ಕಳಪೆ ಕಾಮಗಾರಿಗೆ ಅಧಿಕಾರಿಗಳ ಮೇಲೆ ಆಕ್ರೌಶ

0
14

ಮೂಡಲಗಿ,9-ಇಲ್ಲಿಯ ಪುರಸಭೆಯ ವಾರ್ಡ ನಂಬರ 14 ರಲ್ಲಿ ನಡೆದ ಕಳಪೆ ಕಾಮಗಾರಿ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಮೇಲೆ ಆಕ್ರೌಶ ವ್ಯಕ್ತ ಪಡಿಸಿದ ಅದೇ ವಾರ್ಡಿನ ಸದಸ್ಯ ಮಲ್ಲಪ್ಪ ಮದಗುಣಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಸಿದ್ದಾರೆ.

ಅವರು ತಮ್ಮ ವಾರ್ಡಿನ ಜನರ ಕುಂದು ಕೊರತೆಗಳಿಗೆ  ಆಲಿಸಲು ಮತ್ತು  ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಬೆಟ್ಟಿ ನೀಡಿದ ಮದಗುಣಕಿ, ಗಟಾರುಗಳಲ್ಲಿ ನೀರು ಹರಿಯದೇ  ಸೊಳ್ಳೆಗಳ ಕಾಟ ಹೆಚ್ಚಾಗಿ ದುರ್ಗಂಧ ಬೀಸಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ.

ಶೌಚಾಲಯಗಳಲ್ಲಿ ನೀರಿಲ್ಲದೇ ಸಾರ್ವಜನಿಕರ ಗೋಳು ಕೇಳುವವರ್ಯಾರು ಎಂದು ಸಿಡಿಮಿಡಿಗೊಂಡು ಕೂಡಲೇ ಗಟಾರು ಸ್ವಚ್ಛಗೊಳಿಸಬೇಕು. ಕುಡಿಯುವ ನೀರಿನ  ತೊಂದರೆಯನ್ನು ನಿವಾರಿಸಬೇಕು ಎಂದು ಎಚ್ಚರಿಸಿದ್ದರು.  ಇದೇ ಸಂದರ್ಭದಲ್ಲಿ  ಮುಖ್ಯ ಮಂತ್ರಿಗಳ  ಬರ ಪರಿಹಾರ ನಿಧಿಯಲ್ಲಿ ಮಂಜೂರಾದ ಕೊಳವೆ ಬಾವಿ ಕೊರೆಸಲು ಸ್ಥಳ ನಿಗದಿ ಮಾಡಿದರು. ಈ ಸಂದರ್ಭದಲ್ಲಿ ಪುರಸಭೆಯ ಅಭಿಯಂತರ ವರ್ಧಮಾನ ಹುದ್ದಾರ, ಆರೋಗ್ಯ ನೀರೀಕ್ಷ  ಚಿದಾನಂದ ಮುಗಳಖೋಡ  ಯುವ ಧುರೀಣರಾದ ಶಿವಬಸು ಸುಣದೋಳಿ, ಮೈಬೂಬ ಯಾದವಾಡ, ದೇವೇಂದ್ರ ಮಾನೆ, ಗಂಗಯ್ಯ ಹಿರೇಮಠ ಡಾ. ನಾಯಿಕ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here