ಕಥುವಾ: ಬಂಧಿತ ಜೈಷೆ ಸಂಘಟನೆ ಉಗ್ರರು 7 ದಿನಗಳ ಪೊಲೀಸ್ ಕಸ್ಟಡಿಗೆ

0
7

ಜಮ್ಮು- ಜಮ್ಮು ಕಾಶ್ಮೀರದ ಕಥುವಾದಲ್ಲಿ  ಗುರುವಾರ ಬಂಧಿಸಲಾಗಿದ್ದ ಜೈಷೆ ಮೊಹಮ್ಮದ್ ಸಂಘಟನೆ ಮೂವರು ಉಗ್ರರನ್ನು ಜಿಲ್ಲಾ ಮತ್ತು ಸಂಚಾರಿ ನ್ಯಾಯಾಲಯ ಶುಕ್ರವಾರ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ
ಬಂಧಿತರ ಉಗ್ರರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 7 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ ಎಂದು ಯುಎನ್ಐ ಸುದ್ದಿಸಂಸ್ಥೆಗೆ ಪೊಲೀಸ್ ಮೂಲಗಳು ತಿಳಿಸಿವೆ
“ಗುರುವಾರ ರಾತ್ರಿಯಿಡೀ ಮೂವರು ಉಗ್ರರನ್ನೂ ವಿಚಾರಣೆಗೆ ಗುರಿಪಡಿಸಲಾಗಿತ್ತು.  ಆದರೆ
ಶಸ್ತ್ರಾಸ್ತ್ರಗಳು ತುಂಬಿದ್ದ ಟ್ರಕ್ ಅನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು, ಅವುಗಳನ್ನು ನೀಡಿದವರು ಯಾರು ಎಂಬುದರ ಸುಳಿವು ನೀಡಿಲ್ಲ  ಬಹುಶಃ ಕಾಶ್ಮೀರದ ಯಾವ ವ್ಯಕ್ತಿಗಾದರೂ ನೀಡುವ ಯೋಜನೆಯಿದ್ದಿರಬಹುದು” ಎನ್ನಲಾಗಿದೆ.
“ಮುದಿನ ದಿನಗಳಲ್ಲಿ ಈ ಕುರಿತು ತನಿಖೆ ನಡೆಸಲಾಗುವುದು ಹೀಗಾಗಿ ಮತ್ತಷ್ಟು ಸಂಖ್ಯೆಯ ಆರೋಪಿಗಳು ಬಂಧಿತರಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜೈಷೆ ಮೊಹಮ್ಮದ್ ಸಂಘಟನೆಗೆ ಸೇರಿದ ಈ ಮೂವರು ಉಗ್ರರನ್ನು ಜಮ್ಮು ಕಾಶ್ಮೀರ ಹಾಗೂ ಪಂಜಾಬ್ ಗಡಿಯಲ್ಲಿ ಬಂಧಿಸಿ, ಎಕೆ 47 ರೈಫಲ್ ಗಳು,11 ಸಾವಿರ ರೂಪಾಯಿ ನಗದು, ಜೀವಂತ ಮದ್ದುಗುಂಡುಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ಈ ಭಯೋತ್ಪಾದಕರ ಬಂಧನದ ಮೂಲಕ ಜರುಗಬೇಕಿದ್ದ ಬಹುದೊಡ್ಡ ಭಯೋತ್ಪಾದನಾ ಸಂಚು ವಿಫಲವಾಗಿದೆ ಎನ್ನಬಹುದಾಗಿದೆ.

loading...