ಕಬ್ಬು ಬೆಳೆಗಾರರಿಂದು ಪ್ಯಾರಿ ಸುಗರ್ಸ್ ಕಲಘಟಗಿ ಶಾಖೆಗೆ ಬೀಗ್ ಜಡಿದು ಪ್ರತಿಭಟನೆ

0
44

ಕಲಘಟಗಿ,23:,ಹಳಿಯಾಳ ಪ್ಯಾರಿ ಸುಗರ್ಸ್ಕಾರಖಾನೆಯವರು ರೈತರ ಕಬ್ಬು ಸಾಗಾಣಿಕೆಯಲ್ಲಿ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆಂದು ಶನಿವಾರ ಮುಂಜಾನೆ ದಾಸಿಕೊಪ್ಪ,ಮಡಕಿಹೊನ್ನಿಹಳ್ಳಿ ಮುಂತಾದ ಗ್ರಾಮಗಳ ರೈತರು ಪಟ್ಟಣದ ಪ್ಯಾರಿ ಸುಗರ್ಸ್ ಶಾಖೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಕಬ್ಬು ಬೆಳೆಗಾರರಾದ ಚಮದ್ರಗೌಡ ಪಠಿಲ,ನಾಗಪ್ಪ ಸವನೂರ,ಶಿದ್ದನಗೌಡ ತಲೆಬಾಗಿಲು,ಪ್ರಕಾಶ ಸವನೂರ,ಶೆಖರಗೌಡ ಜಂಗಳಪ್ಪನವರ,ಶಿವಪ್ಪಕೊಪ್ಪದ ಮುಂತಾದವರು ಪಾಲ್ಗೊಂಡಿದ್ದ ಈ ಪ್ರತಿಭಟನೆಯಲ್ಲಿ ಮಾತನಾಡಿದ ರೈತರು ಹಳಿಯಾಳ,ಪ್ಯಾರಿ ಸುಗರ್ಸ್ ನವರು ಕಬ್ಬು ಸಾಗಾಣಿಯಲ್ಲಿ ಜೇಷ್ಠತಾ ಯಾದಿಯಂತೆ ಪರವಾನಿಗೆ ಪತ್ರವನ್ನು ನಿಡುತ್ತಿಲ್ಲ, ಕಬ್ಬನನ್ನು ಬೆಳೆಯದ ರೈತರ ಹೆಸರುಗಳು ದಾಖಲಿಸಿಕೊಂಡಿದ್ದು, ಸರಿಯಾದ ಮಾಹಿತಿಯನ್ನು ಗ್ರಾಮ ಕಮಿಟಿಗೆ ತಿಳಿಸಿದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೊಪಿಸಿದರು ಅಲ್ಲದೆ ಕುಳೆ ಕಬ್ಬಿಗೆ ಆದ್ಯತೆಯನ್ನು ನಿಡುತ್ತಿಲ್ಲ, ರೈತರು ನಿಡಿದ ದಾಖಲಾತಿಯನ್ನು ತಿದ್ದು ಪಡಿ ಮಾಡಿ ಮನಬಂದಂತೆ ಕಬ್ಬು ಕಟಾವಿಗೆ ಸಾಗಾಣಿಗೆ ಕಮಿಷನ್ ಗಾಗಿ ಹಸ್ತಕ್ಷೆಪವನ್ನು ಮಾಡುತ್ತಿದ್ದಾರೆಂದು ಈ ಕುರಿತು ಹಳಿಯಾಳ ಪ್ಯಾರಿ ಸುಗರ್ಸ ನವರಿಗೆ ಪತ್ರವನ್ನು ಬರೆದಿದ್ದರೂ ರೈತರ ಕಬ್ಬು ಸಾಗಾಣಿಕೆಯ ಪರದಾಟ ತಪ್ಪಿಲ್ಲವಾಗಿದೆ ಎಂದು ರೈತ ಬಸವರಾಜ ಮೆಣಸಿನಕಾಯಿಉಮೇಶ ಮುಂಗಲಿಮುಂತಾದವರು ದೂರಿಕೊಡರು.
ನಂತರ ಶಾಖಾ ವ್ಯವಸ್ಥಾಪಕ ಬಿ.ಎಸ್.ಪಾಟಿಲ ಅವರನ್ನು ಸಂಪರ್ಕಿಸಲಾಗಿ ಕಬ್ಬು ಸಾಗಾಣಿಕೆಯಲ್ಲಿ ಸ್ವಲ್ಪ ಅಡತಡೆಯಾಗಿದೆ ನಾಲ್ಕು ದಿನಗಳಲ್ಲಿ ಸರಿಪಡಿಸುವುದಾಗಿ ಹೇಳಿದರು.

loading...

LEAVE A REPLY

Please enter your comment!
Please enter your name here