ಕರ್ನಾಟಕವನ್ನು ವ್ಯಸನಮುಕ್ತ ರಾಜ್ಯ ಮಾಡಲಾಗುವುದು: ಸಚಿವ ರಾಮಲಿಂಗಾ ರೆಡ್ಡಿ

0
67

ಕನ್ನಡಮ್ಮ ಸುದ್ದಿ
ಸುವರ್ಣ ವಿಧಾನ‌ ಸೌಧ ( ಪರಿಷತ್) : 14 ರಾಜ್ಯದಲ್ಲಿ ಯುವಜನಾಂಗ ಗಾಂಜಾ ಹಾಗೂ ಅಫೀಮನಂಥ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಮಾದಕ ವಸ್ತುಗಳ ಮಾರಾಟ ಮಾಡುವವರಿಗೆ ಗೂಂಡಾ ಕಾಯ್ದೆ ಹಾಕುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಅವರು ಮಂಗಳವಾರ ವಿಧಾನ ಪರಿಷತ್ ಸಭಾಂಗಣದಲ್ಲಿ ವಿಪ ಸದಸ್ಯ ಐವಾನ್ ಡಿಸೋಜಾ ಅವರ ಗಮನ ಸೇಳೆಯುವ ಸೂಚನೆಗಳ ಪ್ರಶ್ನೆಗೆ ಉತ್ತರಿಸುತ್ತ, ರಾಜ್ಯದಲ್ಲಿ ಇತ್ತೀಚಿನ ದಿನಮಾನಗಳಲ್ಲಿ ಯುವ ಜನಾಂಗ ಅಫೀಮು ಹಾಗೂ ಗಾಂಜಾದಂಥ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ‌. ಇದು ಶಾಲಾ ಕಾಲೇಜುಗಳಲ್ಲಿ ಹೆಚ್ಷಾಗಿ ನಡೆಯುತ್ತಿದೆ‌. ಮಾದಕ ವಸ್ತುಗಳನ್ನು ಮಾರಾಟ ಮಾಡುವವರನ್ನು ಬಂಧಿಸುವದಲ್ಲದೆ, ಓರಿಸಾದಿಂದ ಗಾಂಜಾ ಹಾಗೂ ಅಫೀಮು ಬರುತ್ತಿದೆ. ಅಲ್ಲಿ ಹೋಗಿ ಬೇರು ಮಟ್ಟದಲ್ಲಿ ಅದಕ್ಕೆ ಕಡಿವಾಣ ಹಾಕಬೇಕು ಮತ್ತು ಗಾಂಜಾ ಬೆಳೆಯುವವರ ಮೇಕೆ ಗೂಂಡಾ ಕಾಯ್ದೆ ಹಾಕುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ರಾಜ್ಯದಲ್ಲಿ ಹುಕ್ಕಾ ಬಾರ್ ಗಳನ್ನು ಬಂದ್ ಮಾಡಿಸಲಾಗಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಸೇವನೆ ಮಾಡುತ್ತಿದ್ದಾರೆ. ಇವುಗಳು ನಡೆಯದಂತೆ ಕ್ರಮಕೈಗೊಳ್ಳಬೇಕು ಅಲ್ಲದೆ ಓಸಿ, ಮಟ್ಕಾ, ಕ್ರಿಕೇಟ್ ಬೆಟ್ಟಿಂಗ್ ನಡೆಸುವವರ ಮೇಲೆಯೂ ಕ್ರಮ ತೆಗೆದುಕೊಂಡು ಗೂಂಡಾ ಕಾಯ್ದೆ ಹಾಕುವಂತೆ ಸೂಚಿಸಿದ್ದೇನೆ ಎಂದರು.
ವಿಧಾನ ಸಭಾ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಗಾಂಜಾ ಹಾಗೂ ಅಫೀಮು ಯುವಜನಾಂಗದ ಮೇಲೆ ಮಾರಕವಾಗಿ ಪರಿಣಮಿಸುತ್ತಿದೆ. ಶಾಲಾ, ಕಾಲೇಜಿನ ಮಕ್ಕಳ ಇಂಥ ಮಾರಕ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಕಳವಳವ್ಯಕ್ತಪಡೆಸಿದರು.
ರಾಜ್ಯದ ಗಡಿ ಭಾಗಗಳಲ್ಲಿ ಎಚ್ಚೇತವಾಗಿ ಡ್ರಗ್ಸ್, ಗಾಂಜಾ ಹಾಗೂ ಅಫೀಮು ಮಾಫೀಯಾ ಮಾರಕವಾಗಿ ಬೆಳೆಯುತ್ತಿದೆ.ಶಾಲಾ ಕಾಲೇಜುಗಳ ಆವರಣದಲ್ಲಿರುವ. ವಿದ್ಯಾರ್ಥಿಗಳ ಗುಂಪನ್ನು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಗೂಡಂಗಡಿಗಳಲ್ಲಿ ಸಿಗರೆಟ್ ನಲ್ಲಿ ಗಾಂಜಾ ಸೇರಿಸಿ ಮಾರಾಟ ಮಾಡುತ್ತಿರುವುದು ಸಾಕಷ್ಟು ಪ್ರಮಾಣದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಇದಕ್ಕೆ ಮೊದಲು ಕಡಿವಾಣ ಹಾಕಬೇಕಿದೆ ಎಂದರು.
ಪಿಜಿ ಸೆಂಟರ್ ನಲ್ಲಿ ಎಚ್ಛೇತವಾಗಿ ಗಾಂಜಾ ಸೇವನೆ ಮಾಡುತ್ತಿದ್ದಾರೆ.80% ಮಕ್ಕಳು ಪಿಜಿಯಲ್ಲಿರುವ ಮಕ್ಕಳು ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಪೊಲೀಸರಿಗೆ ಹೆಚ್ಚಿನ ಬಲನೀಡಿ ಇಂಥ ಮಾದಕ‌ ವಸ್ತುಗಳ‌ ಮಾರಾಟ ಹಾಗೂ ಸೇವನೆ ಮಾಡುವವರ ಮೇಲೆ‌ ಕಠಿಣ ಕ್ರಮ ಕೈಗೊಳ್ಳಬೇಕಿದೆ. ರಾಜ್ಯದ ಔಷಧಿ ಅಂಗಡಿಗಳಲ್ಲಿ ಮಾಧಕ ವಸ್ತುಗಳ ಹೆಚ್ಚಾಗಿ ಮಾರಾಟ ಮಾಡುತ್ತಿದ್ದಾರೆ. ಇದು ಸಮಾಜಕ್ಕೆ ಒಂದು ದೊಡ್ಡ ಸವಾಲ್ ಆಗಿ ಪರಿಣಮಿಸಿದೆ‌ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾದಕ ವಸ್ತುಗಳಿಗೆ ಅತೀ ಹೆಚ್ಚು ಯುವಜನಾಂಗ ಬಲಿಯಾಗುತ್ತಿರುವುದು ವಿಪರ್ಯಾಸದ ಸಂಗತಿ. ಗೃಹಸಚಿವರು ಬರುವ ದಿನಗಳಲ್ಲಿ ಕರ್ನಾಟಕ ರಾಜ್ಯವನ್ನು ವ್ಯಸನ, ಮಾಧಕ‌ ಮುಕ್ತ ರಾಜ್ಯ ಮಾಡಬೇಕೆಂದು ಡಿಸೋಜಾ ಸಲಹೆ ನೀಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ ಮಾತನಾಡಿ, ರಾಜ್ಯದಲ್ಲಿ ಗಾಂಜಾ ವ್ಯವಹಾರ ಮಾಡುವವರ ಮೇಲೆ ಕಠಿಣ ಶಿಕ್ಷೆ ನೀಡುವ ಅಧಿಕಾರವನ್ನು ಪೊಲೀಸರಿಗೆ ನೀಡಬೇಕಿದೆ. ಕರ್ನಾಟಕ ರಾಜ್ಯವನ್ನು ವ್ಯಸನಮುಕ್ತವನ್ನಾಗಿ ಮಾಡಲು ಎಲ್ಲ ಸ್ಥಳೀಯ ಶಾಸಕರುಗಳು ಪೊಲೀಸ್ ಇಲಾಖೆಗೆ ಸಾಥ್ ನೀಡಬೇಕು ಅಂದಾಗ ಮಾತ್ರ ಇದನ್ನು ಮಟ್ಟ ಹಾಕಲು ಸಾಧ್ಯವಾಗುತ್ತದೆ ಎಂದರು.

 

loading...