ಕಾನೂನು ಸಾಕ್ಷರತಾ ಕಾನೂನು ಅಭಿಯಾನ

0
13

 

ಮುಂಡಗೋಡ: ತಾಲೂಕಿನಾದ್ಯಂತ ನಾಲ್ಕು ದಿನಗಳ ಕಾನೂನು ಸಾಕ್ಷರತಾ ಕಾನೂನು ಅಭಿಯಾನದ ಮೂರನೇ ದಿನದ ಕಾರ್ಯಕ್ರಮ ಮುಂಡಗೋಡ ತಹಶೀಲ್ದಾರ ಕಛೇರಿ ಮತ್ತು ಇಂದೂರ ಗ್ರಾಮದಲ್ಲಿ ಶನಿವಾರ ನಡೆಯಿತು. ಮುಂಡಗೋಡ ಸಿವಿಲ್ ನ್ಯಾಯಾಲಯದ ನ್ಯಾಯಾದೀಶ ಈರನಗೌಡ ಕಬ್ಬೂರ ಉದ್ಘಾಟಿಸಿ ಮಾತನಾಡಿ, ಜನರಿಗೆ ಕಾನೂನು ಅರಿವು ನೀಡುವುದರ ಜೊತೆಗೆ ಕಾನೂನು ಸೇವಾ ಸಮಿತಿಯಿಂದ ಉಚಿತವಾಗಿ ನೆರವನ್ನು ಕೂಡಾ ನೀಡುವ ವ್ಯವಸ್ಥೆ ಮಾಡಲಾಗಿದೆ.
ಆದರೆ ಜನರಿಗೆ ಇದರ ಕುರಿತು ಮಾಹಿತಿ ಇರುವುದಿಲ್ಲ. ಈಂತಹ ಕಾರ್ಯಕ್ರಮದ ಮೂಲಕ ಕಾನೂನಿನ ಕುರಿತು ಕಾನೂನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಮಾಜದ ಕಟ್ಟ ಕಡೆಯ ಪ್ರಜೆಗೂ ಕಾನೂನಿನ ಅರಿವು-ನೆರವು ನೀಡಬೇಕೆಂದು ಹಳ್ಳಿ-ಹಳ್ಳಿಗಳಲ್ಲಿ ಕಾನೂನು ಸಾಕ್ಷರತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನನ ಮರಣ, ಮೋಟಾರು ವಾಹನ ಕಾಯ್ದೆ, ಮಾಹಿತಿ ಹಕ್ಕು ಅಧೀನಿಯಮ ಕಾಯ್ದೆ, ಹೀಗೆ ಹಲವಾರು ದಿನನಿತ್ಯದ ಸಾಮಾನ್ಯ ಕಾನೂನುಗಳ ಕುರಿತು ಸಾರ್ವಜನಿಕರಿಗೆ ತಿಳಿಸಿದರು. ಇದರ ಪ್ರಯೋಜನ ಸಾರ್ವಜನಿಕರು ಪಡೆದುಕೊಂಡಾಗ ಮಾತ್ರ ನಾವು ಹಮ್ಮಿಕೊಂಡಂತಹ ಕಾನೂನು ಅರಿವು-ನೆರವು ಕಾರ್ಯಕ್ರಮಗಳು ಯಶಸ್ವಿಯಾಗುವುದು ಎಂದು ಹೇಳಿದರು. ನ್ಯಾಯವಾದಿ ರಾಘವೇಂದ್ರ ಮಳಗಿಕರ ಸಂಚಾರಿ ಜನತಾ ನ್ಯಾಯಾಲಯ ಮತ್ತು ಕಾನೂನು ಸಾಕ್ಷರತಾ ರಥದ ಕಾರ್ಯಕ್ರಮದ ಕುರಿತು ಮಾತನಾಡಿ, ಪೆÇಸ್ಕೊÃ ಕಾಯ್ದೆ ಮತ್ತು ಬಾಲ್ಯ ವಿವಾಹ, ಕುರಿತು ಜನರಿಗೆ ತಮ್ಮ ಉಪನ್ಯಾನ್ಯಾಸದಲ್ಲಿ ಸಂಕ್ಷಿÃಪ್ತವಾಗಿ ತಿಳಿಸಿದರು. ಸಾರ್ವಜನಿಕರು ತಮ್ಮ ದಿನ ನಿತ್ಯದ ಬದುಕಿನಲ್ಲಿ ಬರುವಂತಹ ಸಾಮಾನ್ಯ ಕಾನೂನುಗಳನ್ನು ಪಾಲಿಸಿ ಸುಖಿ ಜೀವನ ನಡೆಸಲಿ ಎಂದು ತಿಳಿಸಿದರು. ಮುಂಡಗೋಡ ವಲಯ ಅರಣ್ಯಾಧಿಕಾರಿ ಸುರೇಶ ಕುಲ್ಲೊಳ್ಳಿ, ತಹಸೀಲ್ದಾರ ಶಂಕರ ಗೌಡಿ.

ಇಂದೂರ ಗ್ರಾ.ಪಂ ಉಪಾಧ್ಯಕ್ಷ ಬಿಸ್ಟನಗೌಡ ಪಾಟೀಲ, ನ್ಯಾಯವಾದಿ ಎಂ. ಎ. ನಂದಿಕಟ್ಟಿ, ಬಸವರಾಜ ಪÇಜಾರ, ಎಂ. ಎಚ್. ವಾರದ ಬಿ. ಕೆ. ಪಾಟೀಲ್, ಬಸವರಾಜ ಹರಿಜನ, ಅಜ್ಜಯ್ಯ ಶಿವಜೋಗಿಮಠ, ರಮೇಶ ಬಂಕಾಪÅರ, ಜಿ. ಆರ್. ಆಲದಕಟ್ಟಿ, ಆರ್. ಸಿ. ಮಳೇಕರ್, ಹಾಗೂ ಕಂದಾಯ ನೀರಿಕ್ಷಕರು, ಕಂದಾಯ ಇಲಾಖಾ ಸಿಬ್ಬಂದಿಗಳು, ಅರಣ್ಯ ಇಲಾಖಾ ಸಿಬ್ಬಂದಿಗಳು, ಶಿಕ್ಷಣ ಇಲಾಖೆ ಸಿಬ್ಬಂದಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆರ್ ಎಸ್ ಹಂಚಿನಮನಿ ಸ್ವಾಗತಿಸಿ ನಿರೂಪಣೆ ಮಾಡಿದರು ಗೂಡುಸಾಬ ಬಮ್ಮಿಕಟ್ಟಿ ವಂದಿಸಿದರು.

loading...