ಕಾನೂನು ಜಾಗೃತಿ ಅಭಿಯಾ£

0
28

ಯಲ್ಲಾಪುರ : ನವಂಬರ್ 2 ಮತ್ತು 3 ರಂದು ನಡೆಯಲಿರುವ ಕಾನೂನು ಜಾಗೃತಿ ಅಭಿಯಾನದ ಕುರಿತಾಗಿ ಪೂರ್ವಭಾವಿ ಸಭೆ ಪಟ್ಟಣದ ನ್ಯಾಯಾಲಯದಲ್ಲಿ ಹಿರಿಯ ಸಿವಿಲ್ ನ್ಯಾಯಾದೀಶ ಎನ್. ಶ್ರೀಪಾದ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ನಡೆಯಿತು.
ಗ್ರಾಮಗಳಲ್ಲಿ ಮನೆ ಬಾಗಿಲಿಗೆ ತೆರಳಿ ಕಾನೂನು ಅರಿವು ಸಮೀತಿಯ ಧ್ಯೆಯೋದ್ದೇಶಗಳನ್ನು ವಿವರಿಸುವುದು. ಅಗತ್ಯವುಳ್ಳವರಿಗೆ ಕಾನೂನು ಸಲಹಾ ಸಮಿತಿಯ ನೆರವು ನೀಡುವುದು ಈ ಅಭಿಯಾನದ ಉದ್ದೇಶವಾಗಿದ್ದು, ಆಯ್ಕೆಮಾಡಿದ ಗ್ರಾಮಗಳಿಗೆ ವಕೀಲರು ಹಾಗೂ ಅರೆಕಾಲಿಕ ಸ್ವಯಂ ಸೇವಕರು ತೆರಳಿ ಮಾಹಿತಿಗಳನ್ನು ಕ್ರೋಢೀಕರಿಸಿ ರಾಜ್ಯ ಕಾನೂನು ಪ್ರಾಧಿಕಾರಕ್ಕೆ ನೀಡಲಾಗುವುದು. ರಾಜ್ಯಗಳ ಮಾಹಿತಿಯನ್ನು ಕ್ರೋಢೀಕರಿಸಿ ಕೇಂದ್ರ ಪ್ರಾಧಿಕಾರಕ್ಕೆ ಕಳುಹಿಸಲಾಗುವುದು. ಎಂದು ನ್ಯಾಯಾದೀಶ ಎನ್ ಶ್ರೀಪಾದ. ತಿಳಿಸಿದರು.
ಸಭೆಯಲ್ಲಿ ನ. 2 ಮತ್ತು 3 ರಂದು ತಾಲ್ಲೂಕಿನಲ್ಲಿ ಜಾಗೃತಿ ಅಭಿಯಾನದ ಕಾರ್ಯ ಯೋಜನೆಯನ್ನು ರೂಪಿಸಲಾಯಿತು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎನ್.ಕೆ.ಭಾಗ್ವತ್, ಕಾರ್ಯದರ್ಶಿ ಪ್ರಕಾಶ ಭಟ್ಟ,. ಎಪಿಪಿ ಆನಂದ ಕೊಣ್ಣುರ್, ಶಿಕ್ಷಣ ಇಲಾಖೆಯ ಸುದಾಕರ್ ನಾಯ್ಕ, ಸಂಜೀವ್ ಹೊಸ್ಕೇರಿ, ಶ್ರೀದರ ಮಡಿವಾಳ್, ಡಾ. ಡಿ.ಕೆ.ಭಟ್ಟ, ವಕೀಲರಾದ ಕೆ.ಎನ್.ಹೆಗಡೆ, ವಿ.ಟಿ.ಭಟ್ಟ, ಕಂದಾಯ ಇಲಾಖೆಯ ಶ್ಯಾವಿ, ಸಿಡಿಪಿಓ ಕಚೇರಿಯ ಮೇಲ್ವಿಚಾರಕಿ ವೀರವ್ವ ಪೂಜಾರ್, ಮೊದಲಾದವರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here