ಕನ್ನಡ ಧ್ವಜ ತೆರವಿಗೆ ಎಂಇಎಸ್ ಪುಂಡರಿAದ ಎಚ್ಚರಿಕೆ ಗಂಟೆ: ಮಾ. ೮ಕ್ಕೆ ಗಡುವು

0
3

ಕನ್ನಡ ಧ್ವಜ ತೆರವಿಗೆ ಎಂಇಎಸ್ ಪುಂಡರಿAದ ಎಚ್ಚರಿಕೆ ಗಂಟೆ: ಮಾ. ೮ಕ್ಕೆ ಗಡುವು

ಬೆಳಗಾವಿ:
ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಡಿಸೆಂಬರ್‌ನಲ್ಲಿ ಕನ್ನಡಫರ ಸಂಘಟನೆಗಳಿAದ ಅಳವಡಿಸಲಾದ ನಾಡ ಧ್ವಜವನ್ನು ಮಾ. ೮ ರೊಳಗೆ ತೆರವುಗೊಳಿಸಬೇಕು ಇಲ್ಲವೇ ಬೃಹತ್ ಪ್ರತಿಭಟನೆ ನಡೆಸುವುದಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಅಧ್ಯಕ್ಷ ದೀಪಕ ದಳವಿ ಗಡುವು ನೀಡಿದ್ದಾರೆ.
ಆರೋಪ ಪ್ರತ್ಯಾರೋಪಗಳ ಮಧ್ಯೆ ವಿವಿಧ ಕನ್ನಡ ಸಂಘಟನೆಗಳಿAದ ಪಾಲಿಕೆ ಮುಂಬಾಗದಲ್ಲಿ ರಾರಾಜಿಸುತ್ತಿರುವ ನಾಡ ಧ್ವಜ ತೆರವಿಗೆ ಎಂಇಎಸ್ ಪುಂಡರು ಗಡುವು ನೀಡಿದ್ದಾರೆ. ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ರವಾನಿಸಿದೆ.
ಈ ಕುರಿತು ಪ್ರಕಟನೆ ನೀಡಿರುವ ಅಧ್ಯಕ್ಷ ದೀಪಕ ದಳವಿ, ಕನ್ನಡ ಧ್ವಜವನ್ನ ಹಾರಿಸಲಾಗಿದೆ. ಇದರಿಂದ ಬೆಳಗಾವಿಯಲ್ಲಿ ಭಾಷಾ ವಿವಾದ ಉಂಟಾಗಿತ್ತು. ನ್ಯಾಯ ಕೇಳಿದ ಬಳಿಕ ಜಿಲ್ಲಾಡಳಿತ ಎಂಇಎಸ್‌ಗೆ ಕಾಲಾವಕಾಶ ನೀಡಿತ್ತು ಈ ಕುರಿತು ರ‍್ಯಾಲಿ ನಡೆಸಲು ಮುಂದಾದ ಆದೇಶ ಹೊರಡಿಸಿ ಪ್ರತಿಭಟನೆ ಅರ್ಧ ನಿಲ್ಲಿಸಲಾಯಿತು.
ಇಲ್ಲಿವರೆಗೂ ನ್ಯಾಯವನ್ನು ಜಿಲ್ಲಾಡಳಿತ ಒದಗಿಸಿಲ್ಲ. ಪಾಲಿಕೆ ಚುನಾವಣೆ ಘೋಷಣೆಯಾದರೇ ನಮಗೆ ಯಾವುದೇ ತರಹದ ಪ್ರತಿಭಟನೆಗೆ ಅವಕಾಶ ಸಿಗುವುದಿಲ್ಲ. ಆದ್ದರಿಂದ ಎಲ್ಲ ಮರಾಠಿ ಪರ ಸಂಘಟನೆಗಳ ಪದಾಧಿಕಾರಿಗಳ ಅಭಿಪ್ರಾಯವನ್ನ ಸಂಗ್ರಹಿಸಿ ಇದೇ ಮಾರ್ಚ್ ೮ ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಇದಕ್ಕೆ ಸಹಕಾರ ಅಗತ್ಯ, ಇಲ್ಲವೇ ಮಾರ್ಚ್ ೮ ರೊಳಗೆ ಕನ್ನಡ ಧ್ವಜವನ್ನು ತೆರವುಗೊಳಿಸಿ ಎಂದು ಗಡುವು ನೀಡಿದ್ದಾರೆ.

loading...