ಕಾವೇರಿ ನದಿ ವಿವಾದದಲ್ಲಿನ ಸೋಲಿಗೆ ನಾರಿಮನ್ ಕಾರಣ

0
57

ನರಗುಂದ : ಕಾವೇರಿ ಹಾಗೂ ಮಹದಾಯಿ ನದಿ ನೀರಿನ ವಿಷಯದಲ್ಲಿ ಸರ್ಕಾರಗಳು ಎಡೆವಿವೆ. ರಾಜ್ಯ ಸರ್ಕಾರ ಕಾವೇರಿ ನದಿ ನೀರಿನ ವಿವಾದದಲ್ಲಿ ಸೆ. 12 ರಂದು ನಡೆದ ಸುಪ್ರೀಂ ಕೋರ್ಟ ನೇಮಿಸಿದ್ದ ನ್ಯಾಯಾಲಯದ ಪುನರ್ ಪರಿಶೀಲನಾ ಸಮಿತಿ ಸಭೆಯಲ್ಲಿ ಸೋಲಾಗಲು ಕಾರಣ ಪಾಲಿ ನಾರಿಮನ್ ಅವರೇ ಆಗಿದ್ದಾರೆ. ಪುನರ್ ಪರಿಶೀಲನಾ ಸಮಿತಿ ಎದಿರು ಭಾಷಾ ಹಾಗೂ ಪದಗಳ ಬಳಿಕೆ ಅರ್ಜಿಯಲ್ಲಿ ಸರಿಯಾಗಿಲ್ಲವೆಂದು ಸುಪ್ರೀಂ ಕೋರ್ಟ ನ್ಯಾಯಾಧೀಶರು ತಿಳಿಸಿದ್ದನ್ನು ನಾರಿಮನ್ ಅವರೇ ಒಪ್ಪಿಕೊಂಡಿದ್ದಾರಲ್ಲದೇ, ಸುಪ್ರೀಂ ಕೋಟ ಸೆ. 20 ರವರೆಗೆ 12 ಸಾವಿರ ಕೂಸೆಕ್ಸ ನೀರು ಹರಿಬಿಡುವಂತೆ ಆದೇಶಿಸಿದಾಗ ರಾಜ್ಯ ಪರ ವಕೀಲರು ಮೌನವಹಿಸಿದ್ದೇಕೆ ಎಂದು ರೈತ ಮುಖಂಡ ಮಂಜು ಕುರಿ ರಾಜ್ಯ ಸರ್ಕಾರದ ಪರ ವಾದಿಸಿದ ಪಾಲಿ ನಾರಿಮನ್ ಹಾಗೂ ಸರ್ಕಾರದ ಭಾವಣೆಗಳನ್ನು ರೈತ ಮುಖಂಡ ಮಂಜು ಕುರಿ ಟೀಕೆ ಮಾಡಿದರು.
ಮಹದಾಯಿ ಮಲಪ್ರಭೆ ನದಿಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ಮಂಗಳವಾರ ನಡೆದ ರೈತರ 426 ನೇ ದಿನದ ಧರಣಿಯಲ್ಲಿ ಮಾತನಾಡಿದ ಅವರು, ನಾರಿಮನ್ ಈ ಹಿಂದೆ ತಮೀಳುನಾಡಿನ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ. ಆ ರಾಜ್ಯದ ಹಿತಕಾಪಾಡಲು ಇವೆಲ್ಲ ಪ್ರಕ್ರಿಯೆಗಳನ್ನು ನಡೆಸಿದ್ದಾರೆಂದು ರಾಜ್ಯದ ರೈತರ ಬಲವಾದ ನಂಬಿಕೆಯಾಗಿದೆ. ಹೀಗಾಗಿ ನಾಡಿನ ರೈತರು ನೀರಿನ ಭವಣೆ ಇದ್ದರೂ ಇದನ್ನು ಸುಪ್ರೀಂ ಕೋರ್ಟ ಸರಿಯಾಗಿ ಪರಿಗಣಿಸಿಲ್ಲ. ಮಹದಾಯಿ ನಮ್ಮ ಪಾಲಿನ ನೀರನ್ನು ನಾವು ಪಡೆಯಲು ನಮಗೆ ಇದುವರೆಗೂ ಆಗಿಲ್ಲ. ನಮ್ಮ ರಾಜ್ಯದಲ್ಲಿ ಹರಿದುಹೋಗಿರುವ ಮಹದಾಯಿ ನದಿ ನೀರನ್ನು ಗೋವಾ ಸರ್ಕಾರ ಎಥೆಚ್ಚವಾಗಿ ಬಳಿಕೆಮಾಡುತ್ತಿದೆ. ಕಳೆದ 30 ವರ್ಷದಿಂದ ಉತ್ತರ ಕರ್ಣಾಟಕಕ್ಕೆ ಧಕ್ಕಬೇಕಾದ ನೀರನ ಪಾಲು ಇದುವರೆಗೂ ಮಹದಾಯಿಯಿಂದ ದೊರೆತಿಲ್ಲ. ಇದಕ್ಕೆಲ್ಲ ಗೋವಾ ಸರ್ಕಾರ ಕಾರಣ. ಇದುವರೆಗೂ ಹಾನಿಗೊಂಡ ಇಲ್ಲಿಯ ರೈತರಿಗೆ ಎಕರೆಗೆ 25 ಸಾವಿರೂ ಪರಿಹಾರ ನೀಡಲು ಸರ್ಕಾರಗಳು ಮುಂದಾಗಬೇಕು. ಈ ಹಿಂದಿನ ಯುಪಿಎ ಸರ್ಕಾರ ನ್ಯಾಯಮಂಡಳಿಗೆ ಮಹದಾಯಿ ನದಿ ನೀರಿನ ವಿವಾದ ಪರಿಹರಿಸಲು ರಚನೆ ಮಾಡಿದ್ದ ಫಲವಾಗಿ ಈ ಭಾಗದ ರೈತರು ನೀರಲ್ಲದೇ ತೊಂದರೆ ಅನುಭವಿಸಬೇಕಾಗಿದ್ದರಿಂದ ಹಾನಿಗೊಂಡ ರೈತರಿಗೆ ಪರಿಹಾರ ಒದಗಿಸಲೇಬೇಕೆಂದು ಆವರು ಆಗ್ರಹಿಸಿದರು.
ಮಹದಾಯಿ ಮಲಪ್ರಭೆ ನದಿ ಜೋಡಣೆ ಹೋರಾಟ ಸಮಿತಿ ಉಪಾಧ್ಯಕ್ಷ ಪರಶುರಾಮ ಜಂಬಗಿ ಮಾತನಾಡಿ, ನೀರು ಕೊಡಿ ಎಂದು ಕೇಳಿದ್ದಕ್ಕೆ ಜು. 28 ರ ಘಟಣೆಯಲ್ಲಿ ಅನೇಕ ಮಹಿಳೆಯರನ್ನು ರೈತರನ್ನು ಪೊಲೀಸರಿಂದ ಥಳಿಸಿ ರೈತರನ್ನು ಬಂಧಿಸಿ ಅವರ ಮೇಲೆ ಅನೇಕ ಕೇಸ್‍ಗಳನ್ನು ರಾಜ್ಯ ಸರ್ಕಾರ ದಾಖಲಿಸಿದೆ. ಈ ಕೇಸ್‍ಗಳನ್ನು ಸರ್ಕಾರ ಹಿಂತೆದುಕೊಳ್ಳಲು ಸಹ ನಿರ್ಲಕ್ಷಮಾಡಿದೆ. ಜನರ ಭಾವಣೆಗಳಿಗೆ ಸ್ಪಂಧಿಸಿ ಕೆಲಸ ನಿರ್ವಹಿಸಲು ರಾಜಕಾರಣಿಗಳು ನಿರ್ಲಕ್ಷಮಾಡಿದ್ದಾರೆ. ಪ್ರತ್ಯೇಕ ರಾಜ್ಯಕ್ಖಾಗಿ ಅನೇಕರು ವಾದ ಮಂಡಿಸುತ್ತಿದ್ದಾರೆ. ನಾವೆಲ್ಲ ಸ್ವಾತಂತ್ರ ಪಡೆಯಬೇಕಾದರೆ ಎಷ್ಡೊಂದು ತೊಂದರೆ ಅನುಭವಿಸಿದ್ದೇವೆ. ಆದರೆ ಅಖಂಡ ರಾಜ್ಯವಿರುವುದು ಸರಿಯಾಗಿದೆ. ಇದನ್ನು ಪ್ರತ್ಯೇಕವಾಗಿ ಮಾಡುವ ಅಗತ್ಯವಿಲ್ಲ. ರಾಜ್ಯದ ಮುಖ್ಯಮಂತ್ರಿಗಳು 7 ಬಾರಿ ಪತ್ರ ಬರೆದರೂ ಒಂದು ಮಾತನ್ನು ಮಹದಾಯಿ ನೀರಿನ ಬಗ್ಗೆ ಪ್ರಧಾನಿಗಳು ಆಡಿಲ್ಲವೆಂದಾದರೆ ಇದನ್ನೆ ನಾವು ಪ್ರಜಾಪ್ರಭುತ್ವ ಎಂದು ಕರೆಯಲಾದೀತೆ ಎಂದು ಅವರು ಪ್ರಶ್ನಿಸಿದರು.
ಮಹದಾಯಿ ಹಾಗೂ ಕಾವೇರಿ ನದಿ ನೀರಿನ ವಿವಾದ ಸರಿಯಾಗಿ ಇತ್ಯರ್ಥಗೊಳಿಸುವಲ್ಲಿ ವಿಫಲರಾದ ಶಾಸಕರು,ಸಂಸದರು,ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರು ತಕ್ಷಣ ರಾಜೀನಾಮೆ ನೀಡುವುದು ಒಳಿತು. ಇದಾಗದಿದ್ದರೆ ರಾಜ್ಯದ ರೈತರು ಒತ್ತಾಯಪೂರ್ವಕವಾಗಿ ಇವರನ್ನಲೆ ಧರಣಿ ನಡೆಸಿ ಕೆಳಗಿಳಿಸಬೇಕಾದೀತೆಂದು ಎಸ್.ಬಿ. ಜೋಗಣ್ಣವರ ಎಚ್ಚರಿಸಿದರು.
ಧರಣಿಯಲ್ಲಿ ಚಂದ್ರಗೌಡ ಪಾಟೀಲ, ಭೀಮಪ್ಪ ದಿವಟರ, ಜಗನಾಥ ಮುಧೋಳೆ, ವೆಂಕಪ್ಪ ಹುಜರತ್ತಿ, ಅನಸವ್ವ ಶಿಂಧೆ,ನಾಗರತ್ನಾ ಸವಳಬಾವಿ, ಬಸಮ್ಮ ಐನಾಪೂರ,ವೀರಬಸಪ್ಪ ಹೂಗಾರ, ಎಸ್.ಕೆ. ಗಿರಿಯಣ್ಣವರ, ಎಸ್.ಬಿ. ಕೊಣ್ಣೂರ, ವಾಸು ಚವ್ಹಾಣ, ವೀರಣ್ಣ ಸೊಪ್ಪಿನ, ಸಿದ್ದಪ್ಪ ಚಂದ್ರತ್ನವರ, ಸಾವಕ್ಕ ಪಾವರ್ತಿಯವರ, ಪುಂಡಲೀಕಪ್ಪ ಯಾದವ, ಚನ್ನಮ್ಮ ಕರ್ಜಗಿ, ಹನುಮಂತ ಕೋರಿ, ನಿಂಗಪ್ಪ ಬೆಳಗಲ್,ಬಸಪ್ಪ ಜಗಲಿ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.
13 ಎನ್‍ಆರ್‍ಡಿ-1 ಪೊಟೋ ಶಿರ್ಷಿಕೆ) ಮಹದಾಯಿ ಮಲಪ್ರಭೆ ನದಿಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ಮಂಗಳವಾರ ನಡೆದ 426 ನೇ ದಿನದ ಧರಣಿಯಲ್ಲಿ ರೈತ ಮುಖಂಡ ಮಂಜು ಕುರಿ ಮಾತನಾಡಿದರು.

loading...

LEAVE A REPLY

Please enter your comment!
Please enter your name here