ಕಾನೂನು ಸಾಕ್ಷರತಾ ರಥದ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ

0
2

ಮುಂಡಗೋಡ: ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ, ಎಂಬಂತೆ ಕಾನೂನು ಬಲ್ಲವನಿಗೆ ತೊಂದರೆ ಬರುವುದಿಲ್ಲ. ಆದ್ದರಿಂದ ತಪÅ್ಪ ಮಾಡುವುದನ್ನು ಹಾಗೂ ತಪÅ್ಪ ನಡೆಯುತ್ತಿದರೆ ಅದನ್ನು ಖಂಡಿಸುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಂಡಗೋಡ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಈರನಗೌಡ ಕಬ್ಬೂರ ಹೇಳಿದರು ಗುರುವಾರ ತಾಲೂಕಿನ ಪಾಳಾ ಗ್ರಾಮದಲ್ಲಿ ನಾಲ್ಕು ದಿನಗಳ ಮುಂಡಗೋಡ ತಾಲೂಕಿನಾದ್ಯಂತ ಸಂಚಾರಿ ಜನತಾ ನ್ಯಾಯಾಲಯ ಮತ್ತು ಕಾನೂನು ಸಾಕ್ಷರತಾ ರಥದ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಳ್ಳಿಯ ಜನರಿಗೆ ನ್ಯಾಯಾಲಯ ಅಂದರೆ ¨Àsಯ ಹಾಗೂ ಕಾನೂನಿನ ಕುರಿತು ತಪÅ್ಪ ಕಲ್ಪನೆ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರು ತಮ್ಮ ದಿನ ನಿತ್ಯದ ಜೀವನದಲ್ಲಿ ಸಂ¨Àsವಿಸುವಂತಹ ಸಾಮಾನ್ಯ ಕಾನೂನುಗಳ ಬಗ್ಗೆ ತಿಳಿದುಕೊಂಡಿರಬೇಕು. ಜನನ-ಮರಣ ಪ್ರಮಾಣ ನೊಂದಣô, ಮೋಟಾರು ವಾಹನ ಕಾಯ್ಧೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಉದ್ದೆÃಶದ ಕುರಿತು ಸಾರ್ವಜನಿಕರಿಗೆ ತಿಳಿಸಿದರು. ಸಮಾಜದ ಪ್ರತಿಯೊಬ್ಬ ಪ್ರಜೆಗೂ ಕಾನೂನಿನ ತಿಳುವಳಿಕೆ ಮೂಡಿಸುವುದು ಕಾನೂನು ಸೇವಾ ಸಮಿತಿಯ ಮುಖ್ಯ ಉದ್ದೆÃಶವಾಗಿದೆ, ನಾವು ಕಾನೂನನ್ನು ಕಾಪಾಡಿದರೆ ಕಾನೂನು ನಮ್ಮನ್ನು ಕಾಪಾಡುತ್ತದೆ ಎಲ್ಲರೂ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು ಸುಖಿ ಜೀವನ ನಡೆಸಿ ಎಂದು ನ್ಯಾಯಾಧೀಶರು ಕರೆ ನೀಡಿದರು. ಪಾಳಾ ಗ್ರಾ.ಪಂ ಅಧ್ಯಕ್ಷ ಮಕಬೂಲ್‌ಅಹ್ಮದ ಡೊಳ್ಳೆÃಶ್ವರ ಮಾತನಾಡಿ ಇಂತಹ ಕಾನೂನು ಜಾಗೃತಿ ಕಾರ್ಯಕ್ರಮಗಳು ಹೆಚ್ಚೆಚ್ಚು ಹಳ್ಳಿಗಳಲ್ಲಿ ನಡೆದರೆ ಅನಕ್ಷರಸ್ಥರಿಗೂ ಕಾನೂನಿನ ಬಗ್ಗೆ ಅರಿವು ಮೂಡಿ ತಪÅ್ಪಗಳು ಸಂ¨Àsವಿಸುವುದು ಕಡಿಮೆಯಾಗತ್ತವೆ ಎಂದರು. ಉಪ ವಲಯ ಅರಣ್ಯಾಧಿಕಾರಿ ಶ್ರಿà ಶ್ರಿÃಶೈಲ ಐನಾಪುರ, ವಕೀಲರ ಸಂಘದ ಅದs್ಯಕ್ಷ ಜಿ ಎಸ್ ಕಾತೂರ, ರಾಘವೇಂದ್ರ ಮಳಗಿಕರ, ಮಹೇಶ ಹೀರಾಬಾಯಿ, ಎ ಎ ಶಿವಜೋಗಿಮಠ, ಗೂಡುಸಾಬ ಬಮ್ಮಿಗಟ್ಟಿ, ಜ್ಯೊÃತಿ ತಲ್ಲೂರ ಉಪಸ್ದಿತರಿದ್ದರು. ಹಾಗೂ ಗ್ರಾಮ ಪಂಚಾಯತ ಪಿಡಿಓ, ಗ್ರಾಮ ಪಂಚಾಯತ ಉಪಾದs್ಯಕ್ಷರು, ಗ್ರಾಮ ಪಂಚಾಯತ ಸದಸ್ಯರು ಮತ್ತು ಊರ ನಾಗರಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆರ್ ಎಸ್ ಹಂಚಿನಮನಿ, ನಿರೂಪಿಸಿದರು. ಜಿ ಆರ್ ಆಲದಕಟ್ಟಿ ವಂದಿಸಿದರು.

loading...