ಕನಸೇ ಕಾರ್ಯಕರ್ತರ ಜಾಗೃತಾಸಮಾವೇಶ

0
68

ಆಲಮೇಲ : ಕನ್ನಡ ನಮ್ಮ ತಾಯಿ, ತಾಯಿ ಬಾಷೆ, ನೆಲ,ಜಲಕ್ಕೆ ಯಾವ್ಯದೇ ಬಗೆಯಲ್ಲಿ ದ್ರೋಹ ನಡೆಯುತ್ತಿದ್ದರೆ ಪ್ರಾಮಾಣಿಕವಾಗಿ ಹೋರಾಟ ಮಾಡುವುದೇ ನಮ್ಮ ಮೂಲುದ್ದೇಶವಾಗಿದೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಕರ್ನಾಟಕ ನವ ನಿರ್ಮಾಣ ಸೇನೆಯ ವಲಯ ಕಾರ್ಯಕರ್ತರ ಜಾಗೃತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿಜಯಪೂರ ಜಿಲ್ಲೆಯನ್ನು 371ನೇ ಕಲಂಗೆ ಸೇರಿಸುವಂತೆ ಆಗ್ರಹಿಸಿ ದೇಹಲಿಗೆ ನಿಯೋಗವನ್ನು ತಗೆದುಕೊಂಡು ಹೋಗುತ್ತಿದ್ದು, ಜಿಲ್ಲೆಗೆ ಸಲ್ಲಬೇಕಾದ ನ್ಯಾಯವನ್ನು ಅಲ್ಲಿ ವಿವರಿಸಲಾಗುತ್ತದೆ, ಈ ಹೋರಟಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಬೇರೆ ಭಾಷೆಯಲ್ಲಿನ ವ್ಯಾಮೋಹ ಕಡಿಮೆಯಾಗಬೇಕು, ಕನ್ನಡ ಶಿಕ್ಷಣ ಕಡ್ಡಾಯವಾಗಬೇಕು, ಕನ್ನಡಕ್ಕೆ ಅಪತ್ತು ಬಂದರೆ ಅದು ರಾಜಕಾರಣಿಗಳಿಂದಲೇ ಹೊರತು ಬೇರೆ ಯಾರಿಂದಲ್ಲು ಸಾಧ್ಯವಿಲ್ಲ ಅದಕ್ಕಾಗಿ ಕೆಲವು ರಾಜಕೀಯ ಮುಖಂಡರು ತಮ್ಮ ಓಟ ಬ್ಯಾಂಕ್ ಗಾಗಿ ಕನ್ನಡ ತಾಯಿಯನ್ನು ಇಬ್ಬಾಗಿಸುವ ಮಾತುಗಳನಾಡುತ್ತಿದ್ದಾರೆ, ಅಂತಹ ರಾಜಕಾರಣಿಗಳಿಗೆ ಪಾಠ ಕಲಿಸಲು ನಮ್ಮ ಸೇನೆಯು ಅವರ ವಿರುದ್ಧವೇ ಕಲ್ಲಿನ ಚಳುವಳಿಯನ್ನು ಆರಂಭಿಸಲಿದೆ ಎಂದರು.
ನಂತರ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಂಗಣ್ಣ ಯಾತನುರ ಮಾತನಾಡಿದ ಸಂಘಟನೆಯು ಗೋವಾದಲ್ಲಿನ ಕನ್ನಡಿಗರಿಗೆ ಬೆಂಬಲ ನೀಡಿ ಅವರ ಪರವಾಗಿ ಹೋರಾಟ ಮಾಡಿದ್ದು. ಅಂತಹ ತೊಂದರೆಗಳು ಯಾವದೇ ರಾಜ್ಯದಲ್ಲಿ ಕನ್ನಡಿಗರಿಗಾದರೆ ನಾವು ಸಹಿಸುವದಿಲ್ಲಾ ಎಂದರು.ಕಾರ್ಯಕ್ರಮದ ಸಾನಿಧ್ಯ ಜಗದೇವ ಮಲ್ಲಿಬೋಮ ಸ್ವಾಮೀಜಿ ವಹಿಸಿದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಸೈಯದ ದೇವರಮನಿ, ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಭಾಗಣ್ಣ ಗುರಕಾರ, ಜಿಲ್ಲಾ ಅಧ್ಯಕ್ಷ ಭೀಮಾಶಂಕರ ಕೋಟಾರಗಸ್ತಿ, ತಾಲ್ಲೂಕ ಅಧ್ಯಕ್ಷ ಮೌನೇಶ ಬಡಿಗೇರ, ವಲಯ ಅಧ್ಯಕ್ಷ ಶಶಿಧರ ಗಣಿಹಾರ ಉಪಾಧ್ಯಕ್ಷ ದಸ್ತಗೀರ ವಡಗೇರಿ, ಸೈಪನ್ ಜಮಾದಾರ,ಅಜರುದ್ದಿನ್ ದೇವರಮನಿ, ನಿಜಾಮ ಮೇಲಿನಮನಿ. ಭಾಗವಹಿಸಿದರು.ಸಂಜು ಜಗತಿ ನಿರೂಪಿಸಿದರು, ಆಲಮೇಲ ವಲಯದ ನೂರಾರು ಘಟಕಗಳ ಅಧ್ಯಕ್ಷರು, ಸದಸ್ಯರು ಕಾರ್ಯಕರ್ತರು ಈ ಜಾಗೃತಿ ಸಭೆಯಲ್ಲಿ ಭಾಗವಹಿಸಿದರು.

loading...

LEAVE A REPLY

Please enter your comment!
Please enter your name here