ಕಾಮಗಾರಿ ಎಸ್ಟಿಮೇಟ್ ತೋರಿಸಿ ಕಾಮಗಾರಿ ಪ್ರಾರಂಭಿಸಿ

0
44

ಗುಳೇದಗುಡ್ಡ; ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿ ಯೋಜನೆಯಡಿ ನಗರದÀ ಬಾಗವಾನ ಪೇಟೆಯಲ್ಲಿ ನಿರ್ಮಿಸುತ್ತಿರುವ ಕಾಂಕ್ಟಿçÃಟ್ ರಸ್ತೆ ಕಾಮಗಾರಿ ಎಸ್ಟಿÃಮೆಟ್ ಪ್ರಕಾರ ನಡೆಯಬೇಕು. ಕಾಮಗಾರಿ ಪ್ರಾರಂಭಮಾಡುವಾಗ ಕಾಮಗಾರಿಯ ಎಸ್ಟಿಮೇಟ್ ಸ್ಥಳೀಯರಿಗೆ ತೋರಿಸಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಪುರಸಭೆ ಸದಸ್ಯ ರಫೀಕ್ ಕಲ್ಬುರ್ಗಿ ಒತ್ತಾಯಿಸಿದರು.
ಅವರು ಇಲ್ಲಿನ ಬಾಗವಾನ ಪೇಟೆಯಲ್ಲಿ ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿ ಯೋಜನೆಯಡಿ ಅಂದಾಜು ೨೨ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಾಂಕ್ಟಿçÃಟ್ ರಸ್ತೆಯ ಎಸ್ಟಿಮೇಟ್ ಇಲ್ಲದೇ ಕಾಮಗಾರಿ ಕೈಗೊಳ್ಳುತ್ತಿರುವುದನ್ನು ಸ್ಥಳೀಯ ಪುರಸಭೆ ಸದಸ್ಯ ಹಾಗೂ ಅಲ್ಲಿನ ನಿವಾಸಿಗಳು ರವಿವಾರ ತಡೆ ಹಿಡಿದು, ಕಾಮಗಾರಿಯ ಎಸ್ಟಿಮೇಟ್ ತೋರಿಸಿ, ಅದರಂತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಹಾಗೂ ರಸ್ತೆಯಲ್ಲಿ ನೀರು ನಿಲ್ಲದಂತೆ ಕಾಮಗಾರಿ ಆಗಬೇಕು. ಒಳಚರಂಡಿ ಮ್ಯಾನ್‌ಹೋಲ್ ಮೇಲಕ್ಕೆ ಎತ್ತರಿಸಬೇಕು. ಅಲ್ಲದೇ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಂಬಂಧಿಸಿದ ಇಂಜನೀಯರ್ ಹಾಗೂ ಥರ್ಡ್ ಪಾರ್ಟಿ ಉಪಸ್ಥಿತರಿರಬೇಕು. ಒಂದು ವೇಳೆ ಇವರು ಉಪಸ್ಥಿತರಿರದೇ ಇದ್ದಲ್ಲಿ ಕಾಮಾಗಾರಿಯನ್ನು ನಾವು ತಡೆಯುತ್ತೆÃವೆ ಎಂದು ಸ್ಥಳೀಯರಾದ ನಾಗೇಶ ಪಾಗಿ, ರಾಚಪ್ಪ ಪಾಗಿ, ಸಲೀಂ ಮೋಮಿನ್, ಮೈಬೂಬ ಸವರಾಜ, ರಾಜು ತಾಪಡಿಯಾ, ಮುತ್ತು ದೇವರಮನಿ, ಸಂಗಮೇಶ ಕೋಡುಬಳಿ, ಸಿದ್ದು ಕಲ್ಲೂರು, ಸುನೀಲ ಬೆಕಿನಾಳ, ಈರಣ್ಣ ಗಂಜಿಹಾಳ ಹೇಳಿದ್ದಾರೆ.

loading...