ಕಳಸಾ ಬಂಡೂರಿ ಹೋರಾಟ ಧರಣಿ ವೇದಿಕೆ ನರಗುಂದಗೆ ಸ್ಥಳಾಂತರ

0
36

74ನೇ ದಿನಕ್ಕೆ ಮೊಟಕುಗೊಂಡ ಧರಣಿ ವೇದಿಕೆ
ರಾಮದುರ್ಗ : ನರಗುಂದ, ನವಲಗುಂದ, ರೋಣ ,ಹುಬ್ಬಳ್ಳಿ, ರಾಮದುರ್ಗ ನಗರಗಳಲ್ಲಿ ಕಳಸಾ ಬಂಡೂರಿ ಹೋರಾಟ ಧರಣಿಗಳಲ್ಲಿ ಸ್ಥಳದ ವೇದಿಕೆಯಿಂದ ರೈತ ಮುಖಂಡರು ವಿಭಿನ್ನ ಹೇಳಿಕೆಗಳು ನೀಡುತ್ತಿರುವದರಿಂದ. ಪ್ರಮುಖ ಹೋರಾಟ ಕೇಂದ್ರವಾದ ನರಗುಂದ ಸ್ಥಳದಲ್ಲಿ ಎಲ್ಲ ವೇದಿಕೆಗಳು ಒಂದು ಗೂಡಿಕೊಂಡು ಧರಣಿಯನ್ನು ಮುನ್ನ ಮುನ್ನಡೆಸಲಾಗುತ್ತದೆ ಎಂದು ರೈತ ಮುಖಂಡ ಶಂಕರಗೌಡ ಪಾಟೀಲ ತಿಳಿಸಿದರು.
ಮಹದಾಯಿ ನದಿ ಮಲಪ್ರಭೆಗೆ ಜೋಡಣೆ ಮಾಡಬೇಕೆಂದು ಒತ್ತಾಯಿಸಿ, ರೈತ ಸೇನೆ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಹುತಾತ್ಮ ಚೌಕದಲ್ಲಿ ನಡೆಸುತ್ತಿರುವ ನಿರಂತರ ಧರಣಿ ಸತ್ಯಾಗ್ರಹ 74ನೇ ದಿನಕ್ಕೆ ಮುಂದುವರೆದಿದ್ದು, ಸೋಮವಾರ ತಾಲೂಕಿನ ಲಿಂಗದಾಳ ಗ್ರಾಮದ ರಾಮಕೃಷ್ಣ ಪರಮಹಂಸ ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ರೈತಮುಖಂಡರು ಧರಣಿ ವೇದಿಕೆಯಲ್ಲಿ ಮುಂಜಾನೆಯಿಂದ ಸಂಜೆವರೆಗೂ ಭಜನೆ ಮಾಡುತ್ತಾ, ರೈತರ ವಿಷಯದಲ್ಲಿ ರಾಜಕೀಯ ಮಾಡುತ್ತಿರುವ ಉಭಯ ಸರಕಾರಗಳ ನೀತಿಯನ್ನು ಖಂಡಿಸಿದರು.
ಲಿಂಗದಾಳ ಗ್ರಾಮದ ರೈತ ಮುಖಂಡ ಮಲ್ಲಪ್ಪ ಶಾನವಾಡ ಮಾತನಾಡಿ, ಮಹದಾಯಿ ಹಾಗೂ ಕಳಸಾ ಹೋರಾಟ ರಾಷ್ಟ್ರೀಯ ಪಕ್ಷಗಳ ಮುಖಂಡರಿಗೆ ಆಟದ ಗೊಂಬೆಯಂತಾಗಿದ್ದು, ರೈತರೆಲ್ಲರೂ ಜಾಗೃತರಾಗಿ ಒಗ್ಗಟ್ಟಿನಿಂದ ಹೋರಾಟದಲ್ಲಿ ಪಾಲ್ಗೊಂಡು ಉಭಯ ಸರಕಾರದ ರಾಜಕೀಯ ಮುಖಂಡರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸಪ್ಪ ಶಿರಿಯನ್ನವರ, ಹೊಳಬಸಯ್ಯ ಹಿರೇಮಠ, ಸಕ್ರಪ್ಪ ಕಾಕನೂರ, ಮಲ್ಲಪ್ಪ ಗಿರಿಯನ್ನವರ, ಹಣಮಂತ ಕಾಕನೂರ, ಗಿರಿಯಪ್ಪಗೌಡ ಪಾಟೀಲ, ಭೀಮನಗೌಡ ಪಾಟೀಲ, ಭೀಮಪ್ಪ ಬಡಿಗೇರ, ಬಸವರಾಜ ಕೊಳಚಿ, ಮಾರುತಿ ಕಿತ್ತೂರ, ಹಣಮಂತ ಕಿತ್ತೂರ, ಮುತ್ತು ಅಂಗಡಿ, ಮಲ್ಲಪ್ಪ ಮೇಟಿ, ಪಡಿಯಪ್ಪಗೌಡ ಪಾಟೀಲ ರೈತ ಸೇನೆಯ ಮುಖಂಡರಾದ ರಾಮನಗೌಡ ಪಾಟೀಲ, ಪ್ರಕಾಶ ಶಿರಹಟ್ಟಿ, ಹಾಗೂ ಇತರರು ಇದ್ದರು.

=>

 74 ನೇದಿನಕ್ಕೆ ಮೊಟಕು ಗೊಳಿಸಿದ ಧರಣಿ ವೇದಿಕೆ, ಕಳಸಾ ಬಂಡೂರಿ ಹೋರಾಟಕ್ಕೆ ಸರಿಯಾಗಿ ಸರಕಾರವಂತು ಸ್ಪಂದಿಸದೆ ಇರುವುದು ಒಂದು ಕಾರಣ, ರೈತರ ಸಂಘಟನೆಯಲ್ಲಿ ಒಗ್ಗಟ್ಟು ಕಾಣದೆ ಇರುವುದು ಕಳಸಾ ಬಂಡೂರಿ ಹೋರಾಟಕ್ಕೆ ಹಿನ್ನಡೆ ಯಾಗಿದೆ. ರಾತೋರಾತ್ರೀ ವೇದಿಕೆಯನ್ನು ತಗೆದಿರುವುದು ಕೆಲವು ಸಂಘಟನೆಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ರೈತರು ಒಂದಾದರೆ ಬೇಕಾದನ್ನು ಸಾಧಿಸಬಹುದು. ಮುಂದೆ ಈ ರೀತಿಯಾಗ ಬಾರದು ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ರಾಜೇಂದ್ರ ಇಂಗಳಗಿ
ಸಮಾಜ ಸುಧಾರಕ

loading...

LEAVE A REPLY

Please enter your comment!
Please enter your name here