ಕಠಿಣ ಪರಿಶ್ರಮದಿಂದ ಗುರಿ ಸಾಧ್ಯ

0
23

ಗೋಕಾಕ 3 – ಇಂದಿನ ಯುಗದಲ್ಲಿ ಮಕ್ಕಳು ಕಾಯಿ ಒಡೆಯುವ ಕಲ್ಲಾಗುವ ದಕ್ಕಿಂತ ಪೂಜಿಸುವ ಕಲ್ಲು ಆಗಬೇಕೆಂದು ತಾಲೂಕ ಸಮಾಜ ಕಲ್ಯಾಣಾಧಿಕಾರಿ ಬಿ. ಎಸ್. ಪುಠಾಣಿ ಅವರು ಹೇಳಿದರು.

ನಗರದ ಬಸವಜ್ಯೌತಿ ಐಟಿಐ ಕಾಲೇಜಿನ ಆವರಣದಲ್ಲಿ ಬುಧವಾರದಂದು ನಡೆದ 14 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳು ವಿದ್ಯಾ ಭ್ಯಾಸ ಮಾಡಿ ಜೀವನದಲ್ಲಿ ಗುರಿ ಮುಟ್ಟುವದರ ಜೊತೆಗೆ ರಾಷ್ಟ್ತ್ರ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳ ಬೇಕೆಂದು ಪುಠಾಣಿ ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಅಶೋಕ ಲಗಮಪ್ಪಗೋಳ ಮಾತನಾಡಿ ಇಂದು ಯುವಕರಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದಕ್ಕೆ ನಿರುದ್ಯೌಗ ಸಮಸ್ಯೆಯೇ ಕಾರಣವೆಂದು ಅಭಿಪ್ರಾಯ ಪಟ್ಟ ಅವರು ನಿರುದ್ಯೌಗ ಸಮಸ್ಯೆ ನಿವಾರಿಸಲು ಕೈಗಾರಿಕಾ ತರಬೇತಿ ಸಂಸ್ಥೆಗಳು ಹೆಚ್ಚಾಗಬೇಕೆಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ವಸಂತರಾವ ಕುಲಕರ್ಣಿ, ಸಿದ್ದಾರ್ಥ ಲಲಿತಕಲಾ ವಿದ್ಯಾಲಯದ ಪ್ರಾಚಾರ್ಯ ಜಯಾನಂದ ಮಾದರ, ಚುಟುಕು ಕವಿ ಟಿ.ಸಿ. ಮೊಹರೆ ಅವರು ವೇದಿಕೆಯ ಮೇಲೆ ಆಸೀನರಾಗಿದ್ದರು. ವಿಜನ್ ಕೋಚಿಂಗ್ ಸೆಂಟರ್ ನಿರ್ದೇಶಕ ಮಹಾಂತೇಶ ನಾಗನೂರ ಅವರು ತಂತ್ರಜ್ಞಾನದ ಕುರಿತು ಉಪನ್ಯಾಸ ನೀಡಿದರು. ತರಬೇತಿ ಕೇಂದ್ರದ ಕಾರ್ಯದರ್ಶಿ ಕೆಂಪಣ್ಣ ಹರಿಜನ, ಪ್ರಾಚಾರ್ಯೆ ಕುಮಾರಿ ಎ.ಆರ್.ನಿಡಸೋಸಿ ಇದ್ದರು. ತರಬೇತಿ ಅಧಿಕಾರಿ ಎಸ್.ಎಸ್.ನೇರ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಎಸ್.ಜೋಗನ್ನವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

loading...

LEAVE A REPLY

Please enter your comment!
Please enter your name here