ಕಣ್ಣಿನ ಬಗ್ಗೆ ತಾತ್ಸಾರ ಬೇಡ: ಡಾ. ರಾಜಶೇಖರ

0
43

ಗುಳೇದಗುಡ್ಡ: ಪ್ರತಿಯೊಬ್ಬ ಮನುಷ್ಯನಿಗೂ ಕಣ್ಣುಗಳು ಅಮೂಲ್ಯ ಅಂಗವಾಗಿದ್ದು, ಕಣ್ಣಿನ ಸಂರಕ್ಷಣೆಯ ಬಗ್ಗೆ ತಾತ್ಸಾರ ಮಾಡದೇ ಹೆಚ್ಚಿನ ಕಾಳಜಿವಹಿಸಬೇಕು. ಪ್ರತಿವರ್ಷ ತಜ್ಞವೈದ್ಯರಲ್ಲಿ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹುಬ್ಬಳ್ಳಿ ನೇತ್ರತಜ್ಞ ಡಾ. ರಾಜಶೇಖರ ಪಾಟೀಲ ಹೇಳಿದರು.
ಅವರು ರವಿವಾರ ಸಮೀಪದ ಕಟಗೇರಿ ಗ್ರಾಮದ ಸರ್ಕಾರ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಡಾ. ದೇವರಾಜ ಪಾಟೀಲ ಅವರ ರಾಠಿ ಮೆಮೋರಿಯಲ್ ಧನುಷ್ ಆಸ್ಪತ್ರೆಯ ಹಾಗೂ ಹುಬ್ಬಳ್ಳಿಯ ವಲ್ರ್ಡ್ ಕಣ್ಣಿನ ಆಸ್ಪತ್ರೆಯ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಶಿಬಿರದಲ್ಲಿ ಕಟಗೇರಿ, ಜಮ್ಮನಕಟ್ಟಿ, ಕೊಂಕನಕೊಪ್ಪ, ಲಕ್ಕಸಕೊಪ್ಪ, ಗುಳೇದಗುಡ್ಡ, ಬೂದಿನಗಡ, ಶಿರೂರ, ಹಲಕುರ್ಕಿ, ಹಂಗರಗಿ, ಖಾಜಿ ಬೂದಿಹಾಳ, ಹಿರೇಬುದಿಹಾಳ, ನಿಂಗಾಪುರ, ಕೆರೂರ, ಸೂಳಿಕೇರಿ, ಸುಳ್ಳ, ಬಾದಾಮಿ, ಬೆನಕಟ್ಟಿ ಮತ್ತಿತರ ಗ್ರಾಮಗಳ ಸುಮಾರು 300ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಭಾಗವಹಿಸಿ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಂಡಿದ್ದು, ಇವರಲ್ಲಿ 40 ಜನರಗೆ ಕಣ್ಣಿನ ಶಸ್ತ್ರಚಿಕಿತ್ಸೆ ಅವಶ್ಯವಿದ್ದು, ಅವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಹುಬ್ಬಳ್ಳಿಯಲ್ಲಿ ಮಾಡಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಸಂದರ್ಭಲ್ಲಿ ಆರ್.ಬಿ. ಹಟಗಾರ, ಎಸ್.ಜಿ. ದೇಸಾಯಿ, ಆರ್.ಎಚ್. ಗುಡ್ಡದ, ಟಿ.ಎಸ್. ಮೊಕಾಸಿ, ಪ್ರಮೋದ ಕವಡಿಮಟ್ಟಿ, ಬಿ.ಎಸ್. ಹದ್ಲಿ, ಟಿ.ಎನ್. ಮೊಕಾಸಿ, ಬಿ.ಎಂ. ದಳವಾಯಿ, ಆರ್.ಟಿ. ಮೊಕಾಸಿ, ಡಾ. ಎಂ.ಜಿ. ಪಾಟೀಲ, ಉಮೇಶ ಮೊಕಾಸಿ, ಲಕ್ಷ್ಮಣ ಗೌಡರ, ಗೋಪಾಲ ಭಟ್ಟಡ, ಶಿವನಯ್ಯಾ ಮಳೀಮಠ, ರಾಜು ಸಂಗಮ, ಅಮರೇಶ ಕೆಂಜಗಳ್ಳಿ ಮತ್ತಿತರರು ಇದ್ದರು.

loading...