ಕಾಂಗ್ರೆಸ್ ಅಭ್ಯರ್ಥಿಯಿಂದ ಮತಯಾಚನೆ

0
2

ಕನ್ನಡಮ್ಮ ಸುದ್ದಿ-ಧಾರವಾಡ: ನೋಟ್ ಬ್ಯಾನ್‌ನಿಂದ ದೇಶದ ಸಾಮಾನ್ಯ ಪ್ರಜೆಗೆ ಕವಡೆ ಕಿಮ್ಮತ್ತಿನ ಪ್ರಯೋಜನವೂ ಆಗಿಲ್ಲವಾಗಿದ್ದು ಕೇವಲ ಅಂಬಾನಿ ಅದಾನಿ ವಿಕಾಸ ಆಗಿದೆ ಎಂದು ಧಾರವಾಡ ಲೋಕಸಭಾ ಕ್ಷೆÃತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿದರು.
ರಾಮಲಿಂಗೇಶ್ವರ ನಗರ, ಹಳೇಹುಬ್ಬಳ್ಳಿ ಸೇರಿದಂತೆ ಇತರ ಪ್ರದೇಶಗಳಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿವರ್ಷ ಎರಡು ಕೋಟಿ ಉದ್ಯೊÃಗ ನೀಡುವ ಭರವಸೆ ಹುಸಿಯಾಗಿದ್ದು ಜನಧನ್ ಖಾತೆಯಲ್ಲಿ ಎಷ್ಟು ಹಣ ಜಮೆಯಾಗಿದೆ ಎಂದು ನೆರೆದಿದ್ದ ಸಾರ್ವಜನಿಕರನ್ನೆÃ ಪ್ರಶ್ನಿಸಿದರು. ದೇಶದಲ್ಲಿ ರೈತರ ಹಾಗೂ ಜನಸಾಮಾನ್ಯರ ವಿಕಾಸ ಆಗಿಲ್ಲ. ರೈತರನಿಗೆ ಅಪಮಾನ ಮಾಡಿದ್ದು ಮೋದಿ, ಬಡವರ ಉದ್ದಾರ ಮಾಡಿದ್ದು ಇಂದಿರಾ ಗಾಂಧಿ.ಸಮಗ್ರ ಜನರ ಏಳ್ಗೆಗಾಗಿ ಅಭಯ ಹಸ್ತವನ್ನು ಬೆಂಬಲಿಸುವಂತೆ ಮನವಿ ಮಾಡಿದರಲ್ಲದೇ ಮೂರು ಬಾರಿ ಆಯ್ಕೆಯಾದರೂ ಯಾವುದೇ ಜನಪರ ಕೆಲಸ ಮಾಡದೇ ಮೋದಿ ಮಂತ್ರ ಹೇಳುತ್ತ ಬರುತ್ತಿರುವ ಜೋಶಿಯವರಿಗೆ ಈ ಬಾರಿ ವಿಶ್ರಾಂತಿ ನೀಡಬೇಕೆಂದರು. ಇಸ್ಮಾಯಿಲ್ ತಮಟಗಾರ, ನಾಗರಾಜ ಗೌರಿ, ದೀಪಾ ಗೌರಿ, ಶ್ರಿÃನಿವಾಸ ಹಿರೇಕೆರೂರ,ಚೇತನ್ ಹಿರೇಕೆರೂರ,ಫಯಾಜ ಮುದ್ಗಲ್, ಇಜಾಜ್ ಜಾಗೀರದಾರ, ಖ್ವಾಜಾ ಶಿರೂರ,ಇಸ್ಮಾಯಿಲ್ ದೊಡ್ಡಮನಿ ಸೇರಿದಂತೆ ಕಾರ್ಯಕರ್ತರು ಇದ್ದರು.

loading...