ಕಾಲ ಕೂಡಿ ಬಂದರೆ ನಾನು ಸಚಿವನಾಗುತ್ತೇನೆ: ಶಾಸಕ ಕುಮಠಳ್ಳಿ

0
21

 

ಬೆಳಗಾವಿ

ಅಥಣಿ ವಿಧಾನಸಭಾ ಚುನಾವಣೆಯಲ್ಲಿ ನನಗೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಮಾತು ನೀಡಿದ್ದರು.ಕಾಲ ಕೂಡಿ ಬಂದರೆ ನಾನು ಸಚಿವನಾಗುತ್ತೇನೆ ಎಂದು ಶಾಸಕ ಮಹೇಶ ಕುಮಠಳ್ಳಿ ವಿಶ್ವಾಸ ವ್ಯಕ್ತಪಡಿಸಿದರು.

ಬುಧವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಿಎಂ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಏಳು ಜನ ಶಾಸಕರನ್ನು ಸಚಿವರನ್ನಾಗಿ ಮಾಡುತ್ತಿದ್ದು ಸಂತೋಷವಾಗಿದೆ.

ಅಥಣಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತೋಡಗಿಕೊಂಡಿದ್ದೇವೆ. ನಾನು ಮಂತ್ರಿ ಮಾಡಿ ಎಂದು ಹೋಗಿಲ್ಲ. ಆದರೆ ಸಿಎಂ ಯಡಿಯೂರಪ್ಪನವರು ನಮಗೆ ಸಚಿವ ಸ್ಥಾನ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಅವರಿಗೆ ಯಾವುದೇ ತೊಂದರೆ ಇರಬಹುದು. ಅಲ್ಲದೆ ಙ್ನ ಕ್ಷೇತ್ರದ ವಿಷಯ ಕುರಿತು ಯಾವುದೇ ಕೆಲಸ ತೆಗೆದುಕೊಂಡು ಹೋದರೂ ಇತ್ಯರ್ಥ ಮಾಡುತ್ತಿದ್ದಾರೆ.

ಬಹುಶಃ ಸಿಎಂ ಯಡಿಯೂರಪ್ಪ ಅವರಿಗೆ ಸರಕಾರದ ರಚನೆ ಮಾಡಿದ ಎಲ್ಲ‌ ಶಾಸಕರಿಗೂ ಅಧಿಕಾರ‌ ನೀಡುವ ಭರವಸೆ ನೀಡಿದ್ದಾರೆ. ಕಾಲ ಕೂಡಿ ಬರುತ್ತಿಲ್ಲ. ಆದರೆ ಇದಕ್ಕೆ ಉತ್ತರ ಇಲ್ಲ ಎಂದರು.

ಮನುಷ್ಯನಿಗೆ ಆಸೆ, ನಿರೀಕ್ಷೆ ಇರುತ್ತದೆ. ಮುಂದೆ ನನಗೂ ಮಂತ್ರಿ ಸ್ಥಾನ ಸಿಗುವ ವಿಶ್ವಾಸ ಇದೆ. ಈಗ 12 ಜನರಲ್ಲಿ 11 ಜನರಿಗೆ ಮಂತ್ರಿ ಮಾಡಿದ್ದಾರೆ. ಅಲ್ಲದೆ ಉತ್ತರ ಕರ್ನಾಟಕದ ಅಥಣಿ ಕ್ಷೇತ್ರದ ಜನಪ್ರತಿನಿಧಿ ಡಿಸಿಎಂ ಆಗಿದ್ದಾರೆ ತುಂಬಾ ಸಂತೋಷದ ವಿಷಯ ಎಂದರು.

ಸಮಸ್ಯೆ ಇರುವುದು ನಮ್ಮಲ್ಲಿಯೂ ಉತ್ತರ ಇಲ್ಲ. ಅವರಲ್ಲಿಯೂ ಉತ್ತರ ಇಲ್ಲ. ಕಾಲ ಕೂಡಿ ಬಂದಾಗ ನಾನು ಮಂತ್ರಿಯಾಗುತ್ತೇನೆ ಎಂದು.

ಅಥಣಿಯಲ್ಲಿ ಸುಮಾರು ಕೆಲಸಗಳಿವೆ. ನಾನು ಕೆಲಸ ಮಾಡುವುದು ನಮ್ಮ ಕ್ಷೇತ್ರದ ಜನರಿಗೆ ತಿಳಿದಿದೆ. ಅಬಕಾರಿ ಸಚಿವ ಎಚ್. ನಾಗೇಶ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡುವುದಿಲ್ಲ ಎನ್ಜುವ ವಿಶ್ವಾಸ ಇದೆ. ಅವರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ನಮಗೆ ಯಾರಿಗೂ ಅನ್ಯಾಯವಾಗಿಲ್ಲ. ಬಿಜೆಪಿಯಲ್ಲಿರುವ ಎಲ್ಲರೂ ಒಂದೇ ಮೂಲ, ವಲಸೆ ಎಂದು ಏನೂ ಇಲ್ಲ. ಡಿ.ಕೆ.ಶಿವಕುಮಾರ ಅವರು ಏನೋ ಮನಸ್ಥಿತಿಗೆ ಬಂದ ಹಾಗೆ ಮಾತನಾಡಿದ್ದಾರೆ. ಒಂದು ಪಕ್ಷದಿಂದ ಬಂದು ಮತ್ತೊಂದು ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದರು.

loading...