ಕಾಂಗ್ರೆಸ್ ಜಾತ್ಯಾತೀತ ಪಕ್ಷ: ನಂಜಯ್ಯನಮಠ

0
54

ಮುಂಡರಗಿ: ಕಾಂಗ್ರೆಸ್ ಪಕ್ಷವು ಜಾತಿಯತೆ ಮಾಡುವುದಿಲ್ಲ. ಕಾಂಗ್ರೆಸ್ ಎಲ್ಲ ಜಾತಿಯನ್ನು ಒಳಗೊಂಡಂತ ಶಿಸ್ತುಬದ್ಧ ಪಕ್ಷವಾಗಿದೆ ಜೊತೆಗೆ ಕಳೆದ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ನೀಡಿದ 165 ಪ್ರಣಾಳಿಕೆ ಭರವಸೆಗಳನ್ನು ಈಡೇರಿಸಿದ್ದರೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಹಾಗೂ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಶಾಸಕರ ನಿವಾಸದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ ಈ ಭಾರಿ ಚುನಾವಣೆಯಲ್ಲಿ ಗದಗ ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಮತ್ತೊಮ್ಮೆ ಶಿರಹಟ್ಟಿ ಕ್ಷೇತ್ರಕ್ಕೆ ರಾಮಕೃಷ್ಣ ದೊಡ್ಡಮನಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಶಿರಹಟ್ಟಿ ಮತಕ್ಷೇತ್ರಕ್ಕೆ ರಾಜ್ಯದ ಎಲ್ಲ ಕ್ಷೇತ್ರಗಳಿಗಿಂತ ಹೆಚ್ಚು ಅನುದಾನ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದರೊಂದಿಗೆ ಈ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತದಿಂದ ಸರ್ಕಾರ ರಚನೆಯಾಗುತ್ತದೆ ಎಂದು ತಿಳಿಸಿದರು.

ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, 3487ಕೋಟಿ ರೂ.ಅನುದಾನ ತರುವುದರ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಬಡವರಿಗೆ ಕ್ಷೇತ್ರದಲ್ಲಿ 10ಸಾವಿರ ಮನೆಗೆ ನೀಡಿದ್ದೇವೆ. 5400 ವೃದ್ಧರಿಗೆ ಪಿಂಚಣಿ ನೀಡಲಾಗುತ್ತಿದೆ. ಹತ್ತು ಹಲವಾರು ಯೋಜನೆ ಜಾರಿ ತರಲಾಗಿದೆ. ಸರ್ಕಾರದ ಸಾಧನೆಯೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಯಾವುದೇ ಅನ್ಯತವಾಗಿ ಭಾವಿಸದೇ ಮತಕ್ಷೇತ್ರ ದೊಡ್ಡದ್ದಾಗಿದ್ದರಿಂದ ನೇರವಾಗಿ ಕಾರ್ಯಕರ್ತರನ್ನು ಸ್ವಲ್ಪ ಮಟ್ಟಿಗೆ ಬೇಟಿಯಾಗಿಲ್ಲ,ಈ ಭಾರಿ ಪ್ರತಿ ಭೂತಮಟ್ಟದಲ್ಲಿ ಕೈ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಹಗಲಿರುಳು ಶ್ರಮಿಸಿಬೇಕು. ಜೊತೆಗೆ ಕ್ಷೇತ್ರದ ಜನರು ಮತ್ತೊಮ್ಮೆ ನನಗೆ ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸ ನನಗೆ ಇದೆ ಎಂದರು. ಇದೇ ಸಂದರ್ಭದಲ್ಲಿ 30 ಕ್ಕೂ ಹೆಚ್ಚು ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಇದೇ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಶೋಭಾ ಮೇಟಿ, ರಾಮಸ್ವಾಮಿ ಹೆಗಡಾಳ, ಹನುಮಣ್ಣ ಹೆಗಡಾಳ, ಸೀತಾ ಬಸಾಪೂರ, ಯಲ್ಲಪ್ಪ ಹೊಂಬಳಗಟ್ಟಿ,ಕಾಂತರಾಜ ಹಿರೇಮಠ, ಗೋವಿಂದರಾಜ ಹೆಗಡಾಳ, ದೇವಪ್ಪ ರಾಮೇನಹಳ್ಳಿ, ಬಿ.ಎಫ್.ಈಟಿ, ಎಸ್.ಡಿ.ಮಕಾಂದಾರ, ಕೊಟ್ರೇಶಪ್ಪ ಅಂಗಡಿ, ಧ್ರುವಕುಮಾರ ಹೊಸಮನಿ, ಸುರೇಶ ಕ್ಯಾದಗಿಹಳ್ಳಿ, ಶ್ಯಾವಕ್ಕ ಅಂದಾನಗೌಡ ಪಾಟೀಲ, ಬಸವರಾಜ ಮೇಟಿ,ವಿರುಪಾಕ್ಷ ಬಾರಕೇರ,ಅಡಿವೆಪ್ಪ ಭಜಂತ್ರಿ, ಬಸವಂತಪ್ಪ ಹೊಸಮನಿ, ಶೇಖರಾಜ ಹೊಸಮನಿ, ಮಾರುತಿ ಕವಲೂರ, ಚಂದ್ರಶೇಖರ ಬಡಿಗೇರ, ವಿರೇಶ ಸಜ್ಜನರ, ರಾಘು ಕುರಿಯವರ, ಎಂ.ಜಿ.ವಡ್ಡಟ್ಟಿ, ಡಿ.ಡಿ.ಮೊರನಾಳ, ಶೇಖಣ್ಣ ಜುಟ್ಲಣ್ಣವರ, ಬಸವರಾಜ ಬಿಸನಳ್ಳಿ, ವೆಂಕಟೇಶ ಹೆಗ್ಗಡಾಳ,ರೈಮಾನಸಾಬ ಮಲ್ಲನಕೇರಿ, ಮೌಲಾಸಾಬ ಭಾಗವಾನ,ಲಿಂಗಪ್ಪ ಉಪ್ಪಾರ,ಸೋಮನಗೌಡ ಗೌಡ್ರ, ಸುರೇಶ ಮಾಗಡಿ, ಸಂತೋಷ ಹಿರೇಮನಿ,ಮಹೇಶ ವಡ್ಡರ, ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತಿತರರಿದ್ದರು.

loading...