ಕಬ್ಬು ಬಾಕಿ ಪಾವತಿಗೆ ಕ್ರಮ : ಎಸ್.ಪಿ ಜಗಲಾಸರ

0
22

ಬಾಗಲಕೋಟೆ: ಸಕ್ಕರೆ ಕಾರ್ಖಾನೆ ಮಾಲಿಕರು ಪ್ರತಿ ಕ್ವಿಂಟಲ್‌ಗೆ ಘೋಷಿಸಿದ ಹೆಚ್ಚುವರಿ ಕಬ್ಬು ಬಾಕಿ ಪಾವತಿ ಕುರಿತು ಕಾರ್ಖಾನೆಯ ಮಾಲಿಕರಿಗೆ ನಿರ್ದೇಶನ ನೀಡಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿAದು ಜರುಗಿದ ಕಬ್ಬು ಬೆಳೆಗಾರರ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು ಸಕ್ಕರೆ ಕಾರ್ಖಾನೆ ಮಾಲಿಕರು ಕಬ್ಬು ಬೆಳೆಗಾರರಿಗೆ ನೀಡಬೇಕಾದ ಬಾಕಿ ಪಾವತಿ ಕುರಿತಂತೆ ಕಳೆದ ನವೆಂಬರ ೮, ೧೪ ಹಾಗೂ ೧೬ ರಂದು ಜರುಗಿದ ಸಭೆಯಲ್ಲಿ ತಿರ್ಮಾನಿಸಿದಂತೆ ಕಾರ್ಖಾನೆ ಪ್ರಾರಂಭಿಸುವ ಪೂರ್ವದಲ್ಲಿ ಕಳೆದ ೨೦೧೭-೧೮ನೇ ಸಾಲಿನಲ್ಲಿ ಪ್ರತಿ ಕ್ವಿಂಟಲ್‌ಗೆ ಘೋಷಿಸಿದ ಹೆಚ್ಚುವರಿ ಬಾಕಿ ಹಣದಲ್ಲಿ ಶೇ.೫೦ ರಷ್ಟು ಪಾವತಿಸಬೇಕು. ಕಾರ್ಖಾನೆ ಪ್ರಾರಂಭಿಸಿದ ನಂತರ ೧೫ ದಿನದೊಳಗಾಗಿ ಉಳಿದ ಶೇ.೫೦ ಬಾಕಿ ಹಣವನ್ನು ಪಾವತಿಸುವ ಕುರಿತು ತೀರ್ಮಾನಿಸಲಾಗಿತ್ತು. ಇದಕ್ಕೆ ಕಾರ್ಖಾನೆಯ ಮಾಲಿಕರು ಹಾಗೂ ರೈತರು ಒಪ್ಪಿಗೆ ನೀಡಿದ್ದರು ಎಂದರು.
ಈ ಹಿನ್ನಲೆಯಲ್ಲಿ ವಿವಿಧ ಕಾರ್ಖಾನೆಯವರು ಪ್ರತಿ ಕ್ವಿಂಟಲ್‌ಗೆ ಘೋಷಿಸಿರುವ ಹೆಚ್ಚುವರಿ ಬಾಕಿ ಒಟ್ಟು ೧೩೦ ಕೋಟಿಗಳಲ್ಲಿ ೭೯ ಕೋಟಿ ರೂ. ಪಾವತಿಸಿದ್ದಾರೆ. ಬಾಕಿ ಉಳಿದ ಹಣವನ್ನು ಕಾರ್ಖಾನೆ ಪ್ರಾರಂಭಿಸಿ ೧೫ ದಿನಗಳಾದರೂ ಬಾಕಿ ಹಣವನ್ನು ಪಾವತಿಸಿರುವದಿಲ್ಲವೆಂದು ಕಬ್ಬು ಬೆಳೆಗಾರರು ತಿಳಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಳೆದ ಸಭೆಯಲ್ಲಿ ಒಪ್ಪಿಗೆ ನೀಡಿದಂತೆ ಬಾಕಿ ಉಳಿದ ೫೧ ಕೋಟಿ ರೂ.ಗಳ ಪಾವತಿಗೆ ಕಾರ್ಖಾನೆ ಮಾಲಿಕರಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.
ಪ್ರಸಕ್ತ ಸಾಲಿಗೆ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಲಾಗಿದ್ದು, ಎಫ್‌ಆರ್‌ಪಿ ಪ್ರಕಾರ ಕಬ್ಬು ಪೂರೈಸಿದ ೧೪ ದಿನಗಳೊಳಗಾಗಿ ಪಾವತಿ ಮಾಡಬೇಕು. ಅಲ್ಲದೇ ಪ್ರಸಕ್ತ ಸಾಲಿನ ಎಫ್‌ಆರ್‌ಪಿ ಹಾಗೂ ಎಚ್‌ಎನ್‌ಟಿ ದರವನ್ನು ಸೇರಿಸಿ ಪ್ರತಿ ಕ್ವಿಂಟಲ್‌ಗೆ ಇಂತಿಷ್ಟು ಎಂದು ತಿಳಿಸುತ್ತಿದ್ದಾರೆಯೇ ವಿನಃ ಎಚ್‌ಎನ್‌ಟಿ ದರ ಪ್ರತ್ಯೇಕವಾಗಿ ಮಾಹಿತಿ ನೀಡುತ್ತಿಲ್ಲವೆಂದು ರೈತರು ತಿಳಿಸಿದಾಗ ಎಚ್‌ಎನ್‌ಟಿ ದರ ನಿರ್ಧಾರ ಕುರಿತಂತೆ ಸಭೆ ಕರೆದು ನಿರ್ದೇಶನ ನೀಡಲಾಗುವುದೆಂದು ಜಗಲಾಸರ ತಿಳಿಸಿದರು. ತೇರದಾಳದ ಸಾವರಿನ್ ಸುರ‍್ಸ್ ಪ್ಯಾಕ್ಟರಿಯ ಹಜಾರು ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕಬ್ಬು ಬೆಳೆಗಾರರಾದ ರೈತ ಮುಖಂಡರಾದ ವಿಶ್ವನಾಥ ಉದಗಟ್ಟಿ, ವಿಠಲ ತುಮ್ಮರಮಟ್ಟಿ, ದುಂಡಪ್ಪ ಲಿಂಗರಡ್ಡಿ, ಸುಭಾಷ ಶಿರಬೂರ, ಗಂಗಾಧರ ಮೇಟಿ ಸೇರಿದಂತೆ ಇತರರು ಇದ್ದರು.

loading...