ಕಲಘಟಗಿ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಒತ್ತಾಯಿಸಿ ಮುಖ್ಯ ಮಂತ್ರಿಗಳಿಗೆ ಮನವಿ.

0
49

ಹುಬ್ಬಳ್ಳಿ, ಆ. : ಧಾರವಾಡ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಕಲಘಟಗಿ ಕಬ್ಬು ಬೆಳೆಗಾರರು ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು, ಕಲಘಟಗಿ ಕ್ಷೇತ್ರದ ಶಾಸಕರಾದ ಸಂತೋಷ ಲಾಡ್ ಇವರ ಸಮ್ಮುಖದಲ್ಲಿ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಒತ್ತಾಯಿಸಿ ಮನವಿ ಅರ್ಪಿಸಲಾಯಿತು.

ಈಗಾಗಲೇ ಕಲಘಟಗಿ ತಾಲೂಕಿನ ಬಾನಗಿತ್ತಿ ಗುಡಿಹಾಳ ಗ್ರಾಮದಲ್ಲಿ ಅಂದಾಜು ಸುಮಾರು 120 ಎಕರೆ ಭೂಮಿಯನ್ನು ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಖರೀದಿಸಿದ್ದು ಇದಕ್ಕೆ ಸಂತೋಷ ಲಾಡ್ ಅವರು ಕಳೆದ ಅವಧಿಯಲ್ಲಿ ಸರಕಾರದ ಮಟ್ಟದಲ್ಲಿ ಯತ್ನಿಸಿದರು. ಆದರೆ ಈ ಹಿಂದಿನ ಬಿಜೆಪಿ ಸರಕಾರ ಈ 120 ಎಕರೆ ಭೂಮಿಯನ್ನು ಹಸಿರು ವಲಯವನ್ನಾಗಿ ಪರಿವರ್ತಿಸುವ ಮೂಲಕ ಈ ಭಾಗದ ರೈತರ ಕನಸಿಗೆ ಧಕ್ಕೆ ತಂದಿದ್ದಾರೆ.

ರೈತರ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಖರೀದಿಸಿರುವ 120 ಎಕರೆ ಭೂಮಿಯನ್ನು ಕೈಗಾರಿಕಾ ವಲಯವನ್ನಾಗಿ ಪರಿವರ್ತಿಸಿ ಸಕ್ಕರೆ ಕಾರಖಾನೆ ಸ್ಥಾಪನೆಗೆ ಅನುವು ಮಾಡಿಕೊಡುವಂತೆ ಮನವಿ ಅರ್ಪಿಸಿದ್ದಾರೆ. ನಿಯೋಗದ ನೇತೃತ್ವವನ್ನು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷರಾದ ಎಸ್.ಎನ್. ಬನವಣ್ಣವರ, ರಾಜ್ಯ  ಕಾರ್ಯದರ್ಶಿ ನಿಜಗುಣಿ ಕೆಲಗೇರಿ, ವಿದ್ಯುತ್ ಪಂಪ್ಸೆಟ್ಟ ಬಳಕೆದಾರರ ಜಿಲ್ಲಾ ಅಧ್ಯಕ್ಷರಾದ ಉಳವಪ್ಪ ಬಳಗೇರ, ಬಿ.ಎಂ. ಹನಸಿ, ಎ.ಪಿ.ಎಂ.ಸಿ. ಸದಸ್ಯ ರಾಜಶೇಖರ. ಮೆಣಸಿನಕಾಯಿ ವಹಿಸಿದರು. ಈ ಸಂದರ್ಭದಲ್ಲಿ  ರೈತ ಮುಖಂಡರುಗಳಾದ ನಾಗನಗೌಡ. ಪಾಟೀಲ, ಮಾರುತಿ ಗೌಡರ, ನೀಲಕಂಠಪ್ಪ.ಧೂಳಿಕೊಪ್ಪ, ಉಮೇಶ ಕೊಪ್ಪದ, ಮುದುಕಪ್ಪ ಕರಲಟ್ಟಿ, ಬಸವರಾಜ ಆಲದಕಟ್ಟಿ, ಸಹದೇವ ವಸಂತ ಡಾಕಪ್ಪನವರ, ಸುಭಾಶ ಮುದಿಗೌಡರ, ಮಲ್ಲಪ್ಪ ಅಂಗಡಿ, ಉಳವಪ್ಪ ತಡಸ, ನಿಂಗಪ್ಪ ಅಡಗಿಮನಿ, ಸೇರಿದಂತೆ ನೂರಾರು ರೈತ ಬಾಂಧವರು ಉಪಸ್ಥಿತರಿದ್ದರೆಂದು ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಜಗುಣಿ ಕೆಲಗೇರಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here