ಕರ್ನಾಟಕ ಸರಕಾರ ಮರಾಠಿಗರ ಮೇಲೆ ಹಿಟ್ಲರ್ ಆಡಳಿತ ನಡೆಸುತ್ತಿದೆ: ಸಬ್ಸೀಸ್

0
8

ಬೆಳಗಾವಿ

ಮರಾಠಿಗರ ಹಕ್ಕು ಕಸಿದುಕೊಳ್ಳುವ ಮೂಲಕ ಪ್ರಜಾಪ್ರಭುತ್ವ ಕಗ್ಗೊಲೆ ಮಾಡುವ ಮೂಲಕ‌ ಕರ್ನಾಟಕ ಸರ್ಕಾರ ಹಿಟ್ಲರ್ ಶಾಹಿ ಆಡಳಿತ ನಡೆಸುತ್ತಿದೆ. ಆದ್ದರಿಂದ ‌ಕೇಂದ್ರ‌ ಸರ್ಕಾರ ಕರ್ನಾಟಕ ‌ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸಬೇಕು‌ ಎಂದು ಮಾರಾಠಿ ಸಾಹಿತಿ ಡಾ.ಶ್ರೀಪಾಲ್ ಸಬ್ನೀಸ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಹೊಸ ಹಿಟ್ಲರ್‌ಶಾಹಿ ನಿರ್ಮಾಣವಾಗಿದೆ’
‘ಭಾಷೆಗಳ ಮೇಲೆ ದಬ್ಬಾಳಿಕೆ ಏಕೆ ಮಾಡ್ತೀರಾ?’, ಭಾಷೆಗಳ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಕರ್ನಾಟಕ ಸರ್ಕಾರ ಮಾಡ್ತಿದೆ’ ಮರಾಠಿ ಭಾಷಿಕರು ಕನ್ನಡಿಗರನ್ನು ವಿರೋಧಿಸಲ್ಲ. ದೇಶಕ್ಕೆ ವಿಶ್ವಗುರು ಬಸವಣ್ಣ, ಕನಕದಾಸರು ಹಾಗೂ ಹಿರಿಯ ಸಾಹಿತಿ‌ ಎಸ್.ಎಲ್. ಬೈರಪ್ಪ ಅವರು ಅತಿ ದೊಡ್ಡ ಕೊಡುಗೆ ನೀಡಿದ್ದಾರೆ. ಅಂತಹದರಲ್ಲಿ ಮರಾಠಿ ಭಾಷೆಯ ಮೇಲೆ‌ ದಬ್ಬಾಳಿಕೆ ನಡೆಸುತ್ತಿರುವುದು‌‌ ಕರ್ನಾಟಕ ಸರ್ಕಾರಕ್ಕೆ ಶೋಭೆ ತರುವುದಿಲ್ಲ‌‌ ಎಂದು‌‌ ಕಿಡಿಕಾರಿದರು.

loading...