ಕಂದ್ಲಿ ಗ್ರಾಮದಲ್ಲಿ ಗುಂಡನ್ನು ಹಾರಿಸಿ ಕೊಲೆಗೆ ಯತ್ನ

0
53

ಕನ್ನಡಮ್ಮ ಸುದ್ದಿ-ಕಲಘಟಗಿ : ತಾಲೂಕಿನ ಕಂದ್ಲಿ ಗ್ರಾಮದ ಬಳಿಲ್ಲಿ ಇಂದು ಮುಂಜಾನೆ ಹೊಲದಿಂದ ಜಾನುವಾರುಗಳಿಗೆ ಹುಲ್ಲಿನ ಹೊರೆಯನ್ನು ಹೊತ್ತು ತರುತಿದ್ದ ಮಂಜುನಾಥ ಚನ್ನಪ್ಪ ಹೊಸಮನಿ(29)ಎಂಬುವನಿಗೆ ಗುಂಡನ್ನು ಹಾರಿಸಿ ಕೊಲೆಯನ್ನು ಮಾಡಲು ಯತ್ನಿಸಿದ ಪ್ರಕರಣವು ಇಲ್ಲಿನ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.
ತಾಲೂಕಿನ ಸೂಳಿಕಟ್ಟಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಕಂದ್ಲಿ ಗ್ರಾಮದಲ್ಲಿ ಹಿಂದಿನ ಗ್ರಾ.ಪಂ.ಚುನಾವಣೆಯ ಹಳೆಯ ಧ್ವೆಷದಿಂದಾಗಿ ಅದೆಗ್ರಾಮದ ಮಾಜಿ ಗ್ರಾ.ಪಂ.ಅಧ್ಯಕ್ಷ ಮಂಜುನಾಥ ಸಾತಪ್ಪ ಟೂಸುರ ಎಂಬುವನು ಗ್ರಾಮದ ದಾವಲಸಾಬ್ ಗುಂಜಾವತಿ,ದೆಮನಿ ಜೈವಂತ ಕೊಳ್ಳದ,ಹಾಲಪ್ಪ ಟೂಸುರ ಎಂಬುವರು ಬುಧವಾರ ಮುಂಜಾನೆ 7ಗಂಟೆಯ ವೇಳೆಯಲ್ಲಿ ಎಂದಿನಂತೆ ಹೊಲದಿಂದ ಮೆವು ಹೊತ್ತು ತರುತ್ತಿರುವ ಗ್ರಾಮದ ಕೂಗಳತೆಯ ದೂರದಲ್ಲಿ ನನ್ನ ಅಣ್ಣ ಮಂಜುನಾಥನಿಗೆ ಎರಡುಬಾರಿ ಗುಂಡು ಹಾರಿಸಿದ್ದಲ್ಲದೆ ಮಾರಕಾಸ್ತ್ರಗಳಿಂದ ಕೊಲೆಗೆ ಮಾಡಲು ಮುಂದಾಗಿದ್ದಾರೆಂದು ಮಂಜುನಾಥ ಹೊಸಮನಿ ಸಹೊದರ ಹುಲಿಗೆಪ್ಪ ಹೊಸಮನಿ ಅವರು ಪೋಲಿಸ್ ಠಾಣೆಗೆ ನಿಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇಂದು ಮುಂಜಾನೆ ಗುಂಡಿನ ಸದ್ದಿನ ಸುದ್ದಿಯು ತಿಳಿಯುತ್ತಿದ್ದಂತೆ ಮಂಜುನಾಥ ಹೊಸಮನಿಯವರ ಕುಟುಂಬದವರು,ಸ್ಥಳಿಯರು 108 ಆರೋಗ್ಯ ಸೇವೆಯ ವಾಹನದಿಂದ ತಾಲೂಕಾ ಸರಕಾರಿ ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸಗಾಗಿ ದಾಖಲಿಸಿದ್ದು ನಂತರ ಹುಬ್ಬಳ್ಳಿಯ ಕಿಮ್ಸಗೆ ದಾಖಲಿಸಲಾಗಿದೆ ಎಂದು ಆತನ ಕುಟುಂಬದವರು ಪತ್ರಿಕೆಯ ಮುಂದೆ ತಿಳಿಸಿದರು.
ಪ್ರಕರಣ ದಾಖÀಲಿಸಿಕೊಂಡಿರುವ ಪೋಲಿಸ್ ಇನೆಸ್ಪೆಕ್ಟರ್ ಶ್ರೀನಿವಾಸ ಹಂಡಾ ಅವರು ಸ್ಥಳಕ್ಕೆ ಬೆಟಿ ನಿಡಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ತನಿಖೆಯನ್ನು ನಡೆಸುತ್ತಿದ್ದಾರೆ.

loading...

LEAVE A REPLY

Please enter your comment!
Please enter your name here