ಕಾಶ್ಮೀರದಲ್ಲಿ  ರೈಲು ಸೇವೆ ಪುನಾರಂಭ

0
7

ಶ್ರೀನಗರ-ಪುಲ್ವಾಮ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿ ಹಿನ್ನೆಲೆಯಲ್ಲಿ ಭದ್ರತೆಯ ಕಾರಣಗಳಿಗಾಗಿ ಕಾಶ್ಮೀರ ಕಣಿವೆಯಲ್ಲಿ ಎರಡು ದಿನಗಳ ಕಾಲ ಸ್ಥಗಿತಗೊಂಡಿದ್ದ ರೈಲ್ವೆ ಸೇವೆ ಭಾನುವಾರ ಪುನಾರಂಭಗೊಂಡಿದೆ.
ಕಾಶ್ಮೀರ ಕಣಿವೆಯಲ್ಲಿ ಎಲ್ಲಾ ರೈಲು ಸೇವೆ ಆರಂಭಿಸುವಂತೆ ಕಳೆದ ರಾತ್ರಿ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸೇವೆ ಆರಂಭಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಯುಎನ್ಐಗೆ ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಬದ್ಗಾಮ್-ಶ್ರೀನಗರ-ಅನಂತ್‌ನಾಗ್-ಖಾಜಿಗುಂದ್‌ನಿಂದ ಜಮ್ಮು ಪ್ರಾಂತ್ಯದ ಬನಿಹಾಲ್‌ಗೆ ರೈಲು ಸೇವೆ ಆರಂಭಗೊಂಡಿದೆ. ಉತ್ತರ ಕಾಶ್ಮೀರದ ಶ್ರೀನಗರ-ಬದ್ಗಾಮ್-ಬಾರಾಮುಲ್ಲಾ ನಡುವೆಯೂ ರೈಲು ಸಂಚರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಯಾಣಿಕರು ಮತ್ತು ರೈಲ್ವೆ ಆಸ್ತಿಗಳ ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಅದರಲ್ಲೂ ವಿಶೇಷವಾಗಿ ಪೊಲೀಸರು ತೆಗೆದುಕೊಳ್ಳುವ ನಿರ್ಧಾರ ಮತ್ತು ಸಲಹೆಯಂತೆ ರೈಲ್ವೆ ಇಲಾಖೆ ಕಾರ್ಯನಿರ್ವಹಿಸುತ್ತದೆ. ಈ ಹಿಂದೆ ಮುಷ್ಕರ ಮತ್ತು ಪ್ರತಿಭಟನೆಯ ವೇಳೆ ರೈಲ್ವೆ ಇಲಾಖೆಯ ಆಸ್ತಿಗಳು ಸಾಕಷ್ಟು ಹಾನಿಗೊಳಗಾಗಿದ್ದವು.
ಕಡಿಮೆ ದರ, ಸುರಕ್ಷತೆ ಮತ್ತು ವೇಗದ ಪ್ರಯಾಣಕ್ಕೆ ಕಣಿವೆಯಲ್ಲಿ ರೈಲು ಸೇವೆ ಅತ್ಯಂತ ಜನಪ್ರಿಯತೆ ಪಡೆದಿದೆ.
ಪುಲ್ವಾಮ ಜಿಲ್ಲೆಯ ದಾದ್‌ಸಾರ್ ಟ್ರಾಲ್‌ ಎಂಬಲ್ಲಿ ಭದ್ರತಾ ಪಡೆ ನಡೆಸಿದ 12 ಗಂಟೆಗಳ ಕಾರ್ಯಾಚರಣೆಯ ವೇಳೆ ಅನ್ಸಾರ್ ಗಜ್ವತುಲ್ ಎಂಬ ಸಂಘಟನೆಯ ಉಗ್ರ ಜಾಕಿರ್ ಮೂಸಾ ಹಾಗೂ ಮತ್ತೊಬ್ಬ ಉಗ್ರ ಹತನಾಗಿದ್ದರು. ಶುಕ್ರವಾರ ಬೆಳಗ್ಗಿನ ಜಾವ ಕಾರ್ಯಾಚರಣೆ ಅಂತ್ಯಗೊಂಡಿತ್ತು.

loading...