ಕಾರ ಹುಣ್ಣಿಮೆಗೆ ಅದ್ಧೂರಿ ಸಿದ್ದತೆ

0
66

ನಿಡಗುಂದಿ : 12 ಕಾರ ಹುಣ್ಣಿಮೇ ಸಮೀಪಿಸುತ್ತಿದ್ದಂತೆ ಮಕ್ಕಳು ಗಾಳಿ ಪಟ ಸೇರಿದಂತೆ ನಾನಾ ಆಟಗಳಿಗೆ ತಯಾರಿ ನಡೆಸುತ್ತಿದ್ದರೆ ಇತ್ತ ರೈತರು ತಮ್ಮ ಪ್ರೀತಿ ಪಾತ್ರವಾದ ಜಾನುವಾರಗಳನ್ನು ಸಿಂಗರಿಸಿ ಹಬ್ಬದ ಆಚರಣೆಗೆ ಈಗಾಗಲೇ ಭರ್ಜರಿ ಸಿದ್ದತೆ ನಡೆಸಿದ್ದಾರೆ.
ಗ್ರಾಮೀಣ ಭಾಗದ ರೈತಾಪಿ ಜನ ಯಾವಾಗಲೂ ತಮ್ಮ ರಾಸುಗಳಲ್ಲಿ ದೇವರನ್ನೇ ಕಾಣುತ್ತಿದ್ದ ಇಂತಹ ದೈವ ಸ್ವರೂಪಿ ರಾಸುಗಳಿಗೆ ವರ್ಷದಲ್ಲಿ ಎರಡು ಬಾರಿ ಅದ್ದೂರಿಯಾಗಿ ಸಿಂಗರಿಸಿ ಪೂಜಿಸುತ್ತಾರೆ ಅದರಲ್ಲಿ ಕಾರ ಹುಣ್ಣಿಮೆ ಒಂದಾಗಿದೆ.
ಕಾರ ಹುಣ್ಣಿಮೆ ಬಿಸಿ ಬೇಸಿಗೆ ಕಳೆದು ಮುಂಗಾರು ಹೊಸ್ತಲಿಗೆ ತಂದ ಹಬ್ಬ. ಗ್ರಾಮೀಣ ಭಾಗದಲ್ಲಿ ರೈತರ ಬೆನ್ನೆಲುಬು ಎತ್ತುಗಳು. ಆ ಎತ್ತುಗಳಿಗೆ ಒಟ್ಟು ಎರಡು ಬಾರಿ ಪೂಜೆ ಸಲ್ಲಿಸಲಾಗುತ್ತದೆ. ಒಂದು ಕಾರ ಹುಣ್ಣಿಮೆ ಇನ್ನೊಂದು ಮಣ್ಣೆತ್ತಿನ ಅಮವಾಸ್ಯೆ.ಕಾರ ಹುಣ್ಣಿಮೆಯಿಂದ ಹಬ್ಬಗಳ ಸರಮಾಲೆ ಆರಂಭಗೊಳ್ಳುತ್ತವೆ.
ಗಾಳಿಯ ಭರದಲ್ಲಿ ಚಿಣ್ಣರು ಗಾಳಿಪಟ ಹಾರಿಸುವತ್ತ ಗಮನ ನೀಡುತ್ತಿದ್ದರೆ, ರೈತರು ತಮ್ಮ ಮೊದಲ ಹಬ್ಬ ಕಾರಹುಣ್ಣಿಮೆ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ರೈತರು ತಮ್ಮ ಎತ್ತುಗಳ ಅಲಂಕಾರಕ್ಕೆ, ಅಗತ್ಯಕ್ಕೆ ಬೇಕಾದ ಹಗ್ಗ, ಕನ್ನಿ, ಗೊಂಡಿ, ತುರಾಯಿ, ಗೆಜ್ಜೆ, ಕೋರಮಂಜಿ, ಅನಿಕಟ್ಟು, ಮೂಗದಾನಿ ಹಗ್ಗ, ಮಗಡ, ಗಾಜಮಣಿ, ಮಿಂಚು, ಬಣ್ಣ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ.
ಕಳೆದ ಬಾರಿ ಕಬ್ಬು ಬೆಳೆ ಚೆನ್ನಾಗಿ ಬಂದಿದೆ, ಹೀಗಾಗಿ ಜೋರಾಗಿ ಕಾರಹುಣ್ಣಿಮೆ ಆಚರಣೆ ಮಾಡಲು ನಿರ್ಧರಿಸಿದ್ದೇನೆಂದು ಹಲವು ರೈತಾಪಿ ಜನ ಅಭಿಪ್ರಾಯಪಡುತ್ತಾರೆ.
ಆದರೆ ಎತ್ತುಗಳ ಸಲಕರಣೆ ಮಾಡುವವರ ವಾದವೇ ಬೇರೆ, ಸಾಕಷ್ಟು ವ್ಯಾಪಾರ ಇಲ್ಲ, ಹೀಗಾಗಿ ಅತ್ಯಂತ ಕಡಿಮಿ ಬೆಲೆಗೆ ಎತ್ತುಗಳ ಸಲಕರಣೆಗಳನ್ನು ಮಾರುತ್ತಿದ್ದರೂ ರೈತರು ಹೆಚ್ಚು ಆಸಕ್ತಿಯಿಂದ ಖರೀದಿ ಮಾಡುತ್ತಿಲ್ಲ ಎಂದು ವ್ಯಾಪಾರಸ್ಥರು ನಿರಾಶೆಯ ಭಾವನೆ ವ್ಯಕ್ತಪಡಿಸುತ್ತಾರೆ.
ಋುತು ಬದಲಾವಣೆಯಾಗುತ್ತಿದ್ದು, ಮುಂಗಾರು ಮಳೆ ಪ್ರಾರಂಭವಾಗುತ್ತಿದೆ, ಮುಂಗಾರು ಮಳೆಯ ನಂತರ ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತವೆ, ಅದಕ್ಕಾಗಿ ರೈತನ ಬಲಗೈಯಂತಿರುವ ಎತ್ತುಗಳಿಗೆ ಈ ಕಾರಹುಣ್ಣಿಮೆ ಪೂರ್ವ ಸಿದ್ಧತೆ ಇದ್ದಂತೆ. ಇಲ್ಲಿಂದ ಎತ್ತುಗಳ ಚಟುವಟಿಕೆಗಳು ಪ್ರಾರಂಭಗೊಳ್ಳುತ್ತವೆ.
ಈ ಹಬ್ಬದ ನಂತರ ರೈತ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡುತ್ತಾನೆ.ಜೋಡೆತ್ತು, ಒಂಟೆತ್ತುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಓಡಲು ಕರಿ ಹರಿಯಲು ಬಿಡುತ್ತಾನೆ. ಕರಿ ಹರಿಯುವ ಎತ್ತುಗಳಿಂದಲೇ ಮುಂದಿನ ಬೆಳೆ, ಮಳೆಯ ಬಗ್ಗೆ ಭವಿಷ್ಯವನ್ನು ರೈತ ಊಹಿಸುತ್ತಾನೆ..! ಇದು ಅಚ್ಚರಿಯಾದರೂ ಸತ್ಯ.
ಎತ್ತುಗಳನ್ನು ಅಲಂಕಾರ ಮಾಡಿ ಅವುಗಳನ್ನು ಓಡಿಸಿ ಖುಷಿ ಪಡುವ ರೈತರಿಗೆ ಈ ಹಬ್ಬ ಸಂಭ್ರಮದ ಹಬ್ಬವಾಗಿದೆ.
ನಿಡಗುಂದಿ ಪಟ್ಟಣದ ಪ್ರಮುಖ ಬೀದಿಗಳಲ್ಲಿನ ಅಂಗಡಿಯಲ್ಲಿ ರೈತರು ಕಾರ ಹುಣ್ಣಿಮೆಯ ಅಂಗವಾಗಿ ಎತ್ತುಗಳ ಅಲಂಕಾರಿಕ ವಸ್ತುಗಳನ್ನು ಕರೀದಿಸುತ್ತಿರುವದು.

loading...

LEAVE A REPLY

Please enter your comment!
Please enter your name here