ಕಾವೇರಿಳಿಳಿ ಕವನ ಸಂಕಲನ ಬಿಡುಗಡೆ

0
42

ಧಾರವಾಡ : ಧಾರವಾಡದಂತಹ ಕಾವ್ಯಪ್ರವಾಹದ ನಡುವೆಯೂ ಶಾಲ್ಮಲೆಯಂತೆ ಗುಪ್ತಗಾಮಿನಿಯಾಗಿ ಹರಿಯುವಂತೆ ಕವಿ. ವ್ಹಿ. ಸಿ. ಐರಸಂಗರು ತಮ್ಮದೇ ಆದ ರೀತಿಯಲ್ಲಿ ಸಮಭಾವದ ಕಾವ್ಯವನ್ನು ನೀಡಿ ಕಾವ್ಯ ಸಂಪತ್ತನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಅನಿಲ ದೇಸಾಯಿ ಹೇಳಿದರು. ಅವರು  ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಕವಿ. ವ್ಹಿ. ಸಿ. ಐರಸಂಗರ “ಕಾವೇರಿಳಿಳಿ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡುತ್ತಾ, ಸ್ವರ, ಲಯ, ಅಲಂಕಾರ ಹಾಗೂ ಚಂದಸ್ಸುಗಳ ಸುಂದರ ಬಂಧವುಳ್ಳ ಕವಿತೆಗಳನ್ನು ಕಟ್ಟುವಲ್ಲಿ ಐರಸಂಗರು ಶ್ರೇಷ್ಠರು, ಅಂತೆಯೇ ಅವರ ಕವಿತೆಗಳು ಮಕ್ಕಳ ಹಾಗೂ ಸಂಗೀತಗಾರರ ಬಾಯಲ್ಲಿ ಸುಶ್ರಾವ್ಯವಾಗಿ ಹರಿದು ಬರುತ್ತವೆ. ಐರಸಂಗರು ಹಲವು ಸಲ ನಿಸರ್ಗ ಮುಖಿಯಾಗಿ ಹಾಗೂ ಸಮಾಜ ಮುಖಿಯಾಗಿ ಕಾವ್ಯದ ಮೂಲಕ ಮಾತನಾಡುತ್ತಾರೆ. ಅದರಲ್ಲಿ ಸಾತ್ವಿಕ ಸಿಟ್ಟು, ಆತ್ಮಾವಲೋಕನದ ಅನುಭೂತಿ, ಸರಸದಿಂದ ವಿರಸವೂ ಕಾಣುತ್ತದೆ ಎಂದು ಐರಸಂಗರ ಕವಿತೆ ಕುರಿತು ವಿಶ್ಲೇಷಿಸಿದ ಅನಿಲ ದೇಸಾಯಿ ಎಲ್ಲವನ್ನೂ ಹಾಡಾಗಿಸುವ ಸಾಮರ್ಥ್ಯ ಅವರಲ್ಲಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಶಿವಾನಂದ ಗಾಳಿ, ಐರಸಂಗರ ಸಾಹಿತ್ಯದ ಸಮಗ್ರ ಗ್ರಂಥ ತರುವುದಾಗಿ ಪ್ರಕಟಿಸಿ, ಅವರ ಹಲವು ಕವಿತೆಗಳನ್ನು ಓದಿ ವಿಶ್ಲೇಷಿಸಿದರು.

ಬಿಡುಗಡೆಗೊಂಡ `ಕಾವೇರಿಳಿ ಕವನ ಸಂಕಲನದಲ್ಲಿಯ ಕೆಲವು ಆಯ್ದ ಕವಿತೆಗಳ ಹಾಡುಗಾರಿಕೆಯನ್ನು, ಶ್ರೀಮತಿ ಸುರೇಖಾ ಸುರೇಶ, ವಾಣಿ ಬಡಿಗೇರ, ಶುಭಾ ಗಂಭಿರ, ಭಾರ್ಗವಿ ಗುಡಿ, ಜಯಂತಿ ಕರಿ, ಎಸ್. ಕೆ. ನಾಡಗೌಡ ಇವರುಗಳು ಅತ್ಯಂತ ಸುಶ್ರಾವ್ಯವಾಗಿ ನಡೆಸಿಕೊಟ್ಟರು.

ಪ್ರಾಸ್ತಾವಿಕವಾಗಿ ಮೋಹನ ನಾಗಮ್ಮ ನವರ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಕಾರ್ಯಕ್ರಮ ನಡೆಸಿಕೊಟ್ಟರು. ಸುರೇಶ ಗೋವಿಂದರೆಡ್ಡಿ ವಂದಿಸಿದರು

loading...

LEAVE A REPLY

Please enter your comment!
Please enter your name here