ಕಾಂಗ್ರೆಸ್‌ ಸರಕಾರದಲ್ಲಿ ಅನ್ಯಾಯ ತುಂಬಿ ತುಳುಕುತ್ತಿದೆ: ಜಿಗಜಿಣಗಿ

0
66

ಕನ್ನಡಮ್ಮ ಸುದ್ದಿ-ಸಿಂದಗಿ: ರಾಜ್ಯದ ಕಾಂಗ್ರೆಸ್‌ ಸರಕಾರದಲ್ಲಿ ಅಜ್ಞಾನ ಹಾಗೂ ಭ್ರಷ್ಠಾಚಾರ, ಅನ್ಯಾಯ ತುಂಬಿ ತುಳುಕುತ್ತಿದ್ದು ಅವರ ನಾಲಿಗೆ ಒಂದು ಹೊಲಸ ಕೇರಿಯಾಗಿದೆ ಇವರ ವರ್ತನೆ ನೋಡಿದರೆ ಹೆಸಿಗೆ ತರುವಂತಾಗಿದೆ. ಒಂಸು ಕಡೆ ರಾಡಿ ಇನ್ನೊಂದು ಕಡೆ ಬೆಂಕಿಯೊಳಗೆ ಕೈಹಾಕಿದ್ದಾರೆ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ರಾಜ್ಯ ಸರಕಾರಕ್ಕೆ ಚಾಟಿ ಬಿಸಿದರು.
ಅವರು ಪಟ್ಟಣದ ವೇಂಕಟೆಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಂಡಲ ಹಮ್ಮಿಕೊಂಡ ನವಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 200 ಕೋಟಿ ಕೇಂದ್ರ ಅನುದಾನ ಬಂದರೂ ಸಹ ಸಂಕೇಶ್ವರ ದಿಂದ ಹುಮನಾಬಾದ, ಬಿಜಾಪುರ ದಿಂದ ಸೋಲ್ಲಪುರ, ಶಿರಾಡೋಣದಿಂದ ಲಿಂಗಸೂರ ರಸ್ತೆಗಳೀಗೆ ಅನುದಾನ ಬಂದಾಗ್ಯೂ ಕೂಡ ಇದು ಕೇಂದ್ರ ಅನುದಾನ ಅವರ ಹೆಸರು ಬರುತ್ತದೆ ಎನ್ನುವ ಮೌಢ್ಯದಲ್ಲಿ ಯಾವುದೇ ಕಾಮಗಾರಿಗಳು ಪ್ರಾರಂಭಿಸಿಲ್ಲ. ಅನ್ನಭಾಗ್ಯ ಯೋಜನೆ ಕಾಂಗ್ರೆಸ್‌ ಸರಕಾರ ಮಾಡಿದಲ್ಲ ಆ ಯೋಜನೆಗೆ ಕೇಂದ್ರ ಸರಕಾರ ಒಂದು ಕೆಜಿಗೆ 36 ರೂಗಳನ್ನು ಖರ್ಚು ಮಾಡುತ್ತಿದೆಲ್ಲದೆ ಆದರೆ ಈ ಭ್ರಷ್ಟ ಸರಕಾರ ಬರೀ ಹೆಸರು ಗಿಟ್ಟಿಸಿಕೊಳ್ಳುತ್ತಿದೆ ಇಂತಹ ಕೆಟ್ಟ ಮತ್ತು ದೂರಾಡಳಿತ ಸರಕಾರವನ್ನು ನಾನೆಂದು ನೋಡಿಲ್ಲ ಎಂದು ಸಚಿವ ಜಿಗಜಿಣಗಿ ಹರಿಹಾಯ್ದರು.
ಅಥಣಿ ಶಾಸಕ ಲಕ್ಷ್ಮಣ ಸವದಿ, ಶಾಸಕ ರಮೇಶ ಭೂಸನೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಜಪ ಜಿಲ್ಲಾಧ್ಯಕ್ಷ ವಿಠ್ಠಲ ಕಟಕದೊಂಡ, ಬೆಳಗಾವಿ ವಿಭಾಗದ ಪ್ರಚಾರಕ ಪ್ರಕಾಶ ಅಕ್ಕಲಕೋಟ, ರಾಜ್ಯ ಪರಿಷತ ಸದಸ್ಯರಾದ ಶಿಲ್ಪಾ ಕುದರಗೊಂಡ, ಸಿ.ಎಸ್‌.ನಾಗೂರ, ಸಂಗರಾಜ ದೇಸಾಯಿ, ಜಿಪಂ ಸದಸ್ಯರಾದ ಬಿ.ಅರ್‌.ಯಂಟಮಾನ, ಮಹಾಂತಗೌಡ ಪಾಟೀಲ, ಬಿಂದುರಾಯಗೌಡ ಬಿರಾದಾರ ಭಾಜಪ ಮುಖಂಡರಾದ ಶಂಖರ ಬಗಲಿ, ಸಂತೋಷ ಪಾಟೀಲ, ಶ್ರೀಮಂತ ನಾಗೂರ, ಎಂ.ಎನ್‌.ಕಿರಣರಾಜ, ರಾಜಶೇಖರ ಪೂಜಾರಿ, ಸುಶೀಲ ಪತ್ತಾರ, ಅಶೋಕ ನಿಂಬರಗಿ, ಮಲ್ಲಿಕಾರ್ಜುನ ಜೋಗುರ ಸೇರಿದಂತೆ ಹಲವರು ವೇದಿಕೆ ಮೆಲಿದ್ದರು.
ರಾಜ್ಯ ರೈತ ಮುಖಂಡ ಅಶೋಕ ಅಲ್ಲಾಪುರ ಒಂದೇ ಮಾತರಂ ಗೀತೆ ಹಾಡಿದರು. ಮಂಡಲ ಅದ್ಯಕ್ಷ ಸಿದ್ದು ಬುಳ್ಳಾ ಸ್ವಾಗತಿಸಿದರು. ಶ್ರೀಕಾಂತ ಸೋಮಜ್ಯಾಳ ನಿರೂಪಿಸಿ ವಂದಿಸಿದರು.

loading...