ಕಾರ್ನಾಡ್ ನಾಡಿನ ಕೀರ್ತಿ ಹೆಚ್ಚಿಸಿದವರು: ಬನ್ನಿ

0
7

ಗುಳೇದಗುಡ್ಡ: ಗಿರೀಶ್ ಕಾರ್ನಾಡ್ ಅವರು ಸಾಹಿತಿ, ರಂಗಭೂಮಿ ನಟ ನಿರ್ದೇಶಕರಾಗಿ, ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಹೀಗೆ ಹಲವು ರಂಗಗಳಲ್ಲಿ ರಾಜ್ಯ ಹಾಗೂ ರಾಷ್ಟç, ಅಂತರಾಷ್ಟಿÃಯ ಮಟ್ಟದಲ್ಲಿ ದೇಶ ಹಾಗೂ ನಾಡಿನ ಕೀರ್ತಿಯನ್ನು ಹೆಚ್ಚಿಸಿದವರು ಎಂದು ಹಿರಿಯ ಸಾಹಿತಿ ಮಲ್ಲಿಕಾರ್ಜುನ ಬನ್ನಿ ಹೇಳಿದರು.
ಅವರು ಸೊಮವಾರ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜನವಾಹಿನಿ ಅಟೋ ಮಾಲಕರ ಹಾಗೂ ಚಾಲಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ನಾಟಕಗಳನ್ನು ರಚಿಸಿ ಜ್ಞಾನಪೀಠ ಪ್ರಶಸ್ತಿಗೆ ಪುರಸ್ಕೃತರಾದವರಲ್ಲಿ ಗಿರೀಶ್ ಕಾರ್ನಾಡ್ ಅವರು ಮೊದಲಿಗರು. ಇವರು ರಚಿಸಿದ ಯಯಾತಿ, ತುಘಲಕ್, ಹಯವದನ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ನಾಗಮಂಡಲ ನಾಟಕಗಳು ಸಾಹಿತ್ಯ ಹಾಗೂ ರಂಗಭೂಮಿ ಕ್ಷೆÃತ್ರಕ್ಕೆ ಅಪಾರ ಕೊಡಿಗೆ ನೀಡಿವೆ ಎಂದರು.
ಕರವೇ ನಗರ ಅಧ್ಯಕ್ಷ ರವಿ ಅಂಗಡಿ ಮಾತನಾಡಿ, ಗಿರೀಶ್ ಕಾರ್ನಾಡ್ ಅವರು ರಚಿಸಿದ ನಾಗಮಂಡಲ ನಾಟಕ ಒಂದು ಜನಪದ ಕಥೆಯಾಗಿದ್ದು, ಅದು ಚಲನಚಿತ್ರವಾಗಿ ಭಾರಿ ಜನಪ್ರಿಯತೆ ಗಳಿಸಿತು ಎಂದರು.
ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಕೆ ಆರ್ ರಾಯಚೂರ, ಅಕ್ತರ್ ಹುಸೇನ ಅಫಘಾನ, ನಿಂಗಪ್ಪ ಎಣ್ಣಿ, ಡಿ.ಕೆ ಕುಲಕರ್ಣಿ, ಪ್ರಕಾಶ ಅಗಸಿಮನಿ, ಸಂಗಪ್ಪ ಚಟ್ಟೆÃರ, ಇಕ್ಬಾಲ ಪೆಂಡಾರಿ, ಸಂಗಯ್ಯ ಹಿರೇಮಠ, ರಶೀದ ರಾಯಚೂರ, ಜಾಪರ ಬನ್ನೂರಿ, ಅಬುಬಕರ ಪೆಂಡಾರಿ, ಸಂತೋಷ ಮಾಳಗಿ, ಪ್ರಕಾಶ ಬಡಿಗೇರ ಹಾಗೂ ಜನವಾಹಿನಿ ಅಟೋ ಮಾಲಕರ ಹಾಗೂ ಚಾಲಕರ ಸಂಘದ ಪದಾಧಿಕಾರಿಗಳು ಇದ್ದರು.
ತುಂಬಲಾರದ ನಷ್ಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಾಟಕಕಾರ, ಚಿಂತಕ, ನಟ, ನಿರ್ದೇಶಕ ಗಿರೀಶ ಕಾರ್ನಾಡ ಅವರು ಕನ್ನಡ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದವರು. ಅವರ ಅಗಲಿಕೆ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಇಲ್ಲಿನ ಸಾಹಿತಿ ಡಾ.ರಾಜಶೇಖರ ಬಸುಪಟ್ಟದ ಸಂತಾಪ ವ್ಯಕ್ತಪಡಿಸಿದ್ದಾರೆ.

loading...