ಕನ್ನಡ ಅಧ್ಯಾಪಕರ ಸಂಘದಿAದ ಚನ್ನಣ್ಣ ವಾಲೀಕಾರಗೆ ನುಡಿನಮನ

0
19

ಬಸವನಬಾಗೇವಾಡಿ; ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ , ಕೇಂದ್ರೀಯ ಮೌಲ್ಯಮಾಪನದಲ್ಲಿ ಕನ್ನಡ ಅಧ್ಯಾಪಕರ ಸಂಘದಿAದ ಇತ್ತೀಚೆಗೆ ಅಗಲಿದ ಸಾಹಿತ್ಯ ಲೋಕದ ಹಿರಿಯ ಚೇತನ, ಬಂಡಾಯದ ಗಟ್ಟಿ ಧ್ವನಿ, ಹೋರಾಟದ ಧೀಮಂತ ವ್ಯಕ್ತಿತ್ವದ ಸೀದಾ ಸಾದಾ ಹಸನ್ಮುಖಿ ಭಾವಜೀವಿ ಸಾಹಿತ್ಯದ ಹೊಸ ಪ್ರಯೋಗಶೀಲತೆಯ ಹೆಜ್ಜೆಯೊಂದಿಗೆ ತಮ್ಮದೇ ಆದ ಛಾಪು ಮೂಡಿಸಿದ್ದ ದಿ. ಚನ್ನಣ್ಣ ವಾಲೀಕಾರ ಇವರಿಗೆ ಭಾವಪೂರ್ಣ ಶೃದ್ದಾಂಜಲಿಯನ್ನು ನುಡಿ ನಮನದ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಚನ್ನಣ್ಣ ವಾಲೀಕಾರ ಅವರ ವ್ಯೋಮಾ ವ್ಯೋಮ ಮಹಾಕಾವ್ಯದ ಸಾಂಸ್ಕೃತಿಕ ಮಹತ್ವದ ವಿಷಯದ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಿದ ದೇವದಾಸಿಯರ , ಕೂಲಿ ಕಾರ್ಮಿಕರ ಸಮಸ್ಯೆ ಕುರಿತು ಅವರು ಮಾಡಿದ ಹೋರಾಟವನ್ನು ಅನೇಕ ಉಪನ್ಯಾಸಕರು ನೆನೆಪಿಸಿಕೊಂಡರು.
ಹಿರಿಯ ಚಿಂತರಕರು, ಹೊರಾಟಗಾರರಾಗಿ ಸಕ್ರೀಯವಾದ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಡಾ. ಮೀನಾಕ್ಷಿ ಬಾಳಿಯವರು ಮಾತನಾಡಿ, ಚನ್ನಣ್ಣ ವಾಲೀಕಾರ ಹಾಗೂ ತಮ್ಮ ನಡುವಿನ ಆತ್ಮೀಯ ಒಡನಾಟವನ್ನು , ಅವರ ಸಹಜ, ಸರಳ ಹಾಗೂ ಅಷ್ಟೇ ದಿಟ್ಟ ಹೋರಾಟದ ಮಾದರಿಯನ್ನು ನೆನೆಪಿಸಿಕೊಂಡರು. ಪ್ರೀತಿ, ಕ್ರಾಂತಿಯ ಎರಡನ್ನೂ ಮೈಗೂಸಿಕೊಂಡು ಬಂಡಾಯದ ನಿಗಿ ನಿಗಿ ಕೆಂಡದತ್ತಿದ್ದ ಚನ್ನಣ್ಣ ವಾಲೀಕಾರ ಅತ್ಯಂತ ಭಾವುಕ ಜೀವಿ ಪ್ರಕೃತಿ ಹಾಗೂ ಹಾಗೇ ಬದುಕಿನ ಸೀದಾ ಸಾದಾ ಮನುಷ್ಯ .ಒಬ್ಬ ಸಹಜ ಸಾಹಿತ್ಯ ದಿಗ್ಗಜ, ಬೆತ್ತಲೆಯ ಸೇವೆ ವಿರುದ್ಧ ಹೊರಾಡಿ ಜಾತಿ ವ್ಯವಸ್ಥೆಯ ವಿರುದ್ದ ಸಿಡಿದೆದ್ದ ಬದ್ದತೆಯ ಹೋರಾಟಗಾರ, ಅಂತಹ ಬದ್ದತೆಯ ಹೋರಾಟಗಳ ಕೊರತೆ ಇಂದು ಎದ್ದು ಕಾಣುತ್ತಿದೆ ಎಂದು ತಮ್ಮ ತಮ್ಮ ಹೃದಯಾಂತರಾಳದ ನುಡಿಗಳನ್ನಾಡಿದರು.
ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಮೈತ್ರಿ ಮಾತನಾಡಿ, ಕೆಂಪAಗಿ ಧರಿಸಿದ ಬಂಡಾಯದ ದಿಟ್ಟ ಹೋರಾಟಗಾರರು, ದಲಿತ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿಸಿದ ಪ್ರಥಮ ಹೆಮ್ಮೆಯ ಬದ್ದತೆಯ ಸಂಘಟಕರೂ ಆದ ಚನ್ನಣ್ಣ ಭಾರತೀಯ ಕಾವ್ಯ ಮೀಮಾಂಸೆ ಜೊತೆಗೆ ಕನ್ನಡ ಕಾವ್ಯ ಮೀಮಾಂಸೆಯ ಕುರಿತು ಚಿಂತಿಸಿದವರು. ಅವರ ಸಾಹಿತ್ಯ ಪದ್ಯದಿಂದ ಮಹಾಕಾವ್ಯದವರೆಗೆ ಕಥೆಯಿಂದ ಕಾದಂಬರಿಯವರೆಗೆ ಸಾಹಿತ್ಯ ಸರಳತೆಯಿಂದ ಕೂಡಿದ್ದಾಗಿತ್ತು. ಆದರೆ ಇಂದು ಅವರ ಸಾಹಿತ್ಯ ವಿಮರ್ಶೆ ಲೋಕದಿಂದ ಅಜ್ನಾತವಾಗಿದ್ದು, ಇದೊಂದು ಸಾಂಸ್ಕೃತಿಕ ರಾಜಕಾರಣವಲ್ಲದೇ ಮತ್ತೇನು ಅಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಕೂಡಗಿ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೋ ಯುವರಾಜ ಮಾದನಶೇಟ್ಟಿ ಮಾತನಾಡಿದರು.
ಉಪನ್ಯಾಸಕ ಐಜಿ ಕೊಡೆಕಲ್ ಮಠ, ಡಾ.ಕೆ .ಜಿ ಚವ್ಹಾಣ ಕನ್ನಡ ಮೌಲ್ಯಮಾಪಕರ ಸಂಘದ ಚೇರಮನ್, ಡಾ. ಗಂಗಾಬಿಕಾ ಪಾಟೀಲ, ಬೀರಗೊಂಡ, ಡಾ. ಜಿ.ಆಯ್ ನಂದಿಕೋಲಮಠ, ಡಾ. ಪುಷ್ಪಾ ಶಲವಡಿಮಠ, ಡಾ. ಬಸಮ್ಮ ಶಿಗ್ಗಾವಿ, ಸಾಯಿಲತಾ, ಎಸ್.ಬಿ ಗಾಜಿಪುರ ಸೇರಿದಂತೆ ಅನೆಕರು ಇದ್ದರು. ಕಲ್ಯಾಣಶೆಟ್ಟಿ ಹಾಗೂ ಮುಧೋಳ ಅವರಿಂದ ಗುರುಸ್ತೋತ್ರ ನಡೆಯಿತು. ಮಲ್ಲಿಕಾರ್ಜುನ ಪೆಂಟೇದ ಕರ‍್ಯಕ್ರಮ ನಿರೂಪಿಸಿದರು.

loading...