ಕಾಂಗ್ರೆಸ್ ಮುಖಂಡರ ಬಿರುಸಿನ ಪ್ರಚಾರ

0
10

ವಿಜಯಪುರ : ಲೋಕಸಭಾ ಕ್ಷೆÃತ್ರದ ಮೈತ್ರಿ ಅಭ್ಯರ್ಥಿ ಡಾ.ಸುನೀತಾ ಚವ್ಹಾಣ ಪರವಾಗಿ ಕಾಂಗ್ರೆಸ್ ಯುವ ಮುಖಂಡ ಅಬ್ದುಲ್‌ಹಮೀದ್ ಮುಶ್ರಿÃಫ್ ಸೇರಿದಂತೆ ವಿವಿಧ ಮುಖಂಡರು ಬಿರುಸಿನ ಪ್ರಚಾರ ನಡೆಸಿದರು. ವಾರ್ಡ್ ನಂ ೧೮, ೧೯, ೨೦ ಹಾಗೂ ವಾರ್ಡ್ ನಂ.೨೪ ಮೊದಲಾದ ಬಡಾವಣೆಗಳಲ್ಲಿ ಪಾದಯಾತ್ರೆ ನಡೆಸಿ, ಮನೆ-ಮನೆಗೆ ತೆರಳಿ ಪಕ್ಷದ ಪರ ಪ್ರಚಾರ ನಡೆಸಿದರು.
ಯುವ ಮುಖಂಡ ಅಬ್ದುಲ್‌ಹಮೀದ್ ಮುಶ್ರಿÃಪ್ ಮಾತನಾಡಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವನ್ನು ಕಿತ್ತೆಸೆಯಬೇಕಾಗಿದ್ದು. ಈ ಸರಕಾರ ಬಡವರ, ದಲಿತರ, ಅಲ್ಪಸಂಖ್ಯಾತರ, ಹಿಂದುಳಿದವರ, ಯುವಕರ, ಹಿತಾಸಕ್ತಿ ಕಾಪಾಡದೆ ಶ್ರಿÃಮಂತರ ಸರಕಾರವಾಗಿದ್ದು. ಶ್ರಿÃಮಂತ ಕುಳಗಳಿಗೆ ಈ ದೇಶ ಬಿಟ್ಟು ಓಡಿ ಹೋಗಲು ಸಹಕರಿಸಿದ ಈ ಸರಕಾರ ದೇಶದ ಮಾನ ಮರ್ಯಾದೆ ಹರಾಜು ಹಾಕಿದೆ. ಹೊರ ದೇಶದಲ್ಲಿರುವ ಕಪ್ಪು ಹಣ ತಂದು ೧೨೫ಕೋಟಿ ಜನರಿಗೆ ತಲಾ ೧೫ಲಕ್ಷ ರೂಪಾಯಿ ಹಂಚುತ್ತೆÃವೆ ಎಂದು ಮಾಡಿದ ವಾಗ್ದಾನ ಸುಳ್ಳಾಗಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಅಜೀತ್‌ಸಿಂಗ್ ಪರದೇಶಿ, ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಬಡೇಪೀರ ಜುನೇದಿ, ವಿಜಯಪುರ ನಗರ ಬ್ಲಾಕ್ ಅಧ್ಯಕ್ಷ ಜಮೀರ್‌ಅಹ್ಮದ್ ಬಕ್ಷಿÃ, ಜಲನಗರ ಬ್ಲಾಕ್ ಅಧ್ಯಕ್ಷೆ ಆರತಿ ಶಹಾಪೂರ, ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಇರ್ಫಾನ ಶೇಖ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬ್ಬಿÃರ ಜಾಗೀರದಾರ, ವಸಂತ ಹೊನಮೊಡೆ, ಮಹಾನಗರ ಪಾಲಿಕೆಯ ಸದಸ್ಯರಾದ ಇದ್ರೂಸ್ ಬಕ್ಷಿÃ, ಜಮೀರ್ ಬಾಂಗಿ, ಶರಣಪ್ಪ ಯಕ್ಕುಂಡಿ ಮುಂತಾದವರು ಉಪಸ್ಥಿತರಿದ್ದರು.

loading...