಿಸಿದ ದಾಳಿಗೆ ಇಸ್ಲಾಮಿಕ್ ಗಣರಾಜ್ಯ ಇರಾನ್ ಕಾರಣ ಎಂದು ಅಮೆರಿಕ ಭಾವಿಸುತ್ತದೆ” ಎಂದು ಪಾಂಪಿಯೊ ಗುರುವಾರ ಹೇಳಿದ್ದರು.

“ಅಮೆರಿಕ ವಿದೇಶಾಂಗ ಕಾರ್ಯದರ್ಶಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಲು ರಿಯಾದ್‍ಗೆ ಯಾವುದೇ ಕಾರಣವಿಲ್ಲ, ನಾವು ಅವರ ನಿಲುವನ್ನು ಒಪ್ಪುತ್ತೇವೆ, ತನಿಖೆ ಮುಂದುವರಿಯಲಿದೆ ಮತ್ತು ಸಾಕ್ಷ್ಯಗಳು ಜಗತ್ತಿಗೆ ಲಭ್ಯವಾಗಲಿವೆ, ಅಮೆರಿಕ ಈ ಪ್ರಕರಣವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕೊಂಡೊಯ್ಯಲಿದೆ, ಇದನ್ನು ತೀರ್ಮಾನಿಸಿದ ನಂತರ ಅದು ಸ್ಪಷ್ಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ “ಎಂದು ಜುಬೀರ್ ಸಿಎನ್‌ಎನ್‌ಗೆ ತಿಳಿಸಿದರು.

ಇಂತಹ ಕೃತ್ಯಗಳನ್ನು ಎಸಗಿದ ಇತಿಹಾಸ ಇರಾನ್‍ಗೆ ಇದೆ ಎಂದು ಅವರು ಆರೋಪಿಸಿದರು.

ಹಡಗುಗಳ ಮೇಲಿನ ದಾಳಿಯು ಇರಾನ್‍ನಿಂದ “ಉಲ್ಬಣಗೊಳ್ಳುವ ಉದ್ವಿಗ್ನತೆ” ಯ “ಕಾರ್ಯಾಚರಣೆಯ” ಮುಂದುವರಿದ ಭಾಗವಾಗಿದೆ ಮತ್ತು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯಾಗಿದೆ ಎಂದು ಪಾಂಪಿಯೋ ಹೇಳಿದರು.
ಈ ದಾಳಿಯಲ್ಲಿ ಇರಾನ್‍ನ ಕೈವಾಡ ವಿದೆ ಎಂಬ ಆರೋಪವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಮೆರಿಕ ರಾಯಭಾರಿಗಳು ಒತ್ತಿ ಹೇಳಿದ್ದಾರೆ

loading...