ಕರದಂಟು ನಾಡು ಸಾಂಸ್ಕೃತಿಕ ರಾಜಧಾನಿ : ಚಂದ್ರಶೇಖರ

0
6

ಕರದಂಟು ನಾಡು ಸಾಂಸ್ಕೃತಿಕ ರಾಜಧಾನಿ : ಚಂದ್ರಶೇಖರ
ಕನ್ನಡಮ್ಮ ಸುದ್ದಿ-ಗೋಕಾಕ : ಗೋಕಾವಿನಾಡು ನಿಜಾರ್ಥದಲ್ಲಿ ಸಾಂಸ್ಕೃತಿಕ ರಾಜಧಾನಿ, ನಿತ್ಯ ನಿರಂತರ ನೂರಾರು ಸಾಂಸ್ಕೃತಿಕ ಸಂಘಟನೆಗಳು ಸಾಂಸ್ಕೃತಿಕ ರಾಜಭಾರಿಗಳಾಗಿ ಸಂಸ್ಕೃತಿ ಸಂವರ್ಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ ಎಂದು ತಡಸಲ ಶ್ರಿÃ ಮಹಾಲಿಂಗೇಶ್ವರ ಸೇವಾ ಸಮಿತಿ, ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದ ನೂತನ ಅಧ್ಯಕ್ಷರ ಪದಗ್ರಹಣ, ೧೭ ನೇ ವಸಂತೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಪ್ರೊÃ. ಚಂದ್ರಶೇಖರ ಅಕ್ಕಿ ಮಾತನಾಡುತ್ತಿದ್ದರು.
ಶುಭೋದಯ ನಿವಾಸದಲ್ಲಿ ೧೨ ಸಂಜೆ ಕರ‍್ಯಕ್ರಮ ಉದ್ಘಾಟಿಸಿ, ಪುಷ್ಟಾ ಮುರಗೋಡ ಹಿರಿಯ ಸಾಹಿತಿ “ಸಾಹಿತ್ಯ ಸಂಸ್ಕೃತಿಯ ಪ್ರಧಾನ ಅಂಗ, ಬದುಕಿಗೆ ಲಾಲಿತ್ಯ ಮಾಧರ‍್ಯ ನೀಡುವದರೊಂದಿಗೆ ಉದಾತ್ತವಾದ ಬದುಕಿನಡೆ ಮನುಷ್ಯನನ್ನು ಮುನ್ನಡೆಸುತ್ತದೆ. ಕವಿವಾಣಿ ಹೂವಾದರೆ, ಜನವಾಣಿ ಕಾಯಿ ಬೇರು. ಸಾಹಿತ್ಯದ ಮೂಲ ಪ್ರಕಾರವೇ ಕಾವ್ಯ. ಅದರ ಮೊದಲ ಹಜ್ಜೆ ಆರಂಭಗೊಡಿದ್ದೆ ದ್ವಿಪದಿ, ತ್ರಿಪದಿ, ಹನಿಗಾವ್ಯ, ಚುಟುಕು ಮೂಲಕವೇ ಮುಂದೆ ಅಕ್ಷರಸ್ಥಗೊಂಡ ನಂತರ ಹಲವು ಪ್ರಕಾರಗಳಲ್ಲಿ ವಿಕಸನಗೊಂಡಿತು” ಎಂದು ಅಭಿಪ್ರಾಯಪಟ್ಟರು. ಅತಿಥಿ ಉಪನ್ಯಾಸಕರಾಗಿ ಪಲ್ಗೊಂಡಿದ್ದ ಪ್ರೊÃ. ಜಿ.ವ್ಹಿ ಮಳಗಿ ‘ಭಾತರದ ಆತ್ಮವೇ ಆಧ್ಯಾತ್ಮ’ ಎಂದರು.
ಈ ವೇದಿಕೆಯಲ್ಲಿ ನಾಡಿನ ಸಾಧಕರಾದ ಡಾ. ರೇಣುಕಾ ದಾಸಣ್ಣವರ, ಸಾಧಿಕ ಹಲ್ಯಾಳ, ಬಸವರಾಜ ಮಂಗಿ ಮತ್ತು ಗಾಯಕ ಕಾಶಪ್ಪ ಸೌಂಸುದ್ದಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿಕಟಪೂರ್ವ ಚುಸಾಪ ಅದ್ಯಕ್ಷರಾದ ಮಹಾಲಿಂಗ ಮಂಗಿ ಹಿರಿಯ ಸಾಹಿತಿಗಳು ಪ್ರಾಸ್ಥಾವಿಕವಾಗಿ ಮಾತನಾಡಿ ಹಾಲಿ ಅದ್ಯಕ್ಷೆ ಶ್ರಿÃಮತಿ ರಾಜೇಶ್ವರಿ ಒಡೆಯರ ಅವರನ್ನು ಗೌರವಿಸಿ ಹೂವಿತ್ತು ಅಧಿಕಾರ ಒಪ್ಪಿಸಿದರು. ಪ್ರತಿಯಾಗಿ ರಾಜೇಶ್ವರಿ “ನಿಮ್ಮೆಲ್ಲರ ಸಹಕಾರ ಸಹಯೋಗ ನಂಬಿ ಈ ಜವಾಬ್ದಾರಿ ಸ್ವಿÃಕರಿಸುತ್ತಿದ್ದೆÃನೆ. ತಮ್ಮ ಪ್ರೊÃತ್ಸಾಹ ಮಾರ್ಗದರ್ಶನದೊಂದಿಗೆ ಯಶಸ್ವಿಯಾಗಿ ನಿರ್ವಹಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೆÃನೆ ಎಂದು ಕೈ ಜೋಡಿಸಿದರು.
ಶ್ರಿÃರಾಮಜಿ ಜಂಗನವರ ಪ್ರಾರ್ಥನೆ ಸಲ್ಲಿಸಿದರೆ, ಪ್ರೊÃ. ಶಿವಲೀಲಾ ಪಾಟೀಲ ನಿರೂಪಣೆ ಮಾಡಿದರು. ಟಿ.ಸಿ.ಮೊಹರೆ, ಶ್ರಿÃವಸಂತ ಕುಲಕರ್ಣಿ, ಶ್ರಿÃರಾಮೇಶ್ವರ ಕಲ್ಯಾಣಶೆಟ್ಟಿ, ಶ್ರಿÃನೀಲಕಂಠ ತೋಟಗಿ, ಜಿ.ಕೆ ಕಾಡೇಶಕುಮಾರ, ಜಯಾನಂದ ಮಾದರ, ಬಸವರಾಜ ಮುರಗೋಡ, ಎಲ್.ಎಸ್. ಚೌರಿ, ಕೆ.ಡಿ. ಇಂಚಲ, ಭಾರತಿ ಮದಭಾವಿ, ಪ್ರಮಿಳಾ ಜಕ್ಕನ್ನವರ ಬಿರಾದಾರ ಪಾಟೀಲ್, ಬಿರಾದಾರ ಪಾಟೀಲ್, ಕುರುಬಗಟ್ಟಿ, ಕಾಶಪ್ಪ ಕಲಾಲ, ಎಮ್.ಬಿ.ಅತ್ತಾರ, ಶ್ರಿÃವಿವೇಕ ಜತ್ತಿ, ವಿಜಯ ಜತ್ತಿ, ಪ್ರೊÃ. ರಾಜಶೇಖರ ಗುಣಕಿ ಅನೇಕರು ಉಪಸ್ಥಿತರಿದ್ದರು.

loading...