ಕಜಕಿಸ್ತಾನದ ಸೇನಾ ಗೋದಾಮಿನಲ್ಲಿ ಸ್ಫೋಟ; 160 ಜನರಿಗೆ ಗಾಯ

0
5

ನೂರ್ ಸುಲ್ತಾನ್, : ದಕ್ಷಿಣ ಕಜಕಿಸ್ತಾನದ ಸೇನಾ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮ 160ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಅವರಲ್ಲಿ 15 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಅವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಜಕ್‌ ಆರೋಗ್ಯ ಸಚಿವ ಯೆಲ್ಜಾನ್ ಬಿರ್ತಾನೋವ್ ತಿಳಿಸಿದ್ದಾರೆ.ಇದಕ್ಕೂ ಮೊದಲು, 44,300 ಜನರು ವಾಸಿಸುವ ತುರ್ಕಿಸ್ತಾನ್ ಪ್ರದೇಶದ ಅರ್ಯಾಸ್ ವಸಾಹತು ಬಳಿ ಇರುವ ಶಸ್ತ್ರಾಸ್ತ್ರಗಳ ಗೋದಾಮು ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವು ಮದ್ದುಗುಂಡುಗಳು ಸ್ಫೋಟಗೊಂಡಿವೆ ಎಂದು ಕಝಕಿಸ್ತಾನ ರಕ್ಷಣಾ ಸಚಿವಾಲಯ ವರದಿ ಮಾಡಿದೆ. ಘಟನೆಗೆ ಏನು ಕಾರಣ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.ಸ್ಥಳದಿಂದ ಜನರನ್ನು ತೆರವುಗೊಳಿಸಳಾಗಿದೆ. 160ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರಲ್ಲಿ 89 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಜಕ್‌ ಅಧ್ಯಕ್ಷ ಕಶ್ಯಮ್ ಜೊಮರ್ಟ್‌ ಟೋಕಯೆವ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.15 ಮಂದಿಯನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಲಾಗಿದೆ.
ಸ್ಫೋಟದಲ್ಲಿ ಓರ್ವ ಸಿಬ್ಬಂದಿ ಮತ್ತು ಓರ್ವ ನಾಗರಿಕ ಸಾವನ್ನಪ್ಪಿದ್ದಾರೆ ಎಂದು ಕಜಕ್ ಪ್ರಧಾನಮಂತ್ರಿ ಅಸ್ಕರ್ ಮಾಮಿನ್ ಅವರು ತಿಳಿಸಿದ್ದಾರೆ

loading...