ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ: ಬಿ.ಶ್ರಿÃರಾಮುಲು

0
4

ಮುಂಡರಗಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್, ಜೆಡಿಎಸ್ ಆಡಳಿತದಿಂದ ಜನತೆ ಬೆಸರಗೂಂಡಿದ್ದಾರೆ. ಇದೇ ಪರಿಸ್ಥಿತಿಕುಂದಗೋಳದಲ್ಲಿಯೂ ಇದೆ, ಅನೇಕ ಸೌಲಭ್ಯಗಳು ಕ್ಷೆÃತ್ರಕ್ಕೆ ತಲುಪಿಯೇ ಇಲ್ಲ. ಈಗ ಸಿಎಂ ಮತ್ತು ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ಆಗಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಬಿ.ಶ್ರಿÃರಾಮುಲು ಹೇಳಿದರು.
ಬುಧವಾರ ಪಟ್ಟಣದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಚಿಂಚೋಳಿ, ಕುಂದಗೋಳ ವಿಧಾನಸಭಾ ಉಪ ಚುನಾವಣೆ ಮೇ ೧೯ ರಂದು ನಡೆಯಲಿದ್ದು ಬಿಜೆಪಿ ಎಲ್ಲಾ ಮುಖಂಡರು ಸೇರಿಕೂಂಡು ಅಭ್ಯರ್ಥಿ ಪರ ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ, ಕುಂದಗೋಳದಲ್ಲಿ ಸರಕಾರ ಮೂಲಭೂತ ಸೌಲಭ್ಯಗಳಿದಲ್ಲದೆ ಜನತೆ ತೊಂದರೆಯಲ್ಲಿದ್ದಾರೆ, ಹೀಗಾಗಿ ಈ ಬಾರಿ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಗೆಲವು ಸಾಧಿಸುತ್ತಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ ಕಾರಣ ಕ್ಷೆÃತ್ರದ ಜನತೆ ಅಭ್ಯರ್ಥಿ ಕುರಿತು ಅನುಕಂಪ ಹೊಂದಿದ್ದಾರೆ. ಹಾಗೆ ಲೋಕಸಭಾ ಚುನಾವಣೆ ಫಲಿತಾಂಶ ಹೊರಹೊಮ್ಮಿ ರಾಜ್ಯದಲ್ಲಿ ೨೦ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಮುಂಬರುವ ದಿನಗಳಲ್ಲಿ ಬಿಜೆಪಿ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದರು.
ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ, ದೇವಪ್ಪ ಕಂಬಳಿ, ರವೀಂದ್ರ ಉಪ್ಪಿನಬೆಟಗೇರಿ, ಆನಂದಗೌಡ ಪಾಟೀಲ, ಎಸ್.ವಿ.ಪಾಟೀಲ, ರಜನಿಕಾಂತ ದೇಸಾಯಿ, ಶ್ರಿÃನಿವಾಸ ಅಬ್ಬಿಗೇರಿ, ಬಸವರಾಜ ರಾಮೇನಹಳ್ಳಿ, ಶಿವು ಬಾರಕೇರ ಇದ್ದರು.

loading...