ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

0
115

ವಿಜಯಪುರ : ಪಾಂಚಜನ್ಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಕೇರಿ ಮೊದಲಾದ ಭಾಗದ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಮುಖಂಡ ವಿಜಯಕುಮಾರ ಪಾಟೀಲರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರನ್ನು ಬರಮಾಡಿಕೊಂಡು ಮಾತನಾಡಿದ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜಯಕುಮಾರ ಪಾಟೀಲ, ರಾಜ್ಯದೆಲ್ಲೆಡೆ ಬಿಜೆಪಿ ಅಲೆ ಇದೆ. ಪಕ್ಷದ ತತ್ವ-ಸಿದ್ಧಾಂತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ, ಬಿ.ಎಸ್. ಯಡಿಯೂರಪ್ಪನವರ ರೈತಪರ ಕಾಳಜಿಯನ್ನು ಮೆಚ್ಚಿ ನೂರಾರು ಸಂಖ್ಯೆಲ್ಲಿ ಜನರು ವಿವಿಧ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ನಂ.1 ಭ್ರಷ್ಟ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಾರಿ ಚುನಾವಣೆಯಲ್ಲಿ ಬಬಲೇಶ್ವರದ ಜನತೆ ನನಗೆ ಖಂಡಿತವಾಗಿಯೂ ಆಶೀರ್ವದಿಸಿ ಗೆಲ್ಲಿಸಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸ, ನಂಬಿಕೆ ನನಗಿದೆ ಎಂದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಜಿಸಾಬ ಲಾಲು ಜಾತಗಾರ, ಬಾಪು ಜಾತಗಾರ, ಫಕೀರಸಾಬ ಇಮಾಮಸಾಬ ಕರಜಗಿ, ಬಾಫು ಜಾತಗಾರ, ಹಾಜಿಸಾಬ ಜಾತಗಾರ, ಹಾಜಿಸಾಬ ಜಾತಗಾರ, ಮೌಲಾಲಿ ಜಾತಗಾರ, ಡೊಂಗ್ರಿಸಾಬ ಜಾತಗಾರ, ರಮಜಾನ ಜಾತಗಾರ, ಸೈಪನಸಾಬ್ ಜಾತಗಾರ, ದಾದಾ ಜಾತಗಾರ, ಇಮ್ತಿಯಾಜ್ ಕರಜಗಿ, ಇಮಾಮಸಾಬ ಕರಜಗಿ, ಲಾಲು ಜಾತಗಾರ, ಮುಕ್ಬುಲ್ ಜಾತಗಾರ, ಬಾಶಾಸಾಬ ಶೇಖ್, ರಫೀಕ ಜಾತಗಾರ, ಬಡಕಲ ಜಾತಗಾರ, ರಾಜುಗೌಡ ಪಾಟೀಲ, ಶಿವಾನಂದ ದಳವಾಯಿ, ಚಂದು ಅಂಬಿಗೇರ, ರಮೇಶಗೌಡ ಪಾಟೀಲ, ಸುರೇಶ ಮಾಳಕಾರಿ, ಗೋವಿಂದ ರಾಠೋಡ, ಶ್ರೀಮಂತ ವಡ್ಡರ, ಈರಪ್ಪ ಮುಲಗೆ, ಮಾನಸಿಂಗ ರಾಠೋಡ, ರತನಸಿಂಗ ರಾಠೋಡ, ದೊಂಡಿರಾಮ ರಾಠೋಡ ಪಕ್ಷಕ್ಕೆ ಸೇರ್ಪಡೆಯಾದರು.

loading...