ಕನಕದಾಸರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಅಶೋಕ ಪಟ್ಟಣ

0
32

ರಾಮದುರ್ಗ: ಸಮಾಜದಲ್ಲಿ ಇರುವುದು ಎರಡೆ ಜಾತಿ, ಒಂದು ಹೆಣ್ಣು ಒಂದು ಗಂಡು ಆದ್ದರಿಂದ ಯಾರು ಜಾತಿ ಭೇದ ಮಾಡಬಾರದು ಎಂದು ಸಮಾಜಕ್ಕೆ ಸಾರಿದ ಮಹಾನವ್ಯಕ್ತಿ ಕನಕದಾಸರು ಅವರ ತತ್ವಾದರ್ಶಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಯುವ ಪಿಳಿಗೆ ತಿಳಿಸುವಂತೆ ಸಮಾದಾಯ ಬಾಂದವರು ಮುಂದಾಗಬೇಕು ಎಂದು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಅಭಿಪ್ರಾಯ ವ್ಯಕ್ತ ಪಡಿಸಿದರು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭವಾದ ಆಕರ್ಷಕ ಮರೆವಣಿಗೆ ನಗದರ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾವಿರಾರು ಸಮುದಾಯದ ಭಾಂದವರು ಭಾಗವಹಿಸಿ ನಂತರ ಪುರಸಭೆಯ ಸಂಸ್ಕೃತಿಕ ಭವನದಲ್ಲಿ ಸಮಾವೇಶ ಗೊಂಡಿತು.
ಸ್ಥಳೀಯ ಪುರಸಭೆಯ ಸಂಸ್ಕೃತಿಕ ಭವನದಲ್ಲಿ ಕನಕದಾಸರ 529ನೇಯ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ತಂದೆ, ತಾಯಿ ದೇವರಿಗಿಂತ ಮಿಗಿಲಾದ ದೇವರಿಲ್ಲ, ಮೊದಲು ತಂದೆ ತಾಯಿಯರಿಗೆ ನಮಸ್ಕರಿಸಿ ನಂತರ ದೇವರಿಗೆ ನಮಸ್ಕರಿಸಬೇಕು. ಕೈಲಾದಷ್ಟು ಸಮಾಜದಲ್ಲಿ ಹಿಂದುಳಿದ, ಬಡವರಿಗೆ ಸಹಾಯ ಸಹಕಾರ,ಧಾನ,ಧರ್ಮ ಮಾಡಿದಾಗ ತಾನಗಿಯೇ ದೇವರ ಅನುಗ್ರಹ ದೊರೆಯುತ್ತದೆ.
ಉಡಪಿಯ ಶ್ರೀಕೃಷ್ಣನ ದರ್ಶನಕ್ಕೆ ಹೋದಾಗ ಕನಕದಾರಸನ್ನು ಹಿನ ಕುಲದವನೆಂದು ದೇವರ ಗರ್ಭಗುಡಿ ಪ್ರವೇಶ ನೀಷೆದಿಸಿದಾಗ ದೇವಸ್ಥಾನದ ಹಿಂಬಾಗ ನಿಂತು ಭಜನೆ ಮಾಡಿದಾ ಕೃಷ್ಣ ಪರಮಾತ್ಮ ತಿರುಗಿ ದರ್ಶನ ನೀಡುರುವುದು ನಿಮಗೆ ಗೊತ್ತು ಅಂತವರ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ.
ಸುಮಾರು ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ದೇವಸ್ಥಾನ, ಸಮುದಾಯ ಭವನ ನಿರ್ಮಿಸಲಾಗಿದೆ. ಒಂದು ಸುಂದರವಾದ ಸಮದಾಯಭವನ ನಿರ್ಮಾನಕ್ಕೆ 25 ಲಕ್ಷ ಅನುದಾನ ನೀಡುತ್ತನೆ. ಹಾಗೂ ಸಮುದಾಯದ ಜನರು ಮೂಡ ನಂಬಿಕೆಯನ್ನು ಬಿಟ್ಟು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ತಿಳಿಸಿದರು
ಜಿಲ್ಲಾ ಪಂಚಾಯತ ಸದಸ್ಯ ರೇಣಪ್ಪ ಸೋಮಗೊಂಡ ಮಾತನಾಡಿ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯದ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜಕ್ಕೆ ಉತ್ತಮ ಪ್ರಜೇಗಳನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಡಾ. ಅರ್ಚನಾ ಅಥಣಿ ಕನಕದಾಸರ ಕುರಿತು ಉಪನ್ಯಾಸ ನೀಡಿದರು. ಉಪಸ್ಥಿತಿ ತಾಪಂ ಅಧ್ಯಕ್ಷೆ ಶಕುಂತಲಾ ವಡ್ಡರ,ಉಪಾಧ್ಯಕ್ಷೆ ರುಕ್ಮವ್ವ,ಪೂಜೇರ,ಪುರಸಭೆಯ ಅಧ್ಯಕ್ಷ ಹುಸೇನಬಾಷಾ ಮೊರಬ,,ಉಪಾಧ್ಯಕ್ಷೆ ಸುಮಂಗಲಾ ರಾಯಬಾಗ, ಜಿಲ್ಲಾ ಪಂ ಸದಸ್ಯರಾದ ಜಹೂರ ಹಾಜಿ,ಮಾರುತಿ ತುಪ್ಪದ, ರಮೇಶ ದೇಶಪಾಂಡೆ, ಶಿವಕ್ಕ ಬೆಳವಡಿ, ಕೃಷ್ಣಪ್ಪ ಲಮಾಣಿ, ಸಮಾಜದ ಅಧ್ಯಕ್ಷ ರವಿ ಮೊರಬದ, ಜಗದೀಶ ಕಾಮಣ್ಣವರ ಪುರಸಭೆಯ ಸದಸ್ಯರಾದ ರಾಜಿ ಮಾನೆ,ಜ್ಯೋತಿ ಸಜ್ಜನ ಸಮಾಜ ಭಾಂದವರು ಹಾಗೂ ತಾಲೂಕಾ ಅಧಿಕಾರಿಗಳು ಸೇರಿಸಂತೆ ಅನೇಕರು ಭಾಗವಹಿಸಿದ್ದರು. ಶಿಕ್ಷಕ ಎಚ್‌.ಎನ್‌.ಯಡ್ರಾಂವಿ ನಿರೂಪಿಸಿದರು, ತಹಶೀಲ್ದಾರ ತುಕಾರಾಮ ದಾಸರ ಸ್ವಾಗತಿಸದರು, ಸಮಾಕಲ್ಯಾಣ ಅಧಿಕಾರಿ ಕೆ,ಎಸ್‌,ಕರ್ಕಿವಂದಿಸಿದರು.

loading...

LEAVE A REPLY

Please enter your comment!
Please enter your name here