ಕಾನೂನು ಸಾಕ್ಷರತಾ ಅಭಿಯಾನಕ್ಕೆ ಚಾಲನೆ

0
12

 

ಮುಂಡಗೋಡ: ಮುಂಡಗೋಡ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಾಲ್ಕು ದಿನಗಳ ಕಾನೂನು ಸಾಕ್ಷರತಾ ಅಭಿಯಾನಕ್ಕೆ ಮುಂಡಗೋಡ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಈರನಗೌಡ ಕಬ್ಬೂರ ಗುರುವಾರ ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ, ತಾಲೂಕು ಕಾನೂನು ಸೇವಾ ಸಮಿತಿ ಮುಂಡಗೋಡ, ವಕೀಲರ ಸಂಘ ಮುಂಡಗೋಡ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪೆÇಲೀಸ್ ಇಲಾಖÉ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯತ, ಪಟ್ಟಣ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮತ್ತು ಪದವಿ ಪÇರ್ವ ಕಾಲೇಜುಗಳು ಮುಂಡಗೋಡ ಹಾಗೂ ವಿವಿದs ಸರ್ಕಾರಿ ಇಲಾಖೆಗಳು ಮತ್ತು ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ದಿನಾಂಕಃ ಮೇ ೨ ರಿಂದ ಮೇ ೫ ರ ವರೆಗೆ ನಾಲ್ಕು ದಿನಗಳ ಕಾಲ ಮುಂಡಗೋಡ ಮತ್ತು ಮುಂಡಗೋಡ ತಾಲೂಕಿನಾದ್ಯಂತ ಸಂಚಾರಿ ಜನತಾ ನ್ಯಾಯಾಲಯ ಮತ್ತು ಕಾನೂನು ಸಾಕ್ಷರತಾ ರಥದ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮುಂಡಗೋಡ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಈರನಗೌಡ ಕಬ್ಬೂರ ಹಸಿರು ನಿಶಾನೆ ತೋರಿಸುವ ಮೂಲಕ ಸಂಚಾರಿ ರಥಕ್ಕೆ ಚಾಲನೆ ನೀಡಿ ಮಾತನಾಡಿ, ನಾಲ್ಕು ದಿನಗಳ ಕಾಲ ಮುಂಡಗೋಡ ಮತ್ತು ಮುಂಡಗೋಡ ತಾಲೂಕಿನಾದ್ಯಂತ ಸಂಚಾರಿ ಜನತಾ ನ್ಯಾಯಾಲಯ ಮತ್ತು ಕಾನೂನು ಸಾಕ್ಷರತಾ ರಥ ಸಂಚರಿಸುವುದು. ಹಳ್ಳಿಗಳಲ್ಲಿ ಕಾನೂನು ಕಾರ್ಯಕ್ರಮಗಳನ್ನು ನಡೆಸಲಾಗುವುದು. ಕಾನೂನು ಸಂಚಾರಿ ರಥದ ಮುಖ್ಯ ಉದ್ದೆÃಶ ಹಳ್ಳಿ-ಹಳ್ಳಿಗೆ ತೆರಳಿ ಸಾಮಾನ್ಯ, ಗ್ರಾಮೀಣ ಜನರಿಗೆ ಕಾನೂನಿನ ಮಹತ್ವ ಮತ್ತು ಕಾನೂನಿನ ಅರಿವು ಮೂಡಿಸುವುದು. ಜನತಾ ನ್ಯಾಯಾಲಯದ ಕುರಿತು ಜನರಿಗೆ ತಿಳಿಸುವುದು. ದಿನನಿತ್ಯದ ಬದುಕಿನಲ್ಲಿ ನಡೆಯುವಂತಹ ಸಾಮಾನ್ಯ ಕಾನೂನುಗಳ ಬಗ್ಗೆ ತಿಳಿಸಿಕೊಡುವುದು. ಹಮ್ಮಿಕೊಂಡಂತಹ ಕಾನೂನು ಸಾಕ್ಷರತಾ ರಥದ ಕಾರ್ಯಕ್ರಮಗಳ ಪ್ರಯೋಜನ ಹೆಚ್ಚಾಗಿ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ನ್ಯಾಯಾಧೀಶರು ಕರೆ ನೀಡಿದರು.
ವಕೀಲರ ಸಂಘದ ಅದs್ಯಕ್ಷ ಜಿ. ಎಸ್. ಕಾತೂರ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ ಕಟ್ಟಿಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಎಚ್. ಬಿ. ಬೈಲಪತ್ತಾರ, ಮುಂಡಗೋಡ ಆರಕ್ಷಕ ವೃತ್ತ ನಿರೀಕ್ಷಕ ಶಿವಾನಂದ ಚಲವಾದಿ, ತಹಸೀಲ್ದಾರ ಶಂಕರ ಗೌಡಿ, ಕ್ಷೆÃತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಎಸ್. ಪಟ್ಟಣಶೆಟ್ಟಿ, ಹಿರಿಯ ವಕೀಲ ಎಸ್. ಪಿ. ಸಮ್ಮಸಗಿ, ಕೆ. ಎನ್. ಹೆಗಡೆ, ಬಿ. ಎಫ್. ಪÇಜಾರ, ರಾಘವೇಂದ್ರ ಮಳಗಿಕರ, ಮುಂಡಗೋಡ ವಲಯ ಅರಣ್ಯಾಧಿಕಾರಿ ಸುರೇಶ ಕಲ್ಲೊಳ್ಳಿ ಸರ್ಕಾರಿ ಇಲಾಖಾ ಅಧಿಕಾರಿಗಳು ಹಾಗೂ ನ್ಯಾಯಾಲಯದ ಹಿರಿಯ ಕಿರಿಯ ನ್ಯಾಯವಾದಿಗಳು ಉದ್ಟಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

loading...