ಕವನ ಸಂಕಲನ ಪುಸ್ತಕ ಬಿಡುಗಡೆ

0
52

ಗೋಕಾಕ 7: ನಗರದ ಸಪ್ತಸ್ವರ ಸಂಗೀತ ಸಾಹಿತ್ಯ ಪ್ರತಿಷ್ಠಾನದಿಂದ ಪ್ರಕಾಶನಗೊಳ್ಳುತ್ತಿರುವ ಉಪನ್ಯಾಸಕ ಡಾ.ವಾಯ್.ಎಂ.ಯಾಕೊಳ್ಳಿ ಅವರ ತಪ್ಪಿತಸ್ಥನ ಅಫಿಡವಿಟ್ಟು ಕವನ ಸಂಕಲನ ಮತ್ತು ಉಪನ್ಯಾಸಕ ಸೋಮಶೇಖರ ಬಳೋಜಿ ಅವರ ಪಲ್ಲವಿಸಲಿ ಖುಷಿ ಕವನ ಸಂಕಲನ ಪುಸ್ತಕ ಬಿಡುಗಡೆ ಸಮಾರಂಭವು ದಿ.10 ರಂದು ಮುಂಜಾನೆ 10 ಗಂಟೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾ ಭವನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸುವರು. ಜಾನಪದ ವಿದ್ವಾಂಸ ಪ್ರೌ.ಜ್ಯೌತಿ ಹೊಸೂರ ಪುಸ್ತಕ ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಸಾಹಿತಿ ಚಂದ್ರಶೇಖರ ಅಕ್ಕಿ, ಪುಸ್ತಕ ಪರಿಚಯ ಡಾ.ಎಚ್.ಟಿ.ಕೋಲಕಾರ, ಸಿದ್ದರಾಜ ಪೂಜಾರಿ ಆಗಮಿಸುವರು. ಅಧ್ಯಕ್ಷತೆ ಸುಭಾಶ ಚಾಳೇಕರ ವಹಿಸುವರು.

ಹಿಂದುಸ್ತಾನಿ ಶಾಸ್ತ್ತ್ರೀಯ ಸಂಗೀತ ಸಭಾ: ನಗರದ ಸಪ್ತಸ್ವರ ಸಂಗೀತ ಸಾಹಿತ್ಯ ಪ್ರತಿಷ್ಠಾನದಿಂದ ಹಿಂದುಸ್ತಾನಿ ಶಾಸ್ತ್ತ್ರೀಯ ಸಂಗೀತ ಸಭಾ ಕಾರ್ಯಕ್ರಮವನ್ನು ಸಂಜೆ 4ಗಂಟೆಗೆ ಆಯ್ಎಂಎಹಾಲ್ ಹತ್ತಿರ ಲಕ್ಷ್ಮೀ ಬಡಾವಣೆಯ ಶಿವಯೋಗಿ ಕೃಪಾದಲ್ಲಿ ಜರುಗಲಿದೆ.

ಕಾರ್ಯಕ್ರಮವನ್ನು ಹಿರೇನಂದಿ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಅಭಿಯಂತರಾದ ಸಂತೋಷ ರಮೇಶ ಜಾರಕಿಹೊಳಿ ಉದ್ಘಾಟಿಸುವರು.

ಮುಖ್ಯ ಅತಿಥಿ ಸಂಗೀತ ವಿಮರ್ಶಕ ಸಿದ್ದರಾಜ ಪೂಜೇರಿ, ಖ್ಯಾತ ಸಿತಾರ ವಾದಕ ಡಿ.ಎಸ್.ಚಾಳೇಕರ, ಖ್ಯಾತ ಹಿಂದುಸ್ತಾನಿ ಗಾಯಕ ಜೆ.ನಿರಂಜನ, ಖ್ಯಾತ ತಬಲಾ ವಾದಕ ನಾರಾಯಣ ಲಕ್ಷ್ಮಣದೀಕ್ಷಿತ ಪುರಾಣಿಕ ಆಗಮಿಸುವರು ಎಂದು ಸಪ್ತಸ್ವರ ಸಂಗೀತ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

loading...

LEAVE A REPLY

Please enter your comment!
Please enter your name here