ಕರ್ನಾಟಕದಲ್ಲಿ ಸಂಸ್ಕøತಿ, ಇತಿಹಾಸ, ಪರಂಪರೆಗಳಿಗೆ ವಿಶೇಷವಾದ ಗೌರವ:ರೇಣುಕಾನಂದ ಸ್ವಾಮೀಜಿ

0
37

ಸಿದ್ದಾಪುರ,4: ದೇಶದ ಎಲ್ಲ ರಾಜ್ಯಗಳಿಗಿಂತ ಕರ್ನಾಟಕ ರಾಜ್ಯ
ವಿಭಿನ್ನವಾಗಿರುವುದರಿಂದಲೇ ಇಲ್ಲಿಯ ಸಂಸ್ಕøತಿ, ಇತಿಹಾಸ, ಪರಂಪರೆಗಳಿಗೆ ವಿಶೇಷವಾದ ಗೌರವ ಇದೆ ಎಂದು ತೀರ್ಥಹಳ್ಳಿ ತಾಲೂಕಿನ ಉಂಚನಕಟ್ಟೆ ನಾರಾಯಣ ಗುರುಸ್ವಾಮಿ ಮಠದ ಶ್ರೀ ರೇಣುಕಾನಂದ ಸ್ವಾಮೀಜಿಯವರು ತಿಳಿಸಿದರು.
ಅವರು ಸೋಮವಾರ ತಾಲೂಕಿನ ಹಸ್ವಂತೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಪರ ಸಂಘಟನೆಗಳ ಒಕ್ಕೂಟ ಹಸ್ವಂತೆ ಇವರ ವತಿಯಿಂದ ಆಯೋಜಿಸಿದ್ದ ಐದನೇ ಕನ್ನಡ ರಾಜ್ಯೋತ್ಸವದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಕನ್ನಡ ನಾಡು,ನುಡಿ, ಜಲದ ಬಗ್ಗೆ ಅನ್ಯಾಯವಾದಾಗ ಕನ್ನಡಿಗರೆಲ್ಲ ಸೇರಿ ರಾಜಕೀಯದಿಂದ ಹೊರಬಂದು ಹೋರಾಡಬೇಕು. ನಮ್ಮ ಮಕ್ಕಳಿಗೆ ನಮ್ಮ ಭಾಷೆಯ ಕುರಿತು ತಿಳುವಳಿಕೆ ನೀಡುವುದರ ಜೊತೆಗೆ ನಮ್ಮ ನಾಡಿನ ಸಂಸ್ಕøತಿ, ಕಲೆ, ಸಾಹಿತ್ಯವನ್ನು ಪರಿಚಯ ಮಾಡಿಕೊಡುವ ಕೆಲಸ ಪ್ರತಿ ಮನೆ ಮನೆಯಲ್ಲಿ ಆಗಬೇಕು.
ಕನ್ನಡಿಗರಾದ ನಾವೇ ನಮ್ಮ ಭಾಷೆಯನ್ನಾಡಲು ಅಸಹ್ಯ ಪಟ್ಟರೆ ಕನ್ನಡಿಗರಾದ ನಾವು ಉದ್ದಾರವಾಗುವುದಿಲ್ಲ.
ಕನ್ನಡದ ಉಳಿವಿಗಾಗಿ ಅನೇಕ ದಾರ್ಶನಿಕರು, ಚಿಂತಕರು, ದಾಸರು, ಕವಿಗಳು, ಸಾಹಿತಿಗಳು, ಕಲಾವಿದರು ತ್ಯಾಗಮಾಡಿದ್ದಾರೆ. ಅಂಥವರ ಶ್ರಮ ಸಾರ್ಥಕವಾಗಬೇಕಾದರೆ ನಮ್ಮ ನಡೆ ನುಡಿಯಲ್ಲಿದೆ. ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಾಡಿನ ಅಭಿವೃದ್ಧಿ ಹಾಗೂ ರಕ್ಷಣೆ ವಿಚಾರದಲ್ಲಿ ಎಲ್ಲರದ್ದು ಒಂದೇ ಧ್ವನಿಯಾಗಿದ್ದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ನಿಜವಾದ ಕನ್ನಡ ಇರುವುದರಿಂದಲೇ ಹೆಚ್ಚು ವಿಶೇಷತೆ ಕಾಣಬಹುದಾಗಿದೆ ಎಂದರು.
ಮನಮನೆ ಗ್ರಾ.ಪಂ. ಅಧ್ಯಕ್ಷ ವೀರಭದ್ರ ನಾಯ್ಕ ಮನಮನೆ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಜಿ.ಪಂ.ಸದಸ್ಯ ಈಶ್ವರ ಎಸ್.ನಾಯ್ಕ, ತಾಲೂಕು ಈಡಿಗ ಸಮಾಜದ ಅಧ್ಯಕ್ಷ ಕೆ.ಜಿ.ನಾಯ್ಕ ಹಸ್ವಂತೆ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಸಂತ ನಾಯ್ಕ, ಮಾರುತಿ ಟಿ. ನಾಯ್ಕ ಹೊಸೂರು,ಜಿಲ್ಲಾ ಕರವೇ ಅಧ್ಯಕ್ಷ ಆಕಾಶ್ ಕೊಂಡ್ಲಿ, ಗ್ರಾ.ಪಂ. ಉಪಾಧ್ಯಕ್ಷೆ ರೂಪಾ ಪಿ.ನಾಯ್ಕ ಇತರರಿದ್ದರು.
ಯಕ್ಷಗಾನ ಕಲಾವಿದ ಕೃಷ್ಣ ಜಿ.ನಾಯ್ಕ ಬೇಡ್ಕಣಿ, ಸಹಾಯಕ ಸರ್ಕಾರಿ ಅಭಿಯೋಜಕ ಗೋಪಾಲ ಐ.ನಾಯ್ಕ ಅವರನ್ನು ಶ್ರೀಗಳು ಸನ್ಮಾನಿಸಿದರು.
ಶ್ರೀಧರ ನಾಯ್ಕ, ಸೋಮ ಎನ್.ನಾಯ್ಕ, ಗುರುಮೂರ್ತಿ ಪಿ.ನಾಯ್ಕ, ಸುಧಾಕರ ವಿ.ನಾಯ್ಕ, ಪರಶುರಾಮ ನಾಯ್ಕ, ಚಂದ್ರಶೇಖರ ನಾಯ್ಕ ನಿರ್ವಹಿಸಿದರು.

loading...

LEAVE A REPLY

Please enter your comment!
Please enter your name here