ಕಲೆಯಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ: ಭಟ್ಟ

0
81

ಕನ್ನಡಮ್ಮ ಸುದ್ದಿ-ಸಿದ್ದಾಪುರ: ಕಲೆಗಳು ಮನಸ್ಸನ್ನ ಪ್ರಸನ್ನಕರಿಸುತ್ತವೆ. ಕಲೆಯಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಜಾನಪದ ಲೋಕ ರಾಜ್ಯ ಪ್ರಶಸ್ತಿ ಪುರಸ್ಕೃತ, ಗ್ರಾಮ ಪಂಚಾಯತ ಸದಸ್ಯ ಜಿ.ಎಮ್‌.ಭಟ್ಟ.ಕೆ.ವಿ. ಅಭಿಪ್ರಾಯಪಟ್ಟರು.
ಅವರು ಶುಭ ಮಂಗಳ ಕಲಾ ಸಾಹಿತ್ಯ ವೇದಿಕೆ, ಹೆಗ್ಗರಣಿ,ನಿಲ್ಕುಂದ,ತಂಡಾಗುಂಡಿ,ಅಣಲೇಬೈಲ್‌ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಸ್ವಾಮಿವಿವೇಕಾನಂದ ಪ್ರೌಢ ಶಾಲೆಯ ಶ್ರೀಮಾತಾ ಸಭಾಭವನದಲ್ಲಿ ನಡೆದ ಗ್ರಾಮೀಣ ಪ್ರತಿಭೆಗಳ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಳ್ಳಿಗಳಲ್ಲಿ ತೆರೆಯ ಮರೆಯಲ್ಲಿ ಅಗಾದ ಪ್ರತಿಭೆಗಳಿವೆ. ಅವುಗಳನ್ನು ಗುರುತಿಸಲು ಸೂಕ್ತ ವೇದಿಕೆಯ ಅವಶ್ಯಕತೆ ಇದೆ. ಯಾವುದೇ ಕಲೆಯಲ್ಲಿ ಅಭಿರುಚಿ ಕೋಡು ಇಲ್ಲದ ಎತ್ತಿನ ಹಾಗೆ. ಉತ್ತಮ ಆರೋಗ್ಯಕ್ಕೆ ಸಂಗೀತ ಅತ್ಯುತ್ತಮ ಸಾಧನ. ಹಾಗೇನೆ ಹಿತಕರವಾದ ಬರಹದಿಂದ ಸಮಾಜದ ಎಳಿಗೆ ಸಾಧ್ಯ. ಶುಭ ಮಂಗಳ ಕಲಾ ಸಾಹಿತ್ಯ ವೇದಿಕೆ ಪ್ರತಿಭೆಗಳಿಗೆ ಉತ್ತಮ ಅವಕಾಶ ಕಲ್ಪಿಸಿದೆ ಎಂದರು.
ಗೌರವಾಧ್ಯಕ್ಷತೆ ವಹಿಸಿದ್ದ ಹೆಗ್ಗರಣಿ ಗ್ರಾಮ ಪಂಚಾಯತ ಅಧ್ಯಕ್ಷೆ ಸುಮನಾ ಹೆಗಡೆ ಮಾತನಾಡಿ ಟಿವಿ, ಮೋಬೈಲ್‌ ಗಳಲ್ಲಿ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ. ವೇದಿಕೆಯವರು ಕಲೆಯನ್ನು ಉಳಿಸುವ ಕಾರ್ಯ ಮಾಡುತ್ತಿದೆ ಎಂದರು. ಊರಿನ ಪ್ರಮುಖರಾದ ಅಬ್ದುಲ್‌ ಬಾರಿ ಹುಸೇನ್‌ ಸಾಬ್‌ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ತಂಡಾಗುಂಡಿಗ್ರಾಮ ಪಂಚಾಯತ ಅಧ್ಯಕ್ಷೆ ಕಲಾವತಿ ಗೌಡ, ಹೆಗ್ಗರಣಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಹೇಶ ಗೌಡ, ಪ್ರೌಢ ಶಾಲೆ ಮುಖೋಧ್ಯಾಪಕ ಗುರುಶಾಂತ ಸಿ.ಎಮ್‌, ಶುಭ ಮಂಗಳ ಕಲಾ ಸಾಹಿತ್ಯ ವೇದಿಕೆ ಅಧ್ಯಕ್ಷ ರಾಘವೇಂದ್ರ, ನೀರ್ಣಾಯಕ ಅಶ್ರಫ್‌ ಜೋಗ, ಸುಬ್ರಹ್ಮಣ್ಯ ಭಟ್ಟ ಊಪಸ್ಥಿತರಿದ್ದರು.

loading...