ಕಲೆಗಳನ್ನು ಬೆಳೆಸಲು ಸಂಘ ಕಾರ್ಯೋನ್ಮುಖವಾಗಲಿ

0
1

ಕನ್ನಡಮ್ಮ ಸುದ್ದಿ, ಧಾರವಾಡ: ಅನೇಕ ಕವಿಗಳ ಭಾವನೆ ಅರಳಿಸಿ, ಚಿಂತಕರ ಚಿಂತನೆಗಳನ್ನು ಕೆರಳಿಸಲು ಪೂರಕವಾದ ಕೆಲಗೇರಿಯ ಪರಿಸರ ಈಗ ಕೆಲಗೇರಿ ಶ್ರಿÃ ಕಲ್ಮೆÃಶ್ವರನ ಸುಕ್ಷೆÃತ್ರವಾಗಿ ಪ್ರವಾಸಿಗರನ್ನು ಕೈ ಮಾಡಿ ಕರೆಯುತ್ತಿದೆ ಎಂದು ಮನಸೂರಿನ ರೇವಣಸಿದ್ದೆÃಶ್ವರ ಮಹಾಮಠದ ಶ್ರಿÃ ಬಸವರಾಜದೇವರು ಹೇಳಿದರು.
ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಶ್ರಿÃ ಕಲ್ಮೆÃಶ್ವರ ಕಲಾ ಸಂಸ್ಥೆಯ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನದಲ್ಲಿ ಮಾತನಾಡಿದರು. ಇಲ್ಲಿಯ ಜನ ಸಹೃದಯರು. ಇಂತಹ ಪವಿತ್ರ ನೆಲದಲ್ಲಿ ಸ್ಥಾಪಿತವಾದ ಈ ಸಂಸ್ಥೆ ಉತ್ತಮೋತ್ತಮವಾದ ಕೆಲಸಗಳನ್ನು ಮಾಡಲಿ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಮಾತನಾಡಿ, ಕಲೆಯ ತವರೂರು ಕೆಲಗೇರಿ. ಇಲ್ಲಿ ಕರಡಿ ಮಜಲು, ಹೆಜ್ಜೆ ಮೇಳ, ಡೊಳ್ಳು, ಜಗ್ಗಲಗಿ, ಭಜನೆ, ದೊಡ್ಡಾಟ, ಸಣ್ಣಾಟ, ನಾಟಕ, ಮೂರ್ತಿ ನಿರ್ಮಾಣ ಕಲೆ ಮುಂತಾದ ಎಲ್ಲ ಕಲಾವಿದರು ಸಿಗುತ್ತಾರೆ.ಇಂತಹ ಕಲೆಗಳನ್ನು ಇನ್ನೂ ಬೆಳೆಸಲು ಸಂಘ ಕಾರ್ಯೋನ್ಮುಖವಾಗಲಿ ಎಂದರು.
ಕಲಾಸಂಗಮ ಸಂಸ್ಥೆಯ ಅಧ್ಯಕ್ಷ ಪ್ರಭು ಹಂಚಿನಾಳ ಸಮಾರಂಭ ಉದ್ಘಾಟಿಸಿದರು. ಕರ್ನಾಟಕ ಚಲನಚಿತ್ರೊÃದ್ಯಮ ಕ್ಷೆÃಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸೋಮಶೇಖರ ಜಾಡರ, ಶ್ರಿÃ ಕಲ್ಮೆÃಶ್ವರ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷರಾದ ರುದ್ರಗೌಡ ಪಾಟೀಲ, ಹು.ಧಾ.ಮ.ನ.ಸಭೆಯ ಮಾಜಿ ಸದಸ್ಯರಾದ ಶ್ರಿÃಮತಿ ವಿಜಯಲಕ್ಷಿö್ಮ ಲೂತಿಮಠ ಶ್ರಿÃ ಕಲ್ಮೆÃಶ್ವರ ಕಲಾ ಸಂಸ್ಥೆಯ ಅಧ್ಯಕ್ಷ ವೀರನಗೌಡ ಸಿದ್ಧಾಪೂರ ವೇದಿಕೆಯಲ್ಲಿದ್ದರು. ಬಸನಗೌಡಾ ಸಿದ್ದಾಪೂರ ಅಧ್ಯಕ್ಷತೆ ವಹಿಸಿದ್ದರು. ಕಿರಣ ಸಿದ್ದಾಪೂರ ವಂದಿಸಿದರು.

loading...