ಕಳಸಾ ಬಂಡೂರಿ ಹೋರಾಟ ಸಮಸ್ತ ರಾಜ್ಯದ ಹೋರಾಟವಾಗಬೇಕು: ಕೋನರೆಡ್ಡಿ ಬೆಳಗಾವಿ ಸುವರ್ಣ ಸೌಧದ ಎದರು ಬೃಹತ್ ಪ್ರತಿಭಟನೆ ನಿರ್ಧಾರ ಗೋವಾ ದವರ ಮೂಗು ಮುಚ್ಚಿದರೆ ಬಾಯಿ ಬಿಡುತ್ತಾರೆ ಹೋರಾಟ ತೀವ್ರಗೊಳಿಸುವಂತೆ ಸಭೆ ತಿರ್ಮಾನ

0
49

ಹುಬ್ಬಳ್ಳಿ.ಅ.21: ಕಳಸಾ ಬಂಡೂರಿ ನಾಲಾ ಜೋಡಣೆ ಹೋರಾಟ ಕೇವಲ ಉತ್ತರ ಕರ್ನಾಟಕದ ಹೋರಾಟ ವಾಗದೆ ಇಡೀ ರಾಜ್ಯದ ಹೋರಾಟ ವಾಗಿ ಮಾರ್ಪಡಬೇಕು ಇದಕ್ಕೆ ಬೇಕಾದ ಜನಾಂದಲೋನವನ್ನು ಜನಪ್ರತಿನಿಧಿಗಳು ಪಕ್ಷಭೇಧ ಮರೆತು ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸುವರ್ಣ ಸೌಧದ ಎದರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ ಹೇಳಿದರು.
ಸೋಮವಾರ ಕರ್ನಾಟಕ ವಾಣಿಜ್ಯೌದ್ಯಮ ಸಂಸ್ಥೆಯಲ್ಲಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಕರೆದಿದ್ದ ಹೋರಾಟದ ಮುಂದಿನ ರೂಪರೇಷೆ ನಿರ್ಧಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳಸಾ ಬಂಡೂರಿ ಹೋರಾಟವು ಕೇವಲ ಉತ್ತರ ಕರ್ನಾಟಕದ ಹೋರಾಟ ವಾಗದೇ ಇಡೀ ರಾಜ್ಯದ ಹೋರಾಟವಾಗಬೇಕಿದೆ ಈ ನಿಟ್ಟಿನಲ್ಲಿ ವ್ಯಾಪಕ ಜನಾಂದಲೋನ ವಾಗಬೇಕು ರಾಜಕೀಯ ಪಕ್ಷಗಳು ರಾಜಕೀಯ ಬಿಟ್ಟು ಈ ಹೋರಾಟದಲ್ಲಿ ದುಮ್ಮಿಕ್ಕಬೇಕೆಂದು ಅವರು ಕರೆ ನೀಡಿದರು.
ಕಾವೇರಿಯ ವಿವಾದದ ಬಗ್ಗೆ ಕೇಂದ್ರ ರಾಜ್ಯ ಸರ್ಕಾರಗಳು ಕೂಡಲೇ ಗಮನಹರಿಸುತ್ತೇವ, ಕಳಸಾ ಬಂಡೂರಿ ಹೋರಾಟ ಪ್ರಾರಂಭವಾಗಿ 50 ವರ್ಷಗಳು ಕಳೆದರೂ ಸಹ ಯೋಜನೆ ಅಂತ್ಯವಾಗಿಲ್ಲ. ಕುಡಿಯುವ ನೀರಿಗಾಗಿ ಹೋರಾಡುತ್ತಿರುವ ನಾವು ಸಂಘಟಿತ ರಾಗದಿದ್ದರೆ ರಾಜ್ಯಕ್ಕೆ ಬರಬೇಕಾದ ನೀರು ಸಿಗುವದಿಲ್ಲ ಈ ನಿಟ್ಟಿನಲ್ಲಿ ಪಕ್ಷಾತೀತ ಹೋರಾಟ ಅನಿರ್ವಾಯ ಎಂದರು.
ಕುಡಿಯುವ 7.56 ಟಿ.ಎಂ.ಸಿ ನೀರು ರಾಜ್ಯದ ಹಕ್ಕಾಗಿದ್ದು ಅದನ್ನು ನ್ಯಾಯಾಧಿಕರಣ ಶೀಘ್ರವಾಗಿ ತೀರ್ಮಾನ ಮಾಡಿ ನೀಡಬೇಕಾಗಿದೆ.
ಈ ವಿಷಯದಲ್ಲಿ ಪ್ರಧಾನ ಮಂತ್ರಿಗಳು ಮಧ್ಯಪ್ರವೇಶಿಸಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ನೀಡುವಂತೆ ಒತ್ತಡ ಹೇರಬೇಕಾಗಿದೆ, ಈ ನಿಟ್ಟಿನಲ್ಲಿ ಮಧ್ಯಂತರ ಆದೇಶಕ್ಕೆ ಅರ್ಜಿ ಸಲ್ಲಿಸಬೇಕಾಗಿದೆ. ಮುಖ್ಯಮಂತ್ರಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಆದಷ್ಟು ಶೀಘ್ರವಾಗಿ ಸರ್ವಪಕ್ಷ ಸಭೆಯನ್ನು ಕರೆಯಲಿ ಎಂದು ಒತ್ತಾಯಿಸಿದರು.
ಸಭೆಯಲ್ಲಿ ಮಾತನಾಡಿದ ಕಳಸಾ ಬಂಡೂರಿ ಕೇಂದ್ರ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ
ಕನಸಿನಲ್ಲಿ ಕಂಡ ಚಿನ್ನಕ್ಕೆ ಮುಗಿ ಬೀಳುವ ಕೇಂದ್ರ ಸರ್ಕಾರ, 13 ವರ್ಷದಿಂದ ನಾವು ಲಕಾಣುತ್ತಿರುವ ಕನಸನ್ನು ಯಾವತ್ತೂ ನನಸು ಮಾಡುತ್ತಾರೆ ಎನ್ನುವುದು ತಿಳಿಯುತ್ತಿಲ್ಲ . ರಾಜ್ಯದಲ್ಲಿ 60 ನದಿಗಳಿವೆ 146 ಯೋಜನೆಗಳಿವೆ ಎಲ್ಲ ಯೋಜನೆಗಳು ತ್ರಿಶಂಕು ಸ್ಥಿತಿಯಲ್ಲಿವೆ. 9 ಜಿಲ್ಲಗಳ ಜನರ ನೀರಿನ ದಾಹವನ್ನು ತೀರಿಸುವ ಈ ಯೋಜನೆ ಇದುವರೆಗೂ ಪೂರ್ಣಗೊಂಡಿಲ್ಲ, ಹೋರಾಟದ ಜತೆ ಜತೆಗೆ ಕಾನೂನಿನ ಹೋರಾಟವು ಸಹ ಅವಶ್ಯಕವಾಗಿದೆ ಈ ಹೋರಾಟವು ಜನಾಂದಲೋನವಾಗಿ ರೂಪಗೊಂಡರೆ ಮಾತ್ರ ಯಶಸ್ಸು ಕಾಣಲು ಸಾಧ್ಯವೆಂದರು.

ಬಾಕ್ಸ್ಗಾಗಿ
ವಿಧಾನ ಸಭೆಯಲ್ಲಿ ಮಾತನಾಡಲು ಸಹ ಅವಕಾಶ ನೀಡಲಿಲ್ಲ
ಕಳಸಾ ಬಂಡೂರಿ ಹೋರಾಟದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಲು ಎದ್ದು ನಿಂತರೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಸೇರಿದಂತೆ ಹಲವು ನಾಯಕರು ಕೂಡುವಂತೆ ಸಲಹೆ ನೀಡಿದರು. ಅಂತಿಮವಾಗಿ ಕೇವಲ 6 ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಿದರು.ಅಲ್ಲದೆ ಯೋಜನೆಗೆ ಬಜೆಟ್ನಲ್ಲಿ ಹಣವು ಸಹ ಮೀಸಲು ಇಡಲಿಲ್ಲ ಎಂದು ನಾಯಕರ ಬಗ್ಗೆ ಕೋನರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದ ಎಐಡಿಪಿ ಹಣ ನಿಲುಗಡೆಯಾಗದಂತೆ ಸರ್ಕಾರ ಮನವರಿಕೆ ಮಾಡಿ ಕೊಡಬೇಕು.
ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ನಿರಾವರಿ ಯೋಜನೆ ಕೈಗೆತ್ತಿಕೊಳ್ಳಲು ನೀಡುವ ಎಐಡಿಪಿ ಅನುದಾನವನ್ನು ಸ್ಥಗಿತಗೊಳಿಸುತ್ತಿದ್ದು ರಾಜ್ಯ ಸರ್ಕಾರ ಇದು ಸ್ಥಗಿತಗೊಳ್ಳದಂತೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ. ಇಲ್ಲದಿದ್ದರೆ ರಾಜ್ಯದ ಹಲವಾರು ಯೋಜನೆಗಳು ಕಳಸಾ ಬಂಡೂರಿ ಯೋಜನೆಯು ಸಹ ಸ್ಥಗಿತಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬೆಳಗಾವಿ ಅಧಿವೇಶನ ಕಳಸಾ ಬಂಡೂರಿ ಅಧಿವೇಶನವಾಗಲಿ: ಪಾಂಡುರಂಗ ಪಾಟೀಲ
ಸಭೆಯಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಮಾಜಿ ಮೇಯರ ಪಾಂಡುರಂಗ ಪಾಟೀಲ್ ರಾಜ್ಯದ ಚಳಿಗಾಲ ಅಧಿವೇಶನ ಬೆಳಗಾವಿಯಲ್ಲಿ ಪ್ರಾರಂಭಗೊಳ್ಳಲಿದ್ದು ಇದಕ್ಕೂ ಮುಂಚೆ ರಾಜ್ಯ ಸರ್ಕಾರದ ಗಮನ ಸೆಳೆಯಬೇಕಾಗಿದೆ. ನೀರಿನ ಹರಿವಿನ ಭಾಗದ ಎಲ್ಲ ಜನಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು, ಬುದ್ದಿಜೀವಿಗಳು ಸೇರಿ ಮುಖ್ಯಮಂತ್ರಿಗಳ ಬಳಿ ನಿಯೋಗವನ್ನು ತೆಗೆದುಕೊಂಡು ಹೋಗಿ ಸಮಸ್ಯೆಯನ್ನು ಆದಷ್ಟು ಶೀಘ್ರ ಪರಿಹರಿಸುವಂತೆ ಒತ್ತಡ ಹಾಕಬೇಕು, ಹಾಗೂ ಕಳಸಾ ಬಂಡೂರಿ ಹೋರಾಟ ಸತತವಾಗಿ ಜಾರಿಯಲ್ಲಿರಬೇಕು ಹೋರಾಟವು ತನ್ನ ಕಾವು ಕಳೆದುಕೊಳ್ಳಬಾರದು, ಚಳಿಗಾಲದ ಅದಿವೇಶನ ಕಳಸಾ ಬಂಡೂರಿ ಅಧಿವೇಶನವಾಗಬೇಕು ಎಲ್ಲ 224 ಶಾಸಕರು ಹೋರಾಟಕ್ಕೆ ಧ್ವನಿ ಎತ್ತಬೇಕು. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಯ ಬೇಕು ಎಂದು ಅವರು ಸಲಹೆ ನೀಡಿದರು.
ಕಳಸಾ, ಬಂಡೂರಿ, ಮಹಾದಾಯಿ ಎಲ್ಲವೂ ಹುಟ್ಟೌದು ಬೆಳಗಾವಿಯಲ್ಲಿ. ಬೆಳಗಾವಿಯಲ್ಲಿ ಯೇ ಅಧಿವೇಶನ ನಡೆಯಲಿದೆ ಇದೂಂದು ಅವಕಾಶ ಈ ಅವಕಾಶವನ್ನು ನಾವು ಬಳಸಿಕೊಳ್ಳಬೇಕಾಗಿದೆ. ಆಗಮಾತ್ರ ನಮ್ಮ ಪ್ರಯತ್ನಕ್ಕೆ ದಿಕ್ಕು ಸಿಗುತ್ತದ.ೆ ಕಳಸಾ ಬಂಡೂರಿ ವ್ಯಾಪ್ತಿಯ ಜನಪತ್ರಿನಿಧಿಗಳ ಜತೆ ಮಾತುಕತೆ ನಡೆಸಲಿದ್ದೇನೆ, ಹಾಗೂ ಕುರಿತು ಅವರಿಗೆ ಪತ್ರವನ್ನು ಬರೆಯುವ ಕಾರ್ಯ ಇನ್ನೆಂಟು ದಿನದಲ್ಲಿ ಮಾಡಲಿದ್ದೇನೆ ಎಂದು ಅವರು ಹೇಳಿದರು.
ಹೋರಾಟಕ್ಕೆ ಜಯಲಲಿತಾ ಮಾದರಿ: ನಾಡಗೌಡ
ನಾವು ಮಾಡುವ ಹೋರಾಟಗಳಿಗೆ ತಮಿಳು ನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಮಾದರಿಯಾಗಬೇಕು.ಅವರು ಮಾತುಕತೆ, ಸಂಧಾನದ ಜತೆ ಜತೆಗೆ ಕಾನೂನು ಹೋರಾಟಕ್ಕೆ ಮುಂದಾಗುತ್ತಾರೆ ನಾವು ಕೂಡಾ ನಮ್ಮ ಹೋರಾಟದ ಜತೆಜತೆಗೆ ಕಾನೂನು ಹೋರಾಟ ಮುಂದುವರೆಸಬೇಕು. ಇದು ಅಣ್ಣ ತಮ್ಮಂದಿರ ಜಗಳ ವಾಗಿದ್ದು ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು ಈ ಸಮಸ್ಯೆಯನ್ನು ಪರಿಹರಿಸಬೇಕಾಗಿತ್ತು. ಆದರೆ ದುರದೃಷ್ಟವಶಾತ್ ಹೊಂದಾಣಿಕೆ ಪ್ರವೃತ್ತಿ ನಮ್ಮ ದೇಶದಲ್ಲಿಇಲ್ಲ ಎಂದು ಜೆ.ಡಿ.ಯು ರಾಜ್ಯಾಧ್ಯಕ್ಷ ಎಂ.ಪಿ.ನಾಡಗೌಡ ಖೇದ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳ ಬಳಿ ತೆರಳುವ ನಿಯೋಗ ಶಕ್ತಿಶಾಲಿಯಾಗಿರಬೇಕು ಅಂದಾಗ ಮಾತ್ರ ನಮ್ಮ ಸಮಸ್ಯೆಯನ್ನು ದಿಲ್ಲಿಯಲ್ಲಿರುವವರು ಆಲಿಸುತ್ತಾರೆ ಎಂದು ಅವರು ಹೇಳಿದರು.
ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಮೃತ ಇಜೇರಿ, ಹನುಮಂತಪ್ಪ ಮೇಟಿ, ಮುಖಂಡರಾದ ಅಂದಾನಪ್ಪ ಸಜ್ಜನ, ರಾಜಣ್ಣ ಕೊರವಿ, ಕೆಜೆಪಿಯ ದೀಪಕ ಶಿರೂಲಿಕರ್, ಹುಬ್ಬಳ್ಳಿ ಧಾರವಾಡ ಸಮಗ್ರ ಅಭಿವೃದ್ದಿ ಸಂಘದ ಅಧ್ಯಕ್ಷ ಎಂ.ಬಿ.ಕಟ್ಟಿ, ಬಿಜೆಪಿ ಪಾಲಿಕೆ ಸದಸ್ಯ ರಂಗಾಬದ್ದಿ, ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಸಂಚಾಲಕ ವಿಕಾಸ್ ಸೊಪ್ಪಿನ, ಆಮ್ ಆದ್ಮಿ ಪಾರ್ಟಿಯ ಶೈಲೇಂದ್ರ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಬಾಕ್ಸ್ಗಾಗಿ
ಮಹತ್ವದ ಸಭೆಗೆ ಬಾರದ ಕಾಂಗೈ ಪಕ್ಷದ ಜನಪ್ರತಿನಿಧಿಗಳು
ಅವಳಿನಗರ ಸೇರಿದಂತೆ 9 ಜಿಲ್ಲೆಗಳ ಕುಡಿಯುವ ನೀರಿನ ಪೂರೈಕೆಗೆ ಅವಶ್ಯಕವಾದ ಯೋಜನೆಯ ಹೋರಾಟದ ರೂಪರೇಷೆಗಳನ್ನು ನಿರ್ಧರಿಸುವ ಮಹತ್ವದ ಸಭೆಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಬಾರದೆ ಹೋರಾಟಕ್ಕೂ ನಮಗೂ ಸಂಬಂಧವಿಲ್ಲವೆನ್ನುವಂತೆ ಮಗುಮ್ಮಾಗಿ ಕುಳಿತಿರುವುದು ಇಂದಿನ ಸಭೆಯಲ್ಲಿ ಬಹುವಾಗಿ ಚರ್ಚೆಯಾಯಿತು.
ಹೋರಾಟಕ್ಕೆ ರಾಜಕೀಯ ಬೆರೆಸಬಾರದೆಂದು ಕರೆ ನೀಡುತ್ತಲೇ ಕಾಂಗ್ರೆಸ್ ಜನಪ್ರತೀನೀದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ವಿಶೇಷವಾಗಿತ್ತು. ಹುಬ್ಬಳ್ಳಿ ಧಾರವಾಡ ಪೂರ್ವಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ, ಬಹುದಿನಗಳಿಂದ ಕಾಣೆಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಲಾಡ್. ಶಾಸಕ ನಾಗರಾಜ ಛಬ್ಬಿ, ಶ್ರೀನಿವಾಸ್ ಮಾನೆ ಸೇರಿದಂತೆ ಪಾಲಿಕೆ ಸದಸ್ಯರು ಸಹ ಗೈರು ಹಾಜರಾಗಿದ್ದು ವಿಶೇಷವಾಗಿತ್ತು.
ಬಾಕ್ಸ್ಗಾಗಿ
ಸಭೆಯ ನಿರ್ಣಯಗಳು
ಸಧ್ಯದಲ್ಲೇ ನಡೆಯಲಿರುವ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸುವರ್ಣಸೌಧದ ಎದುರು ಬೃಹತ್
ಪ್ರತಿಭಟನೆ ನಡೆಸುವದು.
ಪ್ರಸ್ತುತ ಅಧಿವೇಶನ ನಡೆಯುವ ಮೊದಲು ಸ್ಥಳೀಯ ಜನಪ್ರತಿನಿಧಿಗಳನ್ನೊಳಗೊಂಡ ಸಮನ್ವಯ ಸಮಿತಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಹತ್ತಿರ ನಿಯೋಗ ಹೋಗುವದು.
ಕುಡಿಯುವ ನೀರಿನ ಮಹತ್ವದ ಹಾಗೂ ನೆನಗುದಿಗೆ ಬಿದ್ದಿರುವ ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನ ತ್ವರಿತಗತಿಯಲ್ಲಿ ಆಗುವಂತೆ ಅಗತ್ಯ ಕ್ರಮ ವಹಿಸಲು ಮನವರಿಕೆ ಮಾಡುವದು.
ಪ್ರಧಾನ ಮಂತ್ರಿಗಳ ಬಳಿಗೆ ಕರ್ನಾಟಕದ ಸಂಸದರ ನಿಯೋಗ ಕರೆದುಕೊಂಡು ಹೋಗಿ ಪ್ರಧಾನ ಮಂತ್ರಿಗಳು ಮಧ್ಯಪ್ರವೇಶ ಮಾಡುವಂತೆ ಮನವರಿಕೆ ಮಾಡುವದು.

loading...

LEAVE A REPLY

Please enter your comment!
Please enter your name here