ಕಳಸಾ ಬಂಡೂರಿ ಅನುಷ್ಠಾನಕ್ಕೆ ಆಗ್ರಹಿಸಿ ದೀರ್ಘ ದಂಡ ನಮಸ್ಕಾರ

0
30

ಕನ್ನಡಮ್ಮ ಸುದ್ದಿ-ಗದಗ: ಕಳಸಾ ಬಂಡೂರಿ ಯೋಜನೆಗೆ ಅನುಷ್ಠಾನಕ್ಕೆ ಆಗ್ರಹಿಸಿ ಕಳೆದ ಮೂರು ವರ್ಷಗಳಿಂದ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿರುವ ಹೋರಾಟವನ್ನು ಬೆಂಬಲಿಸಿ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಶನಿವಾರ ನಗರದಲ್ಲಿ ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಸರಕಾರದ ಗಮನ ಸೆಳೆದರು.
ರೈತ ಹುತಾತ್ಮ ದಿನಾಚರಣೆ ನರಗುಂದ ಬಂಡಾಯವೆದ್ದು ಸರ್ಕಾರವನ್ನೆ ಕಿತ್ತೊಗೆದು 38 ವರ್ಷಗಳ ಕಾಲವಾಯಿತು. ಇದೇ ನರಗುಂದದಲ್ಲಿ ಕಳಸಾಬಂಡೂರಿ ಯೋಜನೆ ಜಾರಿಗಾಗಿ ನಿರಂತರ ಹೋರಾಟ ಪ್ರಾರಂಭವಾಗಿ 3 ವರ್ಷ ಕಳೆದರೂ ನಮ್ಮನಾಳುವ ಸರ್ಕಾರಗಳು ಈ ಯೋಜನೆ ಬಗ್ಗೆ ಕಿಂಚಿತ್ತು ತಲೆ ಕೆಡಿಸಿಕೊಳ್ಳುತ್ತಿಲ್ಲ ಯೋಜನೆ ಅನುಷ್ಠಾನಕ್ಕಾಗಿ 3 ದಶಕಗಳ ಹಿಂದೆ ರಾಜಕಾರಣಿಗಳು ರೈತರಿಗೆ ಬೋಗಳೆ ಬಿಡುತ್ತಾ ಸುಳ್ಳು ಆಶ್ವಾಸನೆ ನೀಡುತ್ತಾ ಬಂದಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ, ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರ ಈ ತರಹ ಗಂಡ ಹೆಂಡಿರ ನಡುವೆ ಕೂಸು ಬಡವಾಯಿತು ಎಂದ ಹಾಗೇ ರೈತರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ಆಡಳಿತ ನಡೆಸುವ ಸರಕಾರದ ಕಾರ್ಯವೈಖರಿಯನ್ನು ಖಂಡಿಸಿದರು.
ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಗದಗ ಭೂಮರಡ್ಡಿ ವೃತ್ತದಲ್ಲಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಮೂರ್ತಿ ಎದುರಿಗೆ 7
ಹಾಲಪ್ಪ ವರವಿ, ಸಂಗಮೇಶ ಅಂಗಡಿ, ಭಾಷಾಸಾಬ ಮಲ್ಲಸಮುದ್ರ, ಈಶ್ವರ ಲಕ್ಷ್ಮೇಶ್ವರ, ಮುತ್ತು ಮುಡಿವಾಳ, ವಿಕಾಸ ಕ್ಷೀರಸಾಗರ, ವಿಠ್ಠಲ ಬೆಂತೂರ, ಬಸವರಾಜ ಮನಗುಂಡಿ, ಜಗದೀಶ ಪೂಜಾರ, ಮೇಘರಾಜ, ರಾಜು ಪೂಜಾರ, ರಮೇಶ ರಾಠೋಡ, ಮಹೇಶ ದೊಡ್ಡಮನಿ, ನಾಗು ಕರೆಗುಡ್ಡ, ಚಂದ್ರು ಗೂಡೆ, ಪ್ರಕಾಶ ಅಂಗಡಿ, ಸತ್ಯನಗೌಡ್ರರ, ಸಿದ್ದು ಶಿರಹಟ್ಟಿ, ಜಾಫರ ಅಣ್ಣಿಗೇರಿ, ಥೌಷಿಪ್‌, ಮಂಜು ವರವಿ, ಮೋಹನ ವರವಿ, ಅನಿಲ ಪೂಜಾರ, ಮುತ್ತು ಸುಂಕದ, ಅಂಬರೇಶ ನಿರಂಜಪ್ಪನವರ, ಪ್ರವೀಣ ಅಂಗಡಿ, ಉಮೇಶ ದೊಡ್ಡಮನಿ ಮುಂತಾದವರು ಪಾಲ್ಗೊಂಡಿದ್ದರು.

loading...