ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ

0
22

ಬ್ಯಾಡಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಹೊಸ ಕಾರ್ಯಕ್ರಮಗಳು ಜಾರಿಗೊಂಡಿವೆ. ರೈತರ ಬೆಳೆಸಾಲ ಮನ್ನಾಯೋಜನೆಯಲ್ಲಿ ೪೦ ಲಕ್ಷರೈತರಿಗೆ ಲಾಭ ಸಿಗಲಿದೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮೋಹನ ಬಿನ್ನಾಳ ತಿಳಿಸಿದರು.
ತಾಲೂಕಿನ ಸೂಡಂಬಿ ಗ್ರಾಮದಲ್ಲಿಕಾಂಗ್ರೆಸ ಅಭ್ಯರ್ಥಿ ಡಿ.ಆರ್.ಪಾಟೀಲ ಪರವಾಗಿ ಮನೆಮನೆನೆಗೂ ತೆರಳಿ ಮತಯಾಚನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿಕಾಂಗ್ರೆಸ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರಜನಪರ ಆಡಳಿತ ನೀಡುವ ಮೂಲಕ ಜನರ ವಿಶ್ವಾಸ ಗಳಿಸಿದೆ. ೫ ವರ್ಷಗಳ ಕಾಲ ಸುಭದ್ರ ಆಡಳಿತ ನೀಡಲಿದೆ.
ಕುಮಾರಸ್ವಾಮಿ ಸಿ.ಎಂ ಆದ ಬಳಿಕ ಬೀದಿ ಬದಿ ವ್ಯಾಪಾರಿಗಳಿಗೆ ಗರಿಷ್ಟ ೧೦ ಸಾ.ರೂ.ಬಡ್ಡಿರಹಿತ ಸಾಲ ನೀಡುವುದು ಸೇರಿದಂತೆ ಹಲವು ಯೋಜನೆಜಾರಿಗೊಂಡಿವೆ. ಹಿಂದಿನ ಸರ್ಕಾರದಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷಿÃರ ಭಾಗ್ಯ, ಆರೋಗ್ಯ ಬಾಗ್ಯ, ಋಣಮುಕ್ತ, ರೈತಸೂರ್ಯ, ಬಡ್ಡಿರಹಿತ ಸಾಲ ಜಾರಿಗೊಳಿಸಿದೆ.
ಇದೇ ಸಂದರ್ಭದಲ್ಲಿಹಾವೇರಿ ಲೋಕಸಭೆ ಮತಕ್ಷೆÃತ್ರದಕಾಂಗ್ರೆಸ, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಡಿ.ಆರ್.ಪಾಟೀಲ ಗೆಲ್ಲಿಸುವಂತೆ ಮನವಿ ಮಾಡಿದರು. ಬಿಜೆಪಿ ಅಭ್ಯರ್ಥಿಕುರಿತುಕ್ಷೆÃತ್ರದೆಲ್ಲೆಡೆ ಬೇಸತ್ತ ವಾತಾವರಣವಿದ್ದು, ಎಲ್ಲರೂ ಪಾಟೀಲರ ಬೆಂಬಲಕ್ಕೆ ನಿಂತಿದ್ದಾರೆ.ಅಭ್ಯರ್ಥಿಕಾರ್ಯವೈಖರಿಗೆಜನ ಮೆಚ್ಚುಗೆ ಗಳಿಸಿದ್ದಾರೆ.
ಈ ಸಂದರ್ಭದಲ್ಲಿ ಷಣ್ಮುಖಪ್ಪ ಮೆಣಸಿನಹಾಳ, ಬಸವರಾಜ ಸೂಡಂಬಿ ಇತರಿದ್ದರು.

loading...