ಕಾಂಗ್ರೆಸ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಿದ ಶಾಸಕ ಶಿವರಾಮ

0
20

ಮುಂಡಗೋಡ: ಶಾಸಕ ಶಿವರಾಮ ಹೆಬ್ಬಾರ ಮಂಗಳವಾರ ಪಟ್ಟಣದ ವಿವಿಧ ವಾರ್ಡಗಳಲ್ಲಿ ಸಂಚರಿಸಿ ಬಹಿರಂಗ ಪ್ರಚಾರ ನಡೆಸಿ ಪ.ಪಂ ಚುನಾವಣೆಗೆ ಸ್ಪರ್ದಿಸಿದ ಕಾಂಗ್ರೆಸ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಿದರು. ವಿವಿದ ಬಡಾವಣೆಯಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿ, ಸರ್ಕಾರ ಶಾಸಕರು ಹಾಗೂ ಸ್ಥಳಿಯ ಸಂಸ್ಥೆಯಲ್ಲಿ ಕೂಡ ಒಂದೇ ಪಕ್ಷದ ಆಡಳಿತವಿದ್ದರೆ ಹೆಚ್ಚಿನ ಅಭಿವೃದ್ದಿಯಾಗುತ್ತದೆ. ಹಾಗಾಗಿ ಈ ಬಾರಿಯ ಪ.ಪಂ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಸದಸ್ಯರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಜಿ.ಪಂ ಸದಸ್ಯ ರವಿಗೌಡ ಪಾಟೀಲ, ದುರೀಣ ಕೃಷ್ಣ ಹಿರೇಹಳ್ಳಿ, ಕೆ.ಆರ್‌ ಬಾಳೆಕಾಯಿ, ಪಿ.ಜಿ ತಂಗಚ್ಚನ್‌, ಪಿ.ಎಸ್‌ ಸಂಗೂರಮಠ, ಎಚ್‌.ಎಮ್‌ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

loading...