ಕಮಲದ ಮನೆಯಲ್ಲಿ ತಳಮಳ

0
20

ಬೆಂಗಳೂರಿನಲ್ಲಿ ನಡೆದ  ಚಿಂತನ ಮಂಥನ ಸಭೆಗಾಗಿ ಭಾರತೀಯ ಜನತಾ ಪಕ್ಷದ ರಾಷ್ಟ್ತ್ರೀಯ ಅಧ್ಯಕ್ಷ ನೀತೀನ ಗಡ್ಕರಿ ಬಂದು ಸಧ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಇಲ್ಲವೆಂದು ಹೇಳಿ ಹೋದ ನಂತರ ಯಡಿಯೂರಪ್ಪ ಬಣದಲ್ಲಿ  ಒಂದು  ರೀತಿಯ ಕಳವಳ  ಕಂಡು ಬಂದರೂ ಈಶ್ವರಪ್ಪ ಹಾಗೂ ಸದಾನಂದಗೌಡರ  ಬಣದಲ್ಲಿ ಮತ್ತೊಂದು ರೀತಿಯ ತಳಮಳ ಉಂಟಾಗಿದೆ.

ನೀತೀನ ಗಡ್ಕರಿ ಅವರು ಮುಖ್ಯ ಮಂತ್ರಿಯ ಸ್ಥಾನವನ್ನು ಸಧ್ಯಕ್ಕೆ ಕೊಡುವುದಿಲ್ಲ.  ಎಂದು ಸ್ಪಷ್ಟವಾಗಿ ಹೇಳಿರುವುದರಿಂದ ಮುಂದೆ ಏನು ಮಾಡಬೆೇಕು ಎಂಬುದು ಯಡಿಯೂರಪ್ಪ ಬಣದವರಿಗೆ ಯಕ್ಷ ಪ್ರಶ್ನೆಯಾಗಿ ಕಾಡತೊಡಗಿದೆ. ಭಾರತೀಯ ಜನತಾ ಪಕ್ಷವನ್ನು ಬಿಡಲು ಅವರಿಗೆ ಮನಸ್ಸಿಲ್ಲ ಕಳೆದ 40 ವರ್ಷಗಳಿಂದ ಆ ಪಕ್ಷದೊಂದಿಗೆ ಗಾಢವಾಗಿ ಸಂಬಂಧವನ್ನು ಬೆಳೆಸಿಕೊಂಡು ಬಂದಿರುವ ಅವರು ಏಕಾಏಕಿಯಾಗಿ ಪಕ್ಷ ಬಿಡಲು ಸಿದ್ದರಿಲ್ಲ. ಜೊತೆಗೆ ಭಾಜಪದಿಂದ ಹೊರಗೆ ಬಂದು ಬೇರೆ ಪಕ್ಷವನ್ನು ಕಟ್ಟಬೇಕು ಎಂದರೆ ಅದಕ್ಕೆ ಬೆಂಬಲಿಗರಿಂದ ಬೆಂಬಲ ಸಿಗುತ್ತಿಲ್ಲವಾದ್ದರಿಂದು ನೀತೀನ ಗಡ್ಕರಿ ಅವರು ಮಾರ್ಚ 3 ರಂದು ದೆಹಲಿಗೆ ಮಾತುಕತೆಗಾಗಿ ಕರೆದಿರುವುದರಿಂದ ಅಲ್ಲಿಯ ವರೆಗೆ  ಕಾಯ್ದು ನೀಡುವುದೇ ಉತ್ತಮ ಎಂಬ ನಿರ್ಧಾರಕ್ಕೆ ಯಡಿಯೂರಪ್ಪ ಬಣ  ಬಂದಿದೆ ಎಂದು  ಹೇಳಲಾಗುತ್ತಿದೆ ಜೊತೆಗೆ ತಮ್ಮ ಜನ್ಮ ದಿನವಾದ ಸೋಮವಾರ ದಂದು  ಮಹತ್ವದ ನಿರ್ಧಾರವನ್ನು ಪ್ರಕಟಿಸಬೇಕೆ ಅಥವಾ  ಬೇಡಿಕೆ ಎಂಬ ಗೊಂದಲದಲ್ಲಿ  ಯಡಿಯೂರಪ್ಪ ಸಿಲುಕಿ ಕೊಂಡಿದೆ.

ಇತ್ತ ಈಶ್ವರಪ್ಪ ಹಾಗೂ ಸದಾನಂದ ಗೌಡರ ಬಣದಲ್ಲಿಯೂ  ಮತ್ತೊಂದು ರೀತಿಯ ತಳಮಳ ಉಂಟಾಗಿದೆ. ಈ ಮೊದಲು ಆರ್. ಅಶೋಕ ಮತ್ತು ಜಗದೀಶ ಶೆಟ್ಟರ ಬಣಗಳು  ಯಡಿಯೂರಪ್ಪನವರಿಂದ ದೂರ ಇದ್ದವು ಈಗ ಆ ಎರಡೂ ಬಣಗಳು ಯಡಿಯೂರಪ್ಪನವರಿಗೆ ಹತ್ತಿರವಾಗಿರುವುದನ್ನು ಈಶ್ವರಪ್ಪ ಹಾಗೂ ಸದಾನಂದ ಗೌಡರ ಕಳವಳಕ್ಕೆ ಕಾರಣವಾಗಿದೆ. ಈ ಬಲವನ್ನು ಯಾವ ರೀತಿಯಿಂದ ಮುರಿಯಬೇಕು ಎಂಬ ತಂತ್ರಗಾರಿಕೆ ನಡೆಯತೊಡಗಿದೆ. ಯಡಿಯೂರಪ್ಪನವರ ಕಡೆಗೆ ಇರುವ ಸಚಿವರಿಗೆ ನಿಮ್ಮ ಸಚಿವ ಸ್ಥಾನವನ್ನು ಕಸಿದು ಕೊಳ್ಳಲಾಗುವುದು ಎಂಬ ಎಚ್ಚರಿಕೆ ಸಂದೇಶವನ್ನು  ರವಾನಿಸಲಾಗುತ್ತಿದೆ. ಜೊತೆಗೆ ಶಾಸಕರಿಗೆ ನಿಮಗೆ ಮುಂದಿನ ಚುನಾವಣೆಯಲ್ಲಿ  ಟಿಕೇಟು ನೀಡುವುದಿಲ್ಲ. ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸುವ ಕಾರ್ಯ ನಡೆಯತೊಡಗಿದೆ. ಆದರೆ ಈ ಎಚ್ಚರಿಕೆಯ ಸಂದೇಶಗಳು ಯಾವ ರೀತಿಯ ಪರಿಣಾಮವನ್ನು  ಉಂಟು ಮಾಡುತ್ತವೆ. ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ಹೊಸ ಪಕ್ಷ ಕಟ್ಟಲಿ ಬೇರೆ ಪಕ್ಷಗಳಿಗೆ ಹೋಗಬೇಕೆಂದರೆ ಅದು ಸಾಧ್ಯವಾಗುತ್ತಿಲ್ಲ ಜೆಡಿಯು ಪಕ್ಷ ರಾಷ್ಟ್ತ್ರಮಟ್ಟದಲ್ಲಿ ಭಾಜಪದೊಂದಿಗೆ ಮೈತ್ರಿಯನ್ನು ಮಾಡಿಕೊಂಡಿರುವುದರಿಂದ ಯಡಿಯೂರಪ್ಪನವರಿಗೆ  ತನ್ನ ಪಕ್ಷದಲ್ಲಿ ಪ್ರವೇಶ ನೀಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಎನ್. ಸಿ.ಪಿ. ಪಕ್ಷ ಸೇರಬೇಕು ಎಂದರೆ ಆ ಪಕ್ಷದ ವರಿಷ್ಠ ನಾಯಕ ಶರದ್ ಪವಾರ ಅವರು ಭ್ರಷ್ಟಾಚಾರಿಗಳಿಗೆ ನಮ್ಮ ಪಕ್ಷದಲ್ಲಿ ಅವಕಾಶವಿಲ್ಲ. ಎಂದು ಹೇಳುತ್ತಿದ್ದಾರೆ. ಹೀಗಾಗಿ ಬಾಜಪ ಬಿಟ್ಟು ಯಡಿಯೂರಪ್ಪ ಬಣ ಹೊರಗೆ ಬಂದರೆ ಯಾವುದೇ ರಾಷ್ಟ್ತ್ರೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಟ್ಟಿದರೆ ಹೊಸ ಪಕ್ಷವನ್ನು ಕಟ್ಟಬೇಕು. ಆದರೆ ನಮ್ಮ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಯಾವುದೇ ಪ್ರಾದೇಶಿಕ ಪಕ್ಷ ತನ್ನ ನೆಲೆಯನ್ನು ಭದ್ರವಾಗಿ ಕಂಡು ಕೊಂಡಿಲ್ಲ ಜೊತೆಗೆ ಶ್ರೀ ರಾಮಲು ತಮ್ಮದೇ ಆದ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಹೀಗಾಗಿ ಮತ್ತೊಂದು ಹೊಸ ಪಕ್ಷ ಕಟ್ಟುವುದು ಜಾಣತನದ ಕಾರ್ಯವಾಗುವುದಿಲ್ಲ ಎಂಬುದು ಅವರ ಬೆಂಬಲಿಗರ ವಾದವಾಗಿರುವುದರಿಂದ ಹೊಸ ಪಕ್ಷಕ್ಕೆ ಬೆಂಬಲ ನೀಡಲು ಅವರು ಹಿಂದೇಟು ಹಾಕತೊಡಗಿದ್ದಾರೆ.

 

loading...

LEAVE A REPLY

Please enter your comment!
Please enter your name here