ಕಾಂಗ್ರೇಸ್ ಗೆಲುವು ಖಚಿತ-ರಾಘವೇಂದ್ರ ಹಿಟ್ನಾಳ್

0
18

ಕೊಪ್ಪಳ,ಏ,15: ರಾಜ್ಯದ ಬಿಜೆಪಿಯ ದುರಾಡಳಿತದಿಂದ ಜನತೆ ರೋಷಿಹೋಗಿದ್ದಾರೆ ಈಬಾರಿ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸುವುದು ನಿಶ್ಚಿತ ಈಗಾಗಿ ನನ್ನ ಗೆಲುವು ಖಚಿತ ಎಂದು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಸೋಮವಾರದಂದು ಸಿರಸಪ್ಪಯ್ಯನಮಠದಿಂದ ಅಪಾರ ಬೆಂಬಲಿಗರೊಂದಿಗೆ ತಹಶೀಲ್ದಾರ ಕಛೇರಿಗೆ ಆಗಮಿಸಿ ಚುನಾವಣಾ ಅಧಿಕಾರಿ ಅಶೋಕ ಕಲಘಟಗಿಯವರಿಗೆ ನಾಮ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಇಂದು ಬಹಳಷ್ಟು ಯುವಕರು ಕಾಂಗ್ರೇಸ್ ಪಕ್ಷದತ್ತ ಮುಖಮಾಡಿದ್ದಾರೆ ಈಗಾಗಿ ಕಾಂಗ್ರೇಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಕಾಂಗ್ರೇಸ್ ಪಕ್ಷ ನೀರಾವರಿ, ಗ್ರಾಮೀಣ ಅಭವೃದ್ದಿ, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಎಂದರು.

ಈ ಸಂದರ್ಭದಲ್ಲಿ ನಗರ ಸಭೆ ಉಪಾದ್ಯಕ್ಷ ಅಮ್ಜದ್ ಪಟೇಲ್, ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೇಸ್ ಅಧ್ಯಕ್ಷ ಎಂ. ಕಾಟನ್ ಪಾಶಾ, ಜಿ.ಪಂ ಮಾಜಿ ಸದಸ್ಯ ಈಶಪ್ಪ ಮಾದಿನೂರ್, ಎಪಿಎಂಸಿ ಸದಸ್ಯ ಗವಿಸಿದ್ದಪ್ಪ ಮುದಗಲ್, ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಇಂದಿರಾ ಬಾವಿಕಟ್ಟಿ ಮತ್ತೀತರರು ಉಪಸ್ಥೀತರಿದ್ದರು.

loading...

LEAVE A REPLY

Please enter your comment!
Please enter your name here