ಕಟ್ಟಡ ಕಾರ್ಮಿಕರಿಂದ ಸಿಪಿಐ ಅಭ್ಯರ್ಥಿಗೆ ಠೇವಣಿ ಮೊತ್ತ ದೇಣಿಗೆ

0
48

ಕನ್ನಡಮ್ಮ ಸುದ್ದಿ-ದಾಂಡೇಲಿ: ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿ ಸಿಪಿಐ(ಎಂ) ಪಕ್ಷದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗೆ ಅಭ್ಯರ್ಥಿಯ ಠೇಣಿ ಮೊತ್ತ ರೂ: 10 ಸಾವಿರವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪೆಡರೇಶನ್ ಹಳಿಯಾಳ/ಜೊಯಿಡಾ ಘಟಕದ ವತಿಯಿಂದ ಸಿಪಿಐ(ಎಂ) ಪಕ್ಷದ ಅಭ್ಯರ್ಥಿ ಯಮುನಾ ಗಾಂವಕರ ಅವರಿಗೆ ನಗರದ ಸಿಪಿಐ(ಎಂ) ಪಕ್ಷದ ಕಚೇರಿಯಲ್ಲಿ ಶುಕ್ರವಾರ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪೆಡರೇಶನ್ ಹಳಿಯಾಳ/ಜೊಯಿಡಾ ಘಟಕದ ಅಧ್ಯಕ್ಷ ಕೃಷ್ಣ ಭಟ್ ಅವರು ದೇಶಾದಾದ್ಯಂತ ಮೊಟ್ಟ ಮೊದಲ ಬಾರಿಗೆ ಕಟ್ಟಡ ಕಾರ್ಮಿಕರಿಗೆ ಕಾನೂನು ಬಂದಿರುವುದು ದುಡಿಯುವ ವರ್ಗದ ಪಕ್ಷವಾದ ಭಾರತ ಕಮ್ಯುನಿಷ್ಟ್ ಪಕ್ಷ (ಮಾಕ್ರ್ಸ್‍ವಾದಿ) ಮತ್ತು ಇನ್ನಿತರೆ ಎಡಪಕ್ಷಗಳ ನಿರಂತರ ಶ್ರಮದಿಂದ ಎಂಬುವುದು ಜನಜನಿತ ಎಂದು ಕೃಷ್ಣ ಭಟ್ ಹೇಳಿದರು. ಇಂದು ಸರಕಾರವು ಕಟ್ಟಡ ಕಾರ್ಮಿಕರ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಖೇಧಕರ, ಕಾರ್ಮಿಕರಿಗೆ ಅರ್ಹವಾಗಿ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ.

ಈ ಸಂದರ್ಭದಲ್ಲಿ ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಶಾಂತರಾಮ ನಾಯಕ, ಹಳಿಯಾಳ ತಾಲೂಕು ಘಟಕದ ಕಾರ್ಯದರ್ಶಿ ಹರೀಶ ನಾಯ್ಕ, ಜಿಲ್ಲಾ ಸಮಿತಿ ಸದಸ್ಯ ಪ್ರೇಮಾನಂದ ವೇಳಿಪ್, ನಗರ ಸಭಾ ಸದಸ್ಯ ಡಿ.ಸ್ಯಾಮಸನ್ ಹಾಗೂ ಕಟ್ಟಡ ಕಾರ್ಮಿಕರ ಪೆಢರೇಶನಿನ ಪದಾಧಿಕಾರಿಗಳಾದ ಹನುಮಂತ ಸಿಂಧಗಿ, ಶಶಿಕಲಾ ಬನ್ನಿಕೊಪ್ಪ, ಮಂಗಳಾ ಬಡಂಗಿ, ಜ್ಯೋತಿ ನಾರ್ವೆಕರ, ರೇಣುಕಾ ಹಣಬರ, ರವಿ ಹಣಬರ, ಶಕುಂತಲಾ ಗಾವಡೆ, ಪ್ರಭಾಕರ ಅಮ್ಟೇಕರ, ಪ್ರಕಾಶ ಚನಾಬತಿ, ಜೈನಾಬಿ, ಕೊಸಾಂವ್ ಫರ್ನಾಂಡಿಸ್, ನರಸಿಂಹ ಪಟೀಲ, ಮಹೇಂದ್ರ ಹರಶಿಲ್ಕರ್, ಮಾಬ್ಲೇಶ್ವರ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

loading...